ETV Bharat / state

ಸಿಂಗೇನ ಅಗ್ರಹಾರಕ್ಕೆ ಕಲಾಸಿಪಾಳ್ಯ ಕೃಷಿ ತರಕಾರಿ ಮಾರುಕಟ್ಟೆ ಶಿಫ್ಟ್

ಬೆಂಗಳೂರಿನಲ್ಲಿ ಕೊರೊನಾ ಸೋಂಕು ಪ್ರಮಾಣ ಹೆಚ್ಚಾಗುತ್ತಿದೆ. ಪೊಲೀಸ್​ ಸಿಬ್ಬಂದಿಗೂ ಮಾರಕ ಖಾಯಿಲೆ ವಕ್ಕರಿಸುತ್ತಿದೆ. ಇದರಿಂದ ಕಲಾಸಿಪಾಳ್ಯದ ತರಕಾರಿ ಮಾರುಕಟ್ಟೆಯನ್ನು ಬೇರೆಡೆ ಸ್ಥಳಾಂತರಿಸಲು ಕೃಷಿ ಇಲಾಖೆ ಆದೇಶ ಹೊರಡಿಸಿದೆ.

author img

By

Published : Jun 21, 2020, 5:04 PM IST

dsdd
ಕಲಾಸಿಪಾಳ್ಯ ಕೃಷಿ ತರಕಾರಿ ಮಾರುಕಟ್ಟೆ ಶಿಫ್ಟ್​

ಬೆಂಗಳೂರು: ಕಲಾಸಿಪಾಳ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತರಕಾರಿ ಮಾರುಕಟ್ಟೆಯನ್ನು ಆನೇಕಲ್ ತಾಲೂಕಿನ ಸಿಂಗೇನ ಅಗ್ರಹಾರಕ್ಕೆ ಶಿಫ್ಟ್ ಮಾಡುವಂತೆ ಕೃಷಿ ಇಲಾಖೆ ಸೂಚಿಸಿದೆ.

ಮಾರ್ಚ್ ತಿಂಗಳಲ್ಲಿ ಸಿಂಗೇನ ಅಗ್ರಹಾರದಲ್ಲಿದ್ದ ಮಾರುಕಟ್ಟೆಯನ್ನು ವರ್ತಕರಿಗೆ ಅನುವಾಗುವ ದೃಷ್ಠಿಯಿಂದ ಜೂನ್ 10ಕ್ಕೆ ಕಲಾಸಿಪಾಳ್ಯಕ್ಕೆ ಸ್ಥಳಾಂತರಿಸಲಾಗಿತ್ತು. ಇದೀಗ ಪೊಲೀಸರು ಸೇರಿದಂತೆ ಕೆಲವರಿಗೆ ಕೊರೊನಾ ತಗುಲಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಇಲಾಖೆ ಈ‌ ಆದೇಶ ಹೊರಡಿಸಿದೆ.

ತಕ್ಷಣ ಸಿಂಗೇನ ಅಗ್ರಹಾರದ ಹಣ್ಣಿನ ಮಾರುಕಟ್ಟೆಗೆ ಹೊಂದಿಕೊಂಡಿರುವ ಸ್ಥಳಕ್ಕೆ ಮಾರುಕಟ್ಟೆಯನ್ನು ಸ್ಥಳಾಂತರ ಮಾಡುವಂತೆ ಎಪಿಎಂಸಿ ನಿರ್ದೇಶಕ‌ ಕರೀಗೌಡ ಆದೇಶಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.