ದೇವನಹಳ್ಳಿ : ದೇವನಹಳ್ಳಿ- ನಂದಿಬೆಟ್ಟದ ರಸ್ತೆಯ ಕೊಡಗುರ್ಕಿ ಗ್ರಾಮದ ಬಳಿ ಹೆಬ್ಬಾಳ - ನಾಗವಾರ ವ್ಯಾಲಿ (ಹೆಚ್ಎನ್ವ್ಯಾಲಿ) ಯ ಪೈಪ್ ಲೈನ್ ಗೇಟ್ ವಾಲ್ ಸಡಿಲಗೊಂಡು ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ.
ಸಂಸ್ಕರಣಗೊಂಡ ಹೆಬ್ಬಾಳ ಮತ್ತು ನಾಗವಾರ ಕೆರೆಯ ಕೊಳಚೆ ನೀರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆರೆಗಳಿಗೆ ತುಂಬಿಸಿ, ನಂತರ ದೇವನಹಳ್ಳಿ- ನಂದಿಬೆಟ್ಟ ರಸ್ತೆಯಲ್ಲಿ ಹಾದು ಹೋಗಿರುವ ಪೈಪ್ ಲೈನ್ ಮೂಲಕ ಚಿಕ್ಕಬಳ್ಳಾಪುರದ ಕಂದವಾರ ಕೆರೆಗೆ ಹರಿಸಲಾಗುತ್ತಿದೆ. ಕೊಡಗುರ್ಕಿ ಗ್ರಾಮದ ಬಳಿ ಪೈಪ್ ಲೈನ್ನ ಗೇಟ್ ವಾಲ್ ಬಳಿ ಸಡಿಗೊಂಡಿದ್ದರಿಂದ ಅಪಾರ ಪ್ರಮಾಣದ ನೀರು ರಸ್ತೆಗೆ ಚಿಮ್ಮುತ್ತಿದ್ದು, ವಾಹನ ಸವಾರರು ಈ ನೀರಿನಲ್ಲಿ ತಮ್ಮ ವಾಹನಗಳನ್ನ ಸ್ವಚ್ಚ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ :ಸಿಬ್ಬಂದಿಯೊಂದಿಗೆ ಕಾದಾಟ : ಆಸ್ಪತ್ರೆ, 15 ವಾಹನಗಳನ್ನು ಜಖಂಗೊಳಿಸಿದ ಭೂಪ! ವಿಡಿಯೋ
ಬೆಳಗ್ಗೆಯಿಂದ ಅಪಾರ ಪ್ರಮಾಣದ ನೀರು ಪೋಲಾಗುತ್ತಿದ್ದರೂ, ಯಾವುದೇ ಅಧಿಕಾರಿಗಳು ಇತ್ತ ಕಡೆ ತಲೆ ಹಾಕಿಲ್ಲ. ರಸ್ತೆಯ ತುಂಬೆಲ್ಲ ನೀರು ಚಿಮ್ಮುತ್ತಿರುವುದರಿಂದ ವಾಹನಗಳ ಓಡಾಟಕ್ಕೂ ಅಡಚಣೆಯಾಗುತ್ತಿದೆ.