ETV Bharat / state

ದೇವನಹಳ್ಳಿ: ಗ್ರಾಮ ಪಂಚಾಯಿತಿ ಅಕ್ರಮ ಆರೋಪ, ಸದಸ್ಯನಿಂದ ಅಂಬೇಡ್ಕರ್‌ ಭಾವಚಿತ್ರ ಹಿಡಿದು ಮೌನ ಪ್ರತಿಭಟನೆ - ETV bharat kannada

ಶಂಕು ಸ್ಥಾಪನೆಯಾಗದ ಕಾಮಗಾರಿಗೆ ಅಂದಾಜು 1.5 ಕೋಟಿ ವೆಚ್ಚದಲ್ಲಿ ಉನ್ನತೀಕರಿಸಲಾಗಿದೆ ಎಂದು ಆರೋಪಿಸಿ ಗ್ರಾ.ಪಂ ಸದಸ್ಯ ಸೋಮಶೇಖರ್‌ ಅಂಬೇಡ್ಕರ್‌ ಅವರ ಭಾವಚಿತ್ರ ಹಿಡಿದು ಮೌನ ಪ್ರತಿಭಟನೆ ನಡೆಸಿದರು.

vgram-panchayat-illegality-a-member-standing-alone-to-fight
ದೇವನಹಳ್ಳಿ: ಗ್ರಾಮ ಪಂಚಾಯಿತಿ ಅಕ್ರಮ, ಸದಸ್ಯನಿಂದ ಅಂಬೇಡ್ಕರ್‌ ಭಾವಚಿತ್ರ ಹಿಡಿದು ಮೌನ ಪ್ರತಿಭಟನೆ
author img

By

Published : Mar 14, 2023, 3:37 PM IST

Updated : Mar 14, 2023, 4:56 PM IST

ದೇವನಹಳ್ಳಿ: ಗ್ರಾಮ ಪಂಚಾಯಿತಿ ಅಕ್ರಮ, ಸದಸ್ಯನಿಂದ ಅಂಬೇಡ್ಕರ್‌ ಭಾವಚಿತ್ರ ಹಿಡಿದು ಮೌನ ಪ್ರತಿಭಟನೆ

ದೇವನಹಳ್ಳಿ: ತಾಲೂಕಿನ ಕನ್ನಮಂಗಲ ಗ್ರಾಮ ಪಂಚಾಯಿತಿಯೂ ಶ್ರೀಮಂತ ಪಂಚಾಯಿತಿಗಳ ಸಾಲಿನಲ್ಲಿದ್ದು, ವಿವಾದಗಳ ಸುಳಿಯಲ್ಲಿ ಸಾಕಷ್ಟು ಆರೋಪಗಳು ಕೇಳಿ ಬಂದಿದೆ. ಈಗಾಗಲೇ ದಾಖಲೆ ತಿದ್ದುಪಡಿ, ಕಟ್ಟಡಕ್ಕೆ ಬೆಂಕಿ ಹಾಕಿದ್ದು, ಸಿಬ್ಬಂದಿಗಳ ವಜಾ, ಪೊಲೀಸ್ ದೂರ ಎಂಬುದು ಸರ್ವೆ ಸಾಮಾನ್ಯವಾಗಿದೆ. ಸೋಮವಾರ ನವೀಕೃತ ಕಟ್ಟಡದ ಮುಂದೆ ಗ್ರಾಮ ಪಂಚಾಯಿತಿಯ ಸದಸ್ಯ ಸೋಮಶೇಖರ್‌ ಅಂಬೇಡ್ಕರ್‌ರವರ ಭಾವಚಿತ್ರ ಹಿಡಿದು ಮೌನ ಪ್ರತಿಭಟನೆಯಲ್ಲಿ ನಡೆಸಿದರು. 'ರಾಜೀವ್‌ ಗಾಂಧಿ ಸೇವಾ ಕೇಂದ್ರ ನಿರ್ಮಾಣದಲ್ಲಿ ಸಾಕಷ್ಟು ಅಕ್ರಮಗಳು ನಡೆದಿದ್ದು, ಶಂಕು ಸ್ಥಾಪನೆಯಾಗದ ಕಾಮಗಾರಿಗೆ ಅಂದಾಜು 1.5 ಕೋಟಿ ವೆಚ್ಚದಲ್ಲಿ ಉನ್ನತೀಕರಿಸಲಾಗಿದೆ' ಎಂದು ಆರೋಪಿಸಿದರು.

ಇತ್ತೀಚೆಗಷ್ಟೇ ನಿರ್ಗಮಿತ ಜಿಲ್ಲಾ ಪಂಚಾಯಿತಿ ಮುಖ್ಯಾಧಿಕಾರಿ ಕೆ ರೇವಣಪ್ಪರಿಂದ ನವೀಕೃತ ಕಟ್ಟಡದ ಮುಂಭಾಗ ಕಟ್ಟಡ ಉದ್ಘಾಟನೆಯಾದ ನಂತರ ಎರಡನೇ ಶನಿವಾರ ಶಂಕು ಸ್ಥಾಪನೆ ಅಡಿಗಲ್ಲು ಹಾಕಿದ್ದಾರೆ. ಅದರಲ್ಲಿ ನಮೂದು ಮಾಡಿದಂತೆ ಸೆಪ್ಟೆಂಬರ್‌ 2021ರಲ್ಲಿ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಯೂ ಅಸ್ತಿತ್ವದಲ್ಲಿಯೇ ಇರಲಿಲ್ಲ, ಆದರೆ, ಚುನಾಯಿತರ ಹೆಸರು ಹೇಗೆ ಹಾಕಿದರು' ಎಂದು ಅವರು ಪ್ರಶ್ನಿಸಿದರು.

'ಮೂಲ ಸೌಕರ್ಯಗಳಿಗೆ ಬಳಸಬೇಕಾದ ನಿಧಿ-2 ರ ತೆರಿಗೆ ಹಣವನ್ನು ಐಷಾರಾಮಿ ಕಟ್ಟಡ ನಿರ್ಮಾಣಕ್ಕೆ 80 ಲಕ್ಷ ಬಳಸಿದ್ದಾರೆ. 19 ಲಕ್ಷ ನರೇಗಾದ ಹಣವೂ ಬಳಕೆಯಾಗಿದೆ. ಸಾಕಷ್ಟು ದಾನಿಗಳಿಂದಲೂ ಲಕ್ಷಾಂತರ ರೂಪಾಯಿ ಚಂದ ಸಂಗ್ರಹಿಸಲಾಗಿದೆ. ಇದಕ್ಕೆ ಕಾನೂನು ಮಾನ್ಯತೆ ಇಲ್ಲ ಎಂದು ಅವರು ಟೀಕಿಸಿದರು.

ಜನರಿಗೆ ಅಗತ್ಯ ಸೌಲಭ್ಯ ಒದಗಿಸಲು ಕಾಮಗಾರಿಗಳ ಚಾಲನೆ ಮಾಡುವ ಬದಲು, ನಿರ್ಗಮಿತ ಜಿಲ್ಲಾ ಪಂಚಾಯಿತಿ ಮುಖ್ಯಾಧಿಕಾರಿಗಳ ಕೊನೆಯ ಕೆಲಸದ ದಿನವೇ ಕಟ್ಟಡ ಉದ್ಘಾಟಿಸಿದ್ದಾರೆ. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅನುಮತಿ ಬಿಟ್ಟು, ನೇರವಾಗಿ ಜಿಲ್ಲಾ ಪಂಚಾಯತ್​ ಸಿಇಒ ಬಳಿಯೇ ಅನುಮತಿ ಪಡೆದಿದ್ದು, ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ ಎಂದು ಗ್ರಾಪಂ ಸದಸ್ಯ ದೂರಿದ್ದಾರೆ.

ಇದನ್ನೂ ಓದಿ : ಕೋಟೆ ಭದ್ರಕ್ಕೆ ಕೇಸರಿ ತಂತ್ರ, ಕ್ಷೇತ್ರ ಕೈವಶಕ್ಕೆ ಕಾಂಗ್ರೆಸ್ ಪ್ರತಿತಂತ್ರ: ದಳಪತಿಗಳ ಮೈಂಡ್​ಗೇಮ್ ನಡುವೆ ಯಾರಾಗುತ್ತಾರೆ ಮಲ್ಲೇಶ್ವರ ಶಾಸಕ?

ತೆರಿಗೆ ದುಡ್ಡು ಜನರ ಹಿತಕ್ಕೆ ಬಳಕೆಯಾಗಬೇಕು: ಲಕ್ಷಾಂತರ ರೂಪಾಯಿ ಅವ್ಯವಹಾರದ ಬಗ್ಗೆ, ಸರ್ಕಾರ ಸೂಕ್ತವಾದ ಸಮಿತಿ ರಚನೆ ಮಾಡಬೇಕು. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ತೆರಿಗೆ ದುಡ್ಡು ಜನರ ಹಿತಕ್ಕೆ ಬಳಕೆಯಾಗಬೇಕು. ಮಾಹಿತಿ ಕೇಳಿ ಎರಡು ತಿಂಗಳು ಕಳೆದರೂ, ತಪ್ಪಿನಿಂದ ನುಳಿಚಿಕೊಳ್ಳುವುದಕ್ಕೆ ಹಿರಿಯ ಅಧಿಕಾರಿಗಳ ಮಾತಿಗೂ ಪಿಡಿಒ ಗಮನ ಹರಿಸುತ್ತಿಲ್ಲ ಎಂದು ಸೋಮಶೇಖರ್ ದೂರಿದರು.

ಇನ್ನೂ ಆರೋಪಗಳ ಬಗ್ಗೆ ಲಿಖಿತ ದೂರು ನೀಡಿದ ಪಕ್ಷದಲ್ಲಿ, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಅನುಸರಿಸಬೇಕಾದ ಅಗತ್ಯ ಕ್ರಮದ ಕುರಿತು ಆಡಳಿತ ಮಂಡಳಿಯ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಪಿಡಿಒ ಆದರ್ಶ್‌ ಕುಮಾರ್‌ ತಿಳಿಸಿದ್ದಾರೆ.

ಇದನ್ನೂ ಓದಿ : ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ನಾನೇ ಅಂತಿಮ ತೀರ್ಮಾನ ತೆಗೆದುಕೊಳ್ಳೋದು.. ಸಿ ಎಂ ಇಬ್ರಾಹಿಂಗೆ ಹೆಚ್​ಡಿಕೆ ಬ್ರೇಕ್​

Last Updated : Mar 14, 2023, 4:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.