ETV Bharat / state

ಆರೋಗ್ಯ ಸಹಾಯಕಿಯಿಂದಲೇ ವ್ಯಾಕ್ಸಿನ್​ ಮಾರಾಟ : ಆರೋಪಿಯನ್ನು ಖೆಡ್ಡಾಗೆ ಕೆಡವಿದ ಆಫೀಸರ್ಸ್..! - ಆರೋಗ್ಯ ಸಹಾಯಕಿ ಗಾಯತ್ರಿ

ಅಧಿಕಾರಿಗಳು ದಾಳಿ ಮಾಡುತ್ತಿದ್ದಂತೆ ವ್ಯಾಕ್ಸಿನ್ ವಯಲ್​​ಗಳನ್ನು ಬಚ್ಚಿಟ್ಟ ಆರೋಗ್ಯ ಸಹಾಯಕಿ ಗಾಯತ್ರಿ, ನಾನೇನು ಮಾಡಿಲ್ಲ, ನನ್ನದೇನು ತಪ್ಪಿಲ್ಲ ಸರ್ ಎಂದಳು. ಆದರೂ, ಪರಿಶೀಲನೆ ಮುಂದುವರಿಸಿದ ಅಧಿಕಾರಿಗಳು, 50 ವ್ಯಾಕ್ಸಿನ್​ಅನ್ನು 80 ಜನರಿಗೆ ನೀಡಿರುವ ಬಗ್ಗೆ ಮಾಹಿತಿ ಕಲೆ ಹಾಕಿದರು.

ಆರೋಗ್ಯ ಸಹಾಯಕಿಯಿಂದಲೇ ವ್ಯಾಕ್ಸಿನ್​ ಮಾರಾಟ
ಆರೋಗ್ಯ ಸಹಾಯಕಿಯಿಂದಲೇ ವ್ಯಾಕ್ಸಿನ್​ ಮಾರಾಟ
author img

By

Published : Jun 11, 2021, 8:07 PM IST

ನೆಲಮಂಗಲ (ಬೆಂಗಳೂರು ಗ್ರಾಮಾಂತರ) : ಕೊರೊನಾ ಲಸಿಕೆಗಾಗಿ ಜನರು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ. ವ್ಯಾಕ್ಸಿನ್ ಕೇಂದ್ರಗಳ ಮುಂದೆ ಗಂಟೆಗಟ್ಟಲೆ ಕ್ಯೂ ನಿಂತರೂ, ಸರಿಯಾಗಿ ಲಸಿಕೆ ಸಿಗುತ್ತಿಲ್ಲ. ಆದ್ರೆ, ಇಲ್ಲೊಬ್ಬ ಆರೋಗ್ಯ ಸಹಾಯಕಿ ಮಾತ್ರ ಹಣ ಕೊಟ್ರೆ ಕ್ಷಣದಲ್ಲೇ ಲಸಿಕೆ ಹಾಕ್ತಾರೆ. ಈ ಬಗ್ಗೆ ಮಾಹಿತಿ ತಿಳಿದು ದಾಳಿ ನಡೆಸಿದ ತಹಶೀಲ್ದಾರ್​ ಕೈಗೆ ಆರೋಪಿ ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾಳೆ. ಅಧಿಕಾರಿಗಳು ಕ್ರಮಕ್ಕೆ ಮುಂದಾದಾಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆರೋಪಿ ಹೈಡ್ರಾಮ ಮಾಡಿದ್ದಾಳೆ.

ಆರೋಗ್ಯ ಸಹಾಯಕಿಯಿಂದಲೇ ವ್ಯಾಕ್ಸಿನ್​ ಮಾರಾಟ?

‘ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ, ಸಿಕ್ಕಿಬಿದ್ದ ಆರೋಪಿ’

ನೆಲಮಂಗಲದ ಅರಿಶಿನಕುಂಟೆ ಉಪ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಿರಿಯ ಆರೋಗ್ಯ ಸಹಾಯಕಿ ಗಾಯತ್ರಿ, ವ್ಯಾಕ್ಸಿನ್​ ಕದ್ದು ಬೇರೆಯವರಿಗೆ ನೀಡುವಾಗ ಅಧಿಕಾರಿಗಳಿಗೆ ರೆಡ್​​ಹ್ಯಾಂಡಾಗಿ ಸಿಕ್ಕಿಬಿದ್ದಾರೆ. ಈಕೆ ತನಗೆ ಕೊಟ್ಟಿರುವ ವ್ಯಾಕ್ಸಿನ್‌ಗಳನ್ನು ಸರ್ಕಾರದ ನಿಯಮ ಮೀರಿ ಬೇರೊಬ್ಬರಿಗೆ ನೀಡಿ ಹಣ ಪಡೆಯುತ್ತಿದ್ದಳಂತೆ. ಈ ಬಗ್ಗೆ ದೂರು ಬಂದ ಹಿನ್ನೆಲೆ ನೆಲಮಂಗಲ ತಹಶೀಲ್ದಾರ್ ಕೆ.ಮಂಜುನಾಥ್ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ.ಹರೀಶ್ ದಿಢೀರ್ ದಾಳಿ ನಡೆಸಿದ್ದಾರೆ. ಈ ವೇಳೆ ವ್ಯಾಕ್ಸಿನ್ ಮಾರಾಟ ಮಾಡಿ ಹಣ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ.

‘ನೀವು ಕ್ರಮ ತಗೊಂಡ್ರೆ ನಾನ್ ಸತ್ತೋಗ್ತಿನಿ’

ಅಧಿಕಾರಿಗಳು ದಾಳಿ ಮಾಡುತ್ತಿದ್ದಂತೆ ವ್ಯಾಕ್ಸಿನ್ ವಯಲ್​​ಗಳನ್ನು ಬಚ್ಚಿಟ್ಟ ಆರೋಗ್ಯ ಸಹಾಯಕಿ ಗಾಯತ್ರಿ, ನಾನೇನು ಮಾಡಿಲ್ಲ, ನನ್ನದೇನು ತಪ್ಪಿಲ್ಲ ಸರ್ ಎಂದಳು. ಆದರೂ, ಪರಿಶೀಲನೆ ಮುಂದುವರಿಸಿದ ಅಧಿಕಾರಿಗಳು, 50 ವ್ಯಾಕ್ಸಿನ್​ ಅನ್ನು 80 ಜನರಿಗೆ ನೀಡಿರುವ ಬಗ್ಗೆ ಮಾಹಿತಿ ಕಲೆ ಹಾಕಿದರು.

ಇದನ್ನೂ ಓದಿ:ಹುಬ್ಬಳ್ಳಿಯ ಎಪಿಎಂಸಿಯಲ್ಲಿ ಕಳ್ಳತನ: ಆರೋಪಿಯ​​ ಬಂಧನ

ಸತ್ಯಾಂಶ ತಿಳಿದು ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾದಾಗ ಗಾಯತ್ರಿ, ಅಧಿಕಾರಿಗಳ ಕಾಲಿಗೆ ಬಿದ್ದು ಸ್ಥಳದಲ್ಲಿ ಹೈಡ್ರಾಮ ಸೃಷ್ಟಿಸಿದಳು. ನನ್ನ ಬಿಟ್ಬಿಡಿ ಸರ್, ಯಾರಾದರೂ ಪ್ರೀತಿಯಿಂದ ಹಣ ಕೊಟ್ರೆ ಮಾತ್ರ ಈಸ್ಕೊತಿನಿ. ನಾನೇನು ತಪ್ಪು ಮಾಡಿಲ್ಲ. ನೀವು ಕ್ರಮ ತಗೊಂಡ್ರೆ ನಾನು ಸತ್ತೋಗ್ತಿನಿ ಅಂದಿದ್ದಾಳಂತೆ. ಬಳಿಕ ತಹಶೀಲ್ದಾರ್, ಆಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರೋಗ್ಯಾಧಿಕಾರಿಗೆ ಸೂಚಿಸಿದ್ದಾರೆ.

‘ನಾನೇನು ತಪ್ಪು ಮಾಡಿಲ್ಲ’

ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಪಿ ಗಾಯತ್ರಿ, ನಾನೇನು ತಪ್ಪು ಮಾಡಿಲ್ಲ. ಇದೆಲ್ಲಾ ನನ್ನ ವಿರುದ್ಧ ನಡೆಸುತ್ತಿರುವ ವ್ಯವಸ್ಥಿತ ಪಿತೂರಿ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.