ETV Bharat / state

ಒಡೆದು ಹೋಳಾಗಿದ್ದ ದೊಡ್ಡಬಳ್ಳಾಪುರ ಜೆಡಿಎಸ್ ಘಟಕ : ಎರಡೂ ಬಣಗಳನ್ನ ಒಂದು ಮಾಡಿದ ಹೆಚ್​ಡಿಕೆ - ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ

2013ರಲ್ಲಿ ದೊಡ್ಡಬಳ್ಳಾಪುರ ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು. ಆದರೆ, ಎರಡು ಬಣಗಳ ಭಿನ್ನಾಭಿಪ್ರಾಯದಿಂದ ಜೆಡಿಎಸ್ ಪಕ್ಷಕ್ಕೆ ಸೋಲಿನ ಪರಿಸ್ಥಿತಿ ಎದುರಾಗಿತ್ತು..

doddaballapura
ದೊಡ್ಡಬಳ್ಳಾಪುರ ಜೆಡಿಎಸ್ ಘಟಕ
author img

By

Published : Aug 22, 2021, 7:41 PM IST

ದೊಡ್ಡಬಳ್ಳಾಪುರ/ಬೆಂಗಳೂರು ಗ್ರಾಮಾಂತರ : ಮುಂಬರುವ ನಗರಸಭೆ, ಜಿಲ್ಲಾ ಪಂಚಾಯತ್ ಚುನಾವಣೆ ಹಿನ್ನೆಲೆ ತಾಲೂಕು ಜೆಡಿಎಸ್ ಘಟಕದಲ್ಲಿದ್ದ ಬಣಗಳು ಒಂದಾಗಿವೆ. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ನಡೆದ ಸಂಧಾನದಲ್ಲಿ ಜೆಡಿಎಸ್​​ನ ಮುನೇಗೌಡ ಬಣ ಮತ್ತು ಅಪ್ಪಯ್ಯಣ್ಣನವರ ಬಣ ಪರಸ್ಪರ ಒಂದಾಗಿ ಚುನಾವಣೆಯಲ್ಲಿ ಗೆಲ್ಲುವ ತಂತ್ರ ಹೆಣೆದಿದ್ದಾರೆ.

ಒಂದಾದ ದೊಡ್ಡಬಳ್ಳಾಪುರ ಜೆಡಿಎಸ್ ಘಟಕ

ಜಿಲ್ಲಾ ಜೆಡಿಎಸ್ ಘಟಕದ ಅಧ್ಯಕ್ಷ ಮುನೇಗೌಡ ಮತ್ತು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅಪ್ಪಯ್ಯಣ್ಣ ಬಣಗಳ ನಡುವಿನ ಭಿನ್ನಾಭಿಪ್ರಾಯದಿಂದ ತಾಲೂಕು ಜೆಡಿಎಸ್ ಘಟಕದಲ್ಲಿ ಬಿರುಕು ಉಂಟಾಗಿತ್ತು.

ತಾಲೂಕು ಟಿಎಪಿಎಂಸಿಯಲ್ಲಿ ನಡೆದ ಚುನಾವಣೆಯಲ್ಲಿ ಮುನೇಗೌಡ ಮತ್ತು ಅಪ್ಪಯ್ಯಣ್ಣ ಬಣದ ಅಭ್ಯರ್ಥಿಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದರು. ಎರಡೂ ಬಣಗಳ ನಡುವೆ ವೈಯಕ್ತಿಕ ಭಿನ್ನಾಭಿಪ್ರಾಯಗಳಿದ್ದ ಕಾರಣದಿಂದ ದೂರವಾಗಿಯೇ ಇದ್ದರು.

doddaballapura
ದೊಡ್ಡಬಳ್ಳಾಪುರ ಜೆಡಿಎಸ್ ಘಟಕ

2013ರಲ್ಲಿ ದೊಡ್ಡಬಳ್ಳಾಪುರ ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು. ಆದರೆ, ಎರಡು ಬಣಗಳ ಭಿನ್ನಾಭಿಪ್ರಾಯದಿಂದ ಜೆಡಿಎಸ್ ಪಕ್ಷಕ್ಕೆ ಸೋಲಿನ ಪರಿಸ್ಥಿತಿ ಎದುರಾಗಿತ್ತು.

ಇದನ್ನ ಮನಗಂಡ ಜೆಡಿಎಸ್ ವರಿಷ್ಠರಾದ ಕುಮಾರಸ್ವಾಮಿ ಮುನೇಗೌಡ ಮತ್ತು ಅಪ್ಪಯ್ಯಣ್ಣ ಇಬ್ಬರನ್ನು ತಮ್ಮ ಮನೆಗೆ ಕರೆಸಿ ಸಂಧಾನ ನಡೆಸಿದ್ದಾರೆ. ಇಬ್ಬರು ಭಿನ್ನಾಭಿಪ್ರಾಯ ಮರೆತು ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಗೆಲುವಿಗೆ ಶ್ರಮಿಸುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:ನಾಳೆಯಿಂದ ತಮಿಳುನಾಡಿಗೆ ಕೆಎಸ್​ಆರ್​ಟಿಸಿ ಬಸ್ ಸೇವೆ ಪುನಾರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.