ETV Bharat / state

ಅನ್ನ ಹಾಕಿದ ಮನೆಗೆ ಕನ್ನ: ಮನೆಗೆಲಸಕ್ಕೆ ಬಂದು ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ ಯುವತಿ ಅರೆಸ್ಟ್​ - ಚಿನ್ನಾಭರಣ ಕದ್ದಿದ್ದ ಮನೆಗೆಲಸದವಳ ಬಂಧನ

ದೊಡ್ಡಬಳ್ಳಾಪುರದ ಮನೆಯೊಂದಕ್ಕೆ ಮನೆಗೆಲಸಕ್ಕೆಂದು ಬಂದು ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.

housemaid ran away with gold
ಯುವತಿ
author img

By

Published : Sep 21, 2021, 4:07 PM IST

Updated : Sep 21, 2021, 5:10 PM IST

ದೊಡ್ಡಬಳ್ಳಾಪುರ: ಮನೆಗೆಲಸಕ್ಕೆಂದು ಸೇರಿಕೊಂಡು ಮಾಲೀಕರ ಮನೆಯಿಂದ ಚಿನ್ನದ ಆಭರಣವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಯುವತಿಯನ್ನು ಪತ್ತೆ ಮಾಡುವಲ್ಲಿ ದೊಡ್ಡಬಳ್ಳಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಮನೆಗೆಲಸಕ್ಕೆ ಬಂದು ಕಳ್ಳತನ

ದೊಡ್ಡಬಳ್ಳಾಪುರ ನಗರದ ಲಕ್ಷ್ಮಿ ಚಿತ್ರಮಂದಿರದ ಹಿಂಭಾಗದ ಎಚ್.ಪಿ ರಮೇಶ್‌ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಇವರ ಮನೆಯ ಕೆಲಸದಾಕೆಯೇ ಕಳ್ಳತನ ಮಾಡಿರಬಹುದೆಂದು ಮನೆಯವರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು.

ಶಿವಮೊಗ್ಗ ಮೂಲದ ರೇವತಿ ಹೆಸರಿನ ಯುವತಿ ಕಷ್ಟ ಹೇಳಿಕೊಂಡು ರಮೇಶ್​ ಅವರ ಮನೆಯಲ್ಲಿ ಕೆಲಸಕ್ಕೆ ಸೇರಿ ಮನೆಯವರ ವಿಶ್ವಾಸ ಗಳಿಸಿದ್ದಳು. ಈ ನಡುವೆ ರಮೇಶ್ ಅವರ ಪತ್ನಿ ಊರಿಗೆ ಹೋಗಿದ್ದರು. ಈ ಸಮಯದಲ್ಲಿ ಆಗಸ್ಟ್ 24ರಂದು ಊರಿಗೆ ಹೋಗುತ್ತೇನೆಂದು ತೆರಳಿದ್ದ ರೇವತಿ ವಾಪಸ್‌ ಬಂದಿರಲಿಲ್ಲ. ರಮೇಶ್‌ ಕುಟುಂಬಸ್ಥರು ಆಕೆಗೆ ಕರೆ ಮಾಡಿದರೂ ಫೋನ್‌ ಸ್ವಿಚ್‌ ಆಫ್‌ ಬರುತ್ತಿತ್ತು.

ಇದಾದ ಬಳಿಕ ರಮೇಶ್‌ ಪತ್ನಿ ಊರಿನಿಂದ ವಾಪಸ್ ಬಂದು ಬೀರುವಿನ ಲಾಕರ್‌ ತೆರೆದಾಗ ಅದರಲ್ಲಿ ಮೂರು ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ, ಉಂಗುರಗಳು, ಚಿನ್ನದ ಸರ, ಚಿನ್ನದ ಡಾಲರ್‌, ಓಲೆಗಳು ಕಳವಾಗಿರುವುದು ಗೊತ್ತಾಗಿದೆ.

ಈ ಹಿನ್ನೆಲೆ ರೇವತಿಯೇ ಆಭರಣ ಕಳವು ಮಾಡಿಕೊಂಡು ಹೋಗಿರುವ ಸಾಧ್ಯತೆಯಿದೆ ಎಂದು ಆರೋಪಿಸಿ ರಮೇಶ್‌ ಅವರು ದೂರು ನೀಡಿದ್ದು, ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಆರೋಪಿಯನ್ನ ಪತ್ತೆ ಮಾಡಿದ ಪೊಲೀಸರು ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನಿಗೆ ಹಿಗ್ಗಾಮುಗ್ಗಾ ಥಳಿತ- ವಿಡಿಯೋ ವೈರಲ್​

Last Updated : Sep 21, 2021, 5:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.