ದೇವನಹಳ್ಳಿ : ವಿಶ್ವದ ಅತಿದೊಡ್ಡ ವಿಮಾನ ಏರ್ ಬಸ್ A380 ಇಂದು ದೇವನಹಳ್ಳಿಯ ವಿಮಾನವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು. ದೆಹಲಿ ಮತ್ತು ಮುಂಬೈ ನಂತರ ಬೆಂಗಳೂರಿಗೆ ಜಂಬೋಜೆಟ್ ಲ್ಯಾಂಡ್ ಆಗಿದೆ. ಕೆಐಎಎಲ್ಗೆ ಇದು ಐತಿಹಾಸಿಕ ಕ್ಷಣವಾಗಿದೆ.
ಎಮಿರೇಟ್ಸ್ ಏರ್ ಲೈನ್ಸ್ ವಿಮಾನ ಸಂಸ್ಥೆಯ ಏರ್ ಬಸ್ A380ಯ EK562 ವಿಮಾನ ದುಬೈನಿಂದ ಬೆಳಗ್ಗೆ 10 ಗಂಟೆಗೆ (ಸ್ಥಳೀಯ ಸಮಯ) ಟೇಕಾಫ್ ಆಗಿತ್ತು. ಬಳಿಕ ಮಧ್ಯಾಹ್ನ 3:40ಕ್ಕೆ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ವಿಮಾನ ನಿಲ್ದಾಣದ ಸಿಬ್ಬಂದಿ, ಇಂಜಿನಿಯರ್ಸ್ ಸಂಭ್ರಮದಿಂದ ಸ್ವಾಗತಿಸಿದರು.
A380 ಡಬಲ್ ಡೆಕ್ಕರ್ ವಿಮಾನವಾಗಿದ್ದು, 500ಕ್ಕಿಂತ ಹೆಚ್ಚು ಆಸನ ಸಾಮರ್ಥ್ಯ ಹೊಂದಿದೆ. ವಿಮಾನದಲ್ಲಿ ಫಸ್ಟ್ ಕ್ಲಾಸ್, ಎಕಾನಮಿ ಮತ್ತು ಬ್ಯೂಸಿನೆಸ್ ಟಿಕೆಟ್ ವ್ಯವಸ್ಥೆ ಇದೆ. ಎಕಾನಮಿ ಕ್ಲಾಸ್ ವಿಶಾಲವಾಗಿದ್ದು, ಹೆಚ್ಚುವರಿ ಲೆಗ್‌ರೂಮ್ ಹೊಂದಿದೆ. ಬಿಸಿನೆಸ್ ಕ್ಲಾಸ್ನಲ್ಲಿ ಸೀಟ್ ವ್ಯವಸ್ಥೆ ಮಾತ್ರ ಹೊಂದಿದೆ, ಫಸ್ಟ್ ಕ್ಲಾಸ್ನಲ್ಲಿ ಖಾಸಗಿ ಸೂಟ್‌ಗಳು ಮತ್ತು ಶವರ್ ಸ್ಪಾಗಳನ್ನು ಹೊಂದಿದೆ.
ಇದನ್ನೂ ಓದಿ: ಹುಬ್ಬಳ್ಳಿಯಿಂದ ದೆಹಲಿಗೆ ನವೆಂಬರ್14 ರಿಂದ ನೇರ ವಿಮಾನ ಸೇವೆ : ಪ್ರಹ್ಲಾದ್ ಜೋಶಿ