ETV Bharat / state

ಏ.26ಕ್ಕೆ ಘಾಟಿ ಸುಬ್ರಹ್ಮಣ್ಯದಲ್ಲಿ  ಉಚಿತ ಸಾಮೂಹಿಕ ವಿವಾಹ - ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಉಚಿತ ಸಾಮೂಹಿಕ ವಿವಾಹ

ಏ. 26ರಂದು ಕರ್ನಾಟಕ ಸರ್ಕಾರದ‌‌ ಧಾರ್ಮಿಕ ದತ್ತಿ ಇಲಾಖೆಯಿಂದ ರಾಜ್ಯದ ಪ್ರವರ್ಗ ಎ ದೇವಾಲಯಗಳಲ್ಲಿ ಉಚಿತ ಸಾಮೂಹಿಕ ವಿವಾಹ  ಕಾರ್ಯಕ್ರಮ ಅಯೋಜಿಸಲಾಗಿದೆ. ಮುಖ್ಯವಾಗಿ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ, ಶಿವಗಂಗೆಯ ಗಂಗಧಾರೇಶ್ವರ ಸ್ವಾಮಿ ಸನ್ನಿಧಿ ಹೊನ್ನದೇವಿ, ಶಿವಗಂಗೆ ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ.

Free mass wedding at Ghati Subramanya temple
ಘಾಟಿ ಸುಬ್ರಹ್ಮಣ್ಯ ದೇವಸ್ಥಾನ
author img

By

Published : Feb 22, 2020, 5:28 PM IST

Updated : Feb 22, 2020, 6:18 PM IST

ಬೆಂಗಳೂರು ಗ್ರಾಮಾಂತರ : ಕರ್ನಾಟಕ ಸರ್ಕಾರದ‌‌ ಧಾರ್ಮಿಕ ದತ್ತಿ ಇಲಾಖೆ ರಾಜ್ಯದ ಪ್ರವರ್ಗ ಎ ದೇವಾಲಯಗಳಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜನೆ ಮಾಡಿದೆ.

ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏ.26 ರಂದು ಉಚಿತ ಸಾಮೂಹಿಕ ವಿವಾಹ

ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಪ್ರವರ್ಗ ಎ ದೇವಾಲಯಗಳಾದ ದೊಡ್ಡಬಳ್ಳಾಪುರ ತಾಲೂಕಿನ ಎಸ್.ಎಸ್.ಘಾಟಿಯ ಶ್ರೀ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ, ನೆಲಮಂಗಲ ತಾಲೂಕಿನ ಶ್ರೀ ಗಂಗಾಧರೇಶ್ವರಸ್ವಾಮಿ, ಹೊನ್ನದೇವಿ, ಶಿವಗಂಗೆ ದೇವಾಲಯಗಳಲ್ಲಿ ಏ.26 ರಂದು ಸಾಮೂಹಿಕ ವಿವಾಹ ಕಾರ್ಯಕ್ರಮಗಳು ನಡೆಯಲಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆಸಕ್ತ ವಧು-ವರರು ಘಾಟಿ ಮತ್ತು ಶಿವಗಂಗೆಯ ದೇವಸ್ಥಾನದಲ್ಲಿ ನೋಂದಣಿ ಮಾಡಿಕೊಂಡು ಸಾಮೂಹಿಕ ವಿವಾಹದಲ್ಲಿ ಭಾಗವಹಿಸಬಹುದು. ವರನಿಗೆ ಹೂವಿನ ಹಾರ, ಪಂಚೆ - ಶಲ್ಯ ಖರೀದಿಗೆ 5 ಸಾವಿರ ನಗದು ಹಾಗೂ ವಧುವಿಗೆ ‌ಹೂವಿನ ಹಾರ, ಧಾರೆ‌ ಸೀರೆ, ರವಿಕೆ ಖರೀದಿಗಾಗಿ‌ 10‌ ಸಾವಿರ ನಗದು, ಸುಮಾರು 40 ‌ಸಾವಿರ ವೆಚ್ಚದಲ್ಲಿ ಚಿನ್ನದ ತಾಳಿ, ಅಂದಾಜು 8 ಗ್ರಾಂ ತೂಕದ ಎರಡು ಚಿನ್ನದ ಗುಂಡುಗಳನ್ನು‌ ನೀಡಲಾಗುವುದು ಎಂದು ಧಾರ್ಮಿಕ ದತ್ತಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Last Updated : Feb 22, 2020, 6:18 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.