ETV Bharat / state

ದೊಡ್ಡಬಳ್ಳಾಪುರ ಗಡಿಭಾಗದಲ್ಲಿ ಅಕ್ರಮ ಮರಳುಗಾರಿಕೆ: 'ದಂಧೆಗೆ ಪೊಲೀಸರ ಸಾಥ್‌' - ದೊಡ್ಡಬಳ್ಳಾಪುರ ಮರಳುಗಾರಿಕೆಯಲ್ಲಿ ಅಧಿಕಾರಿಗಳು ಶಾಮೀಲಾಗಿರುವ ಆರೋಪ

ದೊಡ್ಡಬಳ್ಳಾಪುರ ತಾಲೂಕಿನ ಗಡಿಭಾಗದ ಗ್ರಾಮ ಮುಖಡಿಘಟ್ಟದಲ್ಲಿ ಅಕ್ರಮ ಮರಳು ದಂಧೆ ಜೋರಾಗಿದೆ. ಪೊಲೀಸ್ ಇಲಾಖೆ ಮಾಮೂಲಿ ಪಡೆದು ಅಕ್ರಮದಲ್ಲಿ ಶಾಮೀಲಾಗಿದೆ ಎಂದು ಜನರು ನೇರ ಆರೋಪ ಮಾಡಿದ್ದಾರೆ.

illegal sand mining doddaballapura
ದೊಡ್ಡಬಳ್ಳಾಪುರ ಗಡಿಭಾಗದಲ್ಲಿ ಅಕ್ರಮ ಮರಳು ದಂಧೆ
author img

By

Published : Aug 1, 2022, 7:17 PM IST

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ-ಗೌರಿಬಿದನೂರು ಗಡಿಭಾಗದಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಇಲ್ಲಿನ ಬೆಟ್ಟ-ಗುಡ್ಡಗಳನ್ನು ಕರಗಿಸಲಾಗುತ್ತಿದೆ. ಮರಳು ಮಾಫಿಯಾಗೆ ಅಧಿಕಾರಿಗಳೇ ಸಾಥ್ ನೀಡುತ್ತಿದ್ದಾರೆ ಎಂದು ಗ್ಥಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಗಡಿಭಾಗದ ಮುಖಡಿಘಟ್ಟ ತಾಲೂಕು ಕೇಂದ್ರದಿಂದ 30 ಕಿಮೀ ದೂರದಲ್ಲಿರುವ ಗ್ರಾಮ. ಈ ಗ್ರಾಮದ ಸುತ್ತಮುತ್ತ ಬೆಟ್ಟ-ಗುಡ್ಡಗಳಿವೆ. ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕು ಮತ್ತು ದೊಡ್ಡಬಳ್ಳಾಪುರದ ಗಡಿಭಾಗ ಕೂಡಾ ಹೌದು. ಆಡಳಿತ ಕೇಂದ್ರದಿಂದ ದೂರವಿರುವುದೇ ಮರಳುದಂಧೆಗೆ ಕಾರಣ ಎಂದು ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ. ಗ್ರಾಮದ ಸರ್ವೆ ನಂಬರ್ 37 ರಲ್ಲಿ 219 ಎಕರೆ ಸರ್ಕಾರಿ ಗೋಮಾಳವಿದ್ದು, ಗ್ರಾಮದ ಕೆಲವು ರೈತರು ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಮತ್ತೆ ಕೆಲವರು ಬೆಟ್ಟದಲ್ಲಿರುವ ಮರಳು ಕೊರೆದು ಅಕ್ರಮ ಮರಳು ತೆಗೆದು ಸಾಗಿಸುತ್ತಿದ್ದಾರೆ.

ರಾತ್ರಿಯಾಗುವುದೇ ತಡ, ಮರಳು ತೆಗೆಯುವ ಕೆಲಸ ಇಲ್ಲಿ ಪ್ರಾರಂಭವಾಗುತ್ತದೆ. ಪ್ರತಿದಿನ 20ಕ್ಕೂ ಹೆಚ್ಚು ಟ್ರಾಕ್ಟರ್​ಗಳಿಂದ ಮರಳು ಸಾಗಾಟ ನಡೆಯುತ್ತಿದೆ. ಇಲ್ಲಿನ ಮರಳು ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಹೋಗುತ್ತದೆ. ಪೊಲೀಸ್ ಇಲಾಖೆ ಮಾಮೂಲಿ ತೆಗೆದುಕೊಂಡು ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಅನ್ನುವುದು ಗ್ರಾಮಸ್ಥರ ನೇರ ಆರೋಪ. ಇನ್ನೊಂದೆಡೆ, ಕಂದಾಯ ಇಲಾಖೆ ಅಧಿಕಾರಿಗಳು ದೂರದ ನೆಪದಲ್ಲಿ ತಾಲೂಕು ಕೇಂದ್ರದಲ್ಲೇ ಬಿಡಾರ ಹೂಡಿದ್ದಾರೆ. ಇದು ಹಣದಾಸೆಗೆ ಬೆಟ್ಟಗುಡ್ಡ ಕೊರೆದು ಪ್ರಕೃತಿಗೆ ಕನ್ನ ಹಾಕಲು ಬೆಂಬಲವಾಗಿದೆ ಎಂದು ಇಲ್ಲಿನ ಜನರು ತಿಳಿಸಿದ್ದಾರೆ.

ಇದನ್ನೂ ಓದಿ: 'ಹಿಂದೂ ಧರ್ಮ, ಹಿಂದೂಗಳ ರಕ್ಷಣೆಗೆ ಪರ್ಯಾಯ ರಾಜಕಾರಣ ಬೇಕಿದೆ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.