ದೊಡ್ಡಬಳ್ಳಾಪುರ: ಘಾಟಿ ಸುಬ್ರಮಣ್ಯಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಯೊಳಗಿನ ಬಣಗಳ ಕಿತ್ತಾಟದಿಂದ ದೇವಸ್ಥಾನದ ಅಭಿವೃದ್ಧಿ ಕುಂಠಿತಗೊಂಡಿತ್ತು. ಇದರಿಂದ ಅಪರ ಜಿಲ್ಲಾಧಿಕಾರಿ ದೇವಸ್ಥಾನ ಆಡಳಿತ ಮಂಡಳಿಯನ್ನ ಅಮಾನತ್ತಿನಲ್ಲಿರಿಸಿ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಸಿದ್ಧ ದೇವಾಸ್ಥಾನ ದೊಡ್ಡಬಳ್ಳಾಪುರದ ಘಾಟಿ ಸುಬ್ರಮಣ್ಯಸ್ವಾಮಿ ಕ್ಷೇತ್ರ, ಕರ್ನಾಟಕದ ಆದಾಯ ತರುವ ದೇವಸ್ಥಾನಗಳಲ್ಲಿ ಇದು ಸಹ ಒಂದಾಗಿದೆ. ತಿಂಗಳಿಗೆ ಭಕ್ತರ ಕಾಣಿಕೆಯಿಂದಲೇ ಸುಮಾರು 40 ಲಕ್ಷ ಆದಾಯ ದೇವಾಲಯಕ್ಕೆ ಬರುತ್ತದೆ.
ದೇವಸ್ಥಾನದ ಅಭಿವೃದ್ಧಿಗಾಗಿ 2017ರಲ್ಲಿ ವ್ಯವಸ್ಥಾಪನಾ ಸಮಿತಿ ರಚನೆಯಾಗಿ ಅದರ ಅವಧಿ ಮೂರು ವರ್ಷಗಳಾಗಿತ್ತು. ಆದರೆ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯಿ ದತ್ತಿಗಳ ಅಧಿನಿಯಮ 1997 ಮತ್ತು ನಿಯಮಾವಳಿಗಳು 2002ರ ಅನ್ವಯ ಕರ್ತವ್ಯ ನೆರೆವೇರಿಸಲು ವಿಫಲವಾಗಿದ್ದು, ಮತ್ತು ಅಧ್ಯಕ್ಷರ ಆಯ್ಕೆ ವಿಚಾರ ಮತ್ತು ಸದಸ್ಯರ ಮೇಲಿನ ದೂರುಗಳ ವಿಚಾರಣೆ ಇರುವುದರಿಂದ ದೇವಸ್ಥಾನದ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿದ್ವು ಇದರಿಂದ ಅಪರ ಜಿಲ್ಲಾಧಿಕಾರಿಗಳು ವ್ಯವಸ್ಥಾಪನಾ ಸಮಿತಿಯನ್ನು ಅಮಾನತ್ತಿನಲ್ಲಿರಿಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.