ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಹುಂಡಿ ಎಣಿಕೆ ಕಾರ್ಯಕ್ರಮ ಇಂದು ನಡೆಯಿತು. ಹುಂಡಿಯಲ್ಲಿನ ಹಣವನ್ನು ಎಣಿಕೆ ಮಾಡಿದಾಗ ಹಣ ಸಂಗ್ರಹದಲ್ಲಿ ಗಣನೀಯ ಪ್ರಮಾಣದ ಕುಸಿತ ಕಂಡುಬಂದಿದೆ.
ಮೇ ತಿಂಗಳಲ್ಲಿ ಸಂಗ್ರಹವಾದ ಹಣ ಎಣಿಕೆ ಮಾಡಲಾಗಿದ್ದು, ಕಳೆದ ತಿಂಗಳಲ್ಲಿ ಸಂಗ್ರಹವಾಗಿದ್ದ ಹಣಕ್ಕಿಂತ ಈ ಬಾರಿ ಕಡಿಮೆಯಾಗಿದೆ. 2ಗ್ರಾಂ ಚಿನ್ನ ,1250 ಗ್ರಾಂ ಬೆಳ್ಳಿ ಸೇರಿದಂತೆ ಒಟ್ಟು 28,18,831 ಲಕ್ಷ ರೂಪಾಯಿ ಹಣ ಸಂಗ್ರಹವಾಗಿದೆ. ಕಳೆದ ತಿಂಗಳಲ್ಲಿ 40 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾಗಿತ್ತು.ಅದರೆ ಮೇ ತಿಂಗಳಲ್ಲಿ ಗಣನೀಯ ಪ್ರಮಾಣದಲ್ಲಿ ಹಣ ಕುಸಿತಗೊಂಡಿದ್ದು ಆಡಳಿತ ಮಂಡಳಿ ನಿರಾಸೆಗೆ ಕಾರಣವಾಗಿದೆ.
ಮೇ ತಿಂಗಳಲ್ಲಿ ಪ್ರಮುಖವಾಗಿ ಎಸ್ಎಸ್ಎಲ್ಸಿ, ಪಿಯುಸಿ, ಪದವಿ ಪರೀಕ್ಷೆಗಳಿದ್ದ ಕಾರಣ, ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿರುವುದೇ ಇದಕ್ಕೆ ಕಾರಣ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.
ಹಣ ಎಣಿಕೆಯಲ್ಲಿ ಯುರೋಪ್, ಅಮೆರಿಕ, ಮಲೇಷ್ಯಾ, ದುಬೈ ದೇಶದ ಕರೆನ್ಸಿ ನೋಟುಗಳು ಸಿಕ್ಕಿದೆ ಜೊತೆಗೆ ನಿಷೇಧಿತ 500 ರೂಪಾಯಿಯ 40 ನೋಟ್ ಸಿಕ್ಕಿದೆ.