ದೇವನಹಳ್ಳಿ: ಪಟ್ಟಣದ ಪುರಸಭೆ ಆವರಣದಲ್ಲಿ ಮಾಜಿ ಪುರಸಭಾ ಸದಸ್ಯರ ತಂಗಿ ಶವ ನೇಣು ಬೀಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಹಿಳೆಯ ಸಾವು ಹಲವು ಸಂಶಯಕ್ಕೆ ಕಾರಣವಾಗಿದೆ.
ಶಿಡ್ಲಘಟ್ಟ ಮೂಲದ ಗೌರಮ್ಮ (46) ಎಂಬಾಕೆಯ ಶವ ಪುರಸಭೆಯ ಆವರಣದಲ್ಲೇ ಪತ್ತೆಯಾಗಿದೆ. ಮೃತ ಗೌರಮ್ಮ ಮೂಲತಃ ದೇವನಹಳ್ಳಿ ಪಟ್ಟಣದವರು. ಈಕೆಯನ್ನು ಶಿಡ್ಲಘಟ್ಟಕ್ಕೆ ಮದುವೆ ಮಾಡಿಕೊಡಲಾಗಿತ್ತು. ಆದರೆ, ಕಳೆದ ಮೂರು ದಿನಗಳ ಹಿಂದೆ ಅವರು ತವರು ಮನೆಗೆ ಬಂದಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಘಟನೆ ಸಂಬಂಧ ದೇವನಹಳ್ಳಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತಳ ಶವವನ್ನು ಶವಾಗಾರಕ್ಕೆ ಸಾಗಿಸಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಮಹಾಂತ ನರೇಂದ್ರ ಗಿರಿ ಮೃತದೇಹ ಪತ್ತೆ.. ಸ್ಥಳದಲ್ಲಿ ಸೊಸೈಡ್ ನೋಟ್ ಲಭ್ಯ..