ETV Bharat / state

ಇಸ್ರೋದಲ್ಲಿ ಟೆಕ್ನಿಷಿಯನ್​ ಬಿ ಹುದ್ದೆ ನೇಮಕಾತಿ; ಎಸ್​ಎಸ್​ಎಲ್​ಸಿ, ಐಟಿಐ ಓದಿದವರು ಅರ್ಜಿ ಸಲ್ಲಿಸಿ

ISRO recruitment: ಇಸ್ರೋದ ಮುಖ್ಯ ಕಚೇರಿಯಿರುವ ಬೆಂಗಳೂರು, ನಾಗ್ಪುರ, ಕೊಲ್ಕತ್ತಾ, ಜೋಧಪುರ ಮತ್ತು ನವದೆಹಲಿಯ ಐದು ಪ್ರಾದೇಶಿಕ ಕಚೇರಿಗಳಲ್ಲಿ ಈ ನೇಮಕಾತಿ ನಡೆಯಲಿದೆ.

author img

By ETV Bharat Karnataka Team

Published : Dec 13, 2023, 12:37 PM IST

Isro Job Notification For Technician b post

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದಲ್ಲಿ ಟೆಕ್ನಿಷಿಯನ್​ ಬಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಇಸ್ರೋದ ಮುಖ್ಯ ಕಚೇರಿಯಿರುವ ಬೆಂಗಳೂರು, ನಾಗ್ಪುರ, ಕೋಲ್ಕತ್ತಾ, ಜೋಧಪುರ ಮತ್ತು ನವದೆಹಲಿಯ ಐದು ಪ್ರಾದೇಶಿಕ ಕಚೇರಿಯಲ್ಲಿ ಈ ನೇಮಕಾತಿ ನಡೆಯಲಿದೆ. ಒಟ್ಟು 54 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಯಲ್ಲಿ ಆಸಕ್ತಿ ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದ್ದು, ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಅಧಿಕೃತ ಅಧಿಸೂಚನೆ
ಅಧಿಕೃತ ಅಧಿಸೂಚನೆ

ಹುದ್ದೆ ವಿವರ: ಇಸ್ರೋದಲ್ಲಿ ಅರ್ಜಿ ಆಹ್ವಾನಿಸಲಾಗಿರುವ 54 ಹುದ್ದೆಗಳ ಮಾಹಿತಿ ಹೀಗಿದೆ.

  • ಟೆಕ್ನಿಷಿಯನ್​ ಬಿ (ಎಲೆಕ್ಟ್ರಾನಿಕ್​ ಮೆಕಾನಿಕ್​​) - 33 ಹುದ್ದೆಗಳು
  • ಟೆಕ್ನಿಷಿಯನ್​ ಬಿ (ಎಲೆಕ್ಟ್ರಿಕಲ್​) - 8 ಹುದ್ದೆಗಳು
  • ಟೆಕ್ನಿಷಿಯನ್​ ಬಿ (ಇನ್ಸ್ಟ್ರುಮೆಂಟ ಮೆಕಾನಿಕ್​ ) - 9 ಹುದ್ದೆಗಳು
  • ಟೆಕ್ನಿಷಿಯನ್​ ಬಿ (ಫೋಟೋಗ್ರಫಿ) - 2 ಹುದ್ದೆಗಳು

ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ಮಂಡಳಿಗಳಿಂದ 10ನೇ ತರಗತಿ, ಐಟಿಐ, ಎನ್​ಟಿಸಿ, ಎನ್​ಎಸಿ ಉತ್ತೀರ್ಣತೆ ಹೊಂದಿರಬೇಕು.

ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ರಿಂದ ಗರಿಷ್ಠ 35 ವರ್ಷ ವಯೋಮಿತಿಯನ್ನು ಹೊಂದಿರಬೇಕು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಇದಕ್ಕೂ ಮುನ್ನ ಅಧಿಕೃತ ಅಧಿಸೂಚನೆ ಎಲ್ಲಾ ಸೂಚನೆಗಳನ್ನು ಪಾಲಿಸಬೇಕಿದೆ. ಈ ಹುದ್ದೆಗಳಿಗೆ ಎಲ್ಲಾ ಅಭ್ಯರ್ಥಿಗಳು ಪ್ರೊಸೆಸಿಂಗ್​ ಶುಲ್ಕ 500 ರೂ.ಯನ್ನು ಪಾವತಿಸುವುದು ಕಡ್ಡಾಯವಾಗಿದೆ. ಇದರ ಜೊತೆಗೆ ಅರ್ಜಿ ಶುಲ್ಕ 100 ರೂ. ಪಾವತಿ ಮಾಡಬೇಕಿದೆ. ಈ ಅರ್ಜಿ ಶುಲ್ಕ ಪ. ಜಾ, ಪ. ಪಂ, ವಿಕಲಚೇತನ, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು.

ಈ ಹುದ್ದೆಗೆ ಡಿಸೆಂಬರ್​ 9 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಡಿಸೆಂಬರ್​ 31 ಆಗಿದೆ.

ಈ ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಸೇರಿದಂತೆ ಇತರೆ ಮಾಹಿತಿಗೆ isro.gov.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ: ಬೆಸ್ಕಾಂ ನೇಮಕಾತಿ; 400 ಅಪ್ರೆಂಟಿಸ್​ ಹುದ್ದೆಗೆ ಅಧಿಸೂಚನೆ ಪ್ರಕಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.