ಹೊಸಕೋಟೆ (ಬೆಂಗಳೂರು ಗ್ರಾಮಾಂತರ): ಡಾ. ಮಂಜುನಾಥ್ ಎಸ್.ಆರ್ ಅವರಿಗೆ ಮಾಜಿ ಸಚಿವರೊಬ್ಬರ ಆಪ್ತ ಫೋನ್ನಲ್ಲಿ ಬೆದರಿಕೆ ಹಾಕಿರುವ ಆಡಿಯೋವೊಂದು ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ.
ನಿನ್ನ ಬಿಡೋದೆ ಇಲ್ಲ ನಾನು, ಎಲ್ಲಿ ಬೇಕಾದರೂ ಹೋಗ್ತಿನಿ ನಿನ್ನ ಏನು ಬೇಕಾದರೂ ಮಾಡ್ತಿನಿ. ಜಯರಾಜ್ ಎಂದರೆ ನೀವು ಎನ್ ಅಂದ್ಕೊಂಡಿದ್ದಿರಾ. ನೀವು ತಪ್ಪು ಮಾಡಿದ್ದೀರಾ. ಮೊದಲು ಹೋಗಿ ಎಂಟಿಬಿ ಅವರ ಹತ್ತಿರ ಕ್ಷಮೆ ಕೇಳಿ. ನೀವು ನಾನು ಮಾತನಾಡೋದು ರೆಕಾರ್ಡ್ ಮಾಡಿಕೊಂಡ್ರೆ ನನಗೇನು ಭಯವಿಲ್ಲ ಎಂದು ಹೇಳಿರುವ ಆಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಓದಿ:ನಕಲಿ ವೈದ್ಯನ ಕ್ಲಿನಿಕ್ನಲ್ಲಿತ್ತು ₹10 ಲಕ್ಷ ಮೌಲ್ಯದ ಅಕ್ರಮ ಮೆಡಿಸಿನ್
ಮಾನ ಮಾರ್ಯದೆ ಇದ್ರೆ, ನಾನು ನಿಂಗೆ ವಾರ್ನಿಂಗ್ ಮಾಡಿರೋ ರೆಕಾರ್ಡ್ ಡಿಲಿಟ್ ಮಾಡು. ನೀನ್ ಎಂತಹ ಕಳ್ಳ, ನೀನು ಫಸ್ಟ್ ಡಿಲೀಟ್ ಮಾಡೋ ಎಂದು ಡಾ. ಮಂಜುನಾಥ್ಗೆ ಜಯರಾಜ್ ಫೋನ್ನಲ್ಲಿ ಬೆದರಿಕೆ ಹಾಕಿದ್ದಾನೆ. ಈ ರೀತಿ ಫೋನ್ನಲ್ಲಿ ಬೆದರಿಕೆ ಹಾಕಿದ ಮೇಲೆ ಡಿಹೆಚ್ಒ ನಾಪತ್ತೆಯಾಗಿದ್ದಾರೆ ಎಂಬ ಶಂಕೆ ಇದೀಗ ವ್ಯಕ್ತವಾಗಿದೆ.
ಓದಿ:ಖಾಸಗಿ ಆಸ್ಪತ್ರೆಗಳ ಅಕ್ರಮ ಔಷಧಿಗಳ ವಶಕ್ಕೆ ಪಡೆದಿದ್ದ ವೈದ್ಯಾಧಿಕಾರಿ ನಾಪತ್ತೆ
ಡಾ. ಮಂಜುನಾಥ್ ಎಸ್.ಆರ್ ಅವರು ಡಿಸೆಂಬರ್ 10 ರಂದು ಖಾಸಗಿ ಕ್ಲಿನಿಕ್ಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 10 ಲಕ್ಷ ರೂ. ಮೌಲ್ಯದ ಔಷಧಗಳ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದರು. ನಂತರ ಇದೇ 16ರಂದು ಅವರು ಕಾಣೆಯಾಗಿದ್ದಾರೆ. ಹಾಗಾಗಿ ಇದೀಗ ಖಾಸಗಿ ಆಸ್ಪತ್ರೆಗಳ ಮೇಲೆ ದಾಳಿ ಪ್ರಕರಣ ಮತ್ತು ಅಧಿಕಾರಿ ಕಾಣೆ ಎರಡೂ ಘಟನೆಗಳೂ ತಳುಕು ಹಾಕಿಕೊಂಡಿವೆ. ಇದೇ ವಿಚಾರವಾಗಿ ಅವರು ಅಪಹರಣವಾಗಿರುವ ಶಂಕೆ ವ್ಯಕ್ತಪಡಿಸಲಾಗುತ್ತಿದೆ.