ETV Bharat / state

ದೊಡ್ಡಬಳ್ಳಾಪುರದ ಕೆರೆಯಲ್ಲಿ ಅರ್ಧಂಬರ್ಧ ಕರಗಿದ ಗಣೇಶ ಮೂರ್ತಿಗಳು ಪತ್ತೆ ..ಭಕ್ತರಿಗೆ ಬೇಸರ - Ganesha idols immersion in Doddaballapura

ದೊಡ್ಡಬಳ್ಳಾಪುರದ ನಾಗರಕೆರೆಯ ಪಕ್ಕದಲ್ಲಿ ಗಣೇಶ ಮೂರ್ತಿಯ ನಿಮಜ್ಜನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇದೀಗ ಆ ಜಾಗದಲ್ಲಿ ಅರ್ಧಂಬರ್ಧ ಗಣೇಶನ ಮೂರ್ತಿಗಳು ಬಿದ್ದಿರುವುದು ಭಕ್ತರ ಭಾವನೆಗೆ ಧಕ್ಕೆ ತಂದಿದೆ.

ಅರ್ಧಂಬರ್ಧ ಕರಗಿದ ಗಣೇಶ ಮೂರ್ತಿ
ಅರ್ಧಂಬರ್ಧ ಕರಗಿದ ಗಣೇಶ ಮೂರ್ತಿ
author img

By

Published : Sep 29, 2022, 6:40 PM IST

ದೊಡ್ಡಬಳ್ಳಾಪುರ: ಗಣೇಶ ಮೂರ್ತಿಗಳ ನಿಮಜ್ಜನಕ್ಕೆ ದೊಡ್ಡಬಳ್ಳಾಪುರ ನಗರಸಭೆಯಿಂದ ಸ್ಥಳ ನಿಗದಿ ಮಾಡಲಾಗಿತ್ತು. ನಗರಸಭೆಯ ಕ್ರಮಕ್ಕೆ ಬೆಲೆಕೊಟ್ಟ ಭಕ್ತರು ನಿಗದಿತ ಸ್ಥಳದಲ್ಲಿ ಗಣೇಶ ಮೂರ್ತಿಗಳ ನಿಮಜ್ಜನ ಮಾಡಿದ್ದಾರೆ. ಈ ಸ್ಥಳದಲ್ಲಿ ಕಸದ ರಾಶಿಯಂತೆ ಅರ್ಧಂಬರ್ಧ ನೀರಿನಲ್ಲಿ ಕರಗಿದ ಗಣೇಶನ ಮೂರ್ತಿಗಳು ಬಿದ್ದಿದ್ದು, ನಗರಸಭೆಯ ನಿರ್ಲಕ್ಷ್ಯತೆ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದೆ.

ಅರ್ಧಂಬರ್ಧ ಕರಗಿದ ಗಣೇಶ ಮೂರ್ತಿಗಳ ಪತ್ತೆಯಾಗಿರುವ ಬಗ್ಗೆ ಹಿಂದೂ ಸಂಘಟನೆ ಮುಖಂಡ ಸುರೇಶ್​ ಶೆಟ್ಟಿಯವರು ಮಾತನಾಡಿರುವುದು

ಗಣೇಶನ ಹಬ್ಬವನ್ನು ಹಿಂದೂಗಳು ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ಸಾರ್ವಜನಿಕ ಗಣೇಶೋತ್ಸವ ಭಕ್ತರ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಗಣೇಶನ ಹಬ್ಬದ ಸಂಭ್ರಮದಲ್ಲಿ ದೇವರಿಗೆ ಕೊಡುವ ಗೌರವ ಭಾವನೆ, ಗಣೇಶ ಮೂರ್ತಿಗಳ ನಿಮಜ್ಜನ ಮಾಡಿದಾಗ ಇಲ್ಲವಾಗುತ್ತೆ. ದೊಡ್ಡಬಳ್ಳಾಪುರ ನಗರಸಭೆಯ ಈ ವರ್ತನೆ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ಹಬ್ಬದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯಬಾರದು ಮತ್ತು ಕೆರೆಯ ಸ್ವಚ್ಚತೆಯನ್ನ ಕಾಪಾಡಬೇಕು ಎಂಬ ಸದುದ್ದೇಶದಿಂದ ನಾಗರಕೆರೆ ಪಕ್ಕದಲ್ಲಿ ನಿಮಜ್ಜನಕ್ಕೆ ಅವಕಾಶ ಮಾಡಿಕೊಡಲಾಯಿತು. ಇದೀಗ ಗಣೇಶೋತ್ಸವ ಮುಗಿದು ಒಂದು ತಿಂಗಳಾಗಿದೆ. ಇದೀಗ ಆ ಕೆರೆಯನ್ನು ನೋಡಿದರೆ ಅಲ್ಲಿ ಅರ್ಧಂಬರ್ಧ ನೀರಿನಲ್ಲಿ ಕರಗಿದ ಗಣೇಶ ಮೂರ್ತಿಗಳು ಕಸದಂತೆ ಬಿದ್ದಿರುವುದು ಕಂಡುಬಂದಿವೆ.

ರಸ್ತೆಯ ಪಕ್ಕದಲ್ಲಿಯೇ ಕಸದಂತೆ ಬಿದ್ದಿರುವ ಗಣೇಶ ಮೂರ್ತಿಗಳು ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದೆ. ಗಣೇಶ ಮೂರ್ತಿಗಳನ್ನ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕಾದ ನಗರಸಭೆ ಗಾಢ ನಿದ್ದೆಯಲ್ಲಿ ಮಲಗಿದೆ. ನಗರಸಭೆಯ ನಿರ್ಲಕ್ಷ್ಯಕ್ಕೆ ಬೇಸತ್ತ ಹಿಂದೂ ಸಂಘಟನೆಗಳು ಭಕ್ತರ ಭಾವನೆಗಳಿಗೆ ಬೆಲೆಕೊಟ್ಟು ವಿಲೇವಾರಿ ಮಾಡುವಂತೆ ಎಚ್ಚರಿಕೆ ನೀಡಿದ್ದಾರೆ.

ಓದಿ: 11 ಭಕ್ತರಿಗೆ ವಿದ್ಯುತ್ ಶಾಕ್: ಗಣೇಶ ಮೂರ್ತಿ ನಿಮಜ್ಜನ ವೇಳೆ ಅವಘಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.