ದೊಡ್ಡಬಳ್ಳಾಪುರ: ತಾಲೂಕಿನ ಇತಿಹಾಸ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ದೇವಾಲಯದ ಹುಂಡಿ ಹಣವನ್ನು ಎಣಿಕೆ ಮಾಡಲಾಗಿದ್ದು, 63 ಲಕ್ಷದ 83 ಸಾವಿರದ 963 ರೂ. ಹಣ ಸಂಗ್ರಹವಾಗಿದೆ.
ಭಕ್ತರು ಕಾಣಿಕೆ ರೂಪದಲ್ಲಿ ಹುಂಡಿಗೆ ಹಾಕಿದ ಹಣವನ್ನು ಪ್ರತಿ ತಿಂಗಳು ಎಣಿಕೆ ಮಾಡಲಾಗುತ್ತೆ. ಅದರಂತೆ ಇಂದು ಘಾಟಿ ಸುಬ್ರಹ್ಮಣ್ಯ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ನೇತೃತ್ವದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು, 63 ಲಕ್ಷದ 83 ಸಾವಿರದ 963 ರೂ. ಹಣ ಸಂಗ್ರಹವಾಗಿದೆ.
ಇದರ ಜೊತೆಗೆ 43,600 ಮೌಲ್ಯದ 11 ಗ್ರಾಂ ಚಿನ್ನ ಮತ್ತು 79,000 ಮೌಲ್ಯದ 2 ಕೆಜಿ 400 ಗ್ರಾಂ ಬೆಳ್ಳಿ ಹುಂಡಿಯಲ್ಲಿ ಸಿಕ್ಕಿದೆ. ಕೊರೊನಾ ಬಿಕ್ಕಟ್ಟಿನ ಮಧ್ಯೆಯೂ ಇಷ್ಟೊಂದು ದೇಣಿಗೆ ಸಂಗ್ರಹವಾಗಿದೆ.
ಓದಿ: ಸಿಡಿ ಲೇಡಿ ಕೋರ್ಟ್ಗೆ ಹಾಜರ್: ಸಂಕಷ್ಟ ನಿವಾರಣೆಗಾಗಿ ಮಹಾಲಕ್ಷ್ಮಿ ದೇವಾಲಯಕ್ಕೆ ರಮೇಶ್ ದಿಢೀರ್ ಭೇಟಿ