ETV Bharat / state

ಸಚಿವ ಸಂಪುಟ ವಿಸ್ತರಣೆಯಲ್ಲಿ ತ್ಯಾಗ ಮಾಡಿ ಬಂದವರಿಗೆ ಮೊದಲ ಆದ್ಯತೆ: ಆರ್​.ಅಶೋಕ್​ - Revenue Minister Ashok

ಸಚಿವ ಸಂಪುಟ ವಿಸ್ತರಣೆ ವೇಳೆ ಮೂಲ ಬಿಜೆಪಿಗರು ಮತ್ತು ಇತರ ಪಕ್ಷದಿಂದ ಬಂದವರು ಎಂಬ ಗೊಂದಲಗಳಿಗೆ ತೆರೆ ಎಳೆದು ಅನರ್ಹ ಶಾಸಕರಿಗೆ ಮೊದಲ ಆದ್ಯತೆಯಂತೆ ಸ್ಥಾನ ನೀಡಲಾಗುವುದು. ಮುಂದಿನ ದಿನಗಳಲ್ಲಿ ಮೂರು ಬಾರಿ ಗೆದ್ದ ಪಕ್ಷದ ನಿಷ್ಠರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಸಚಿವ ಆರ್​.ಅಶೋಕ್​ ತಿಳಿಸಿದ್ದಾರೆ.

First priority for those who make sacrifices
ವಿವಿಧ ಕಾರ್ಯಕ್ರಮಗಳಿಗೆ ಸಿಎಂ ಚಾಲನೆ ನೀಡಿದರು
author img

By

Published : Feb 4, 2020, 7:48 PM IST

ಆನೇಕಲ್ : ಬೆಂಗಳೂರು ನಗರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್​ ವತಿಯಿಂದ ತಾಲೂಕಿನ ಸರ್ಜಾಪುರದಲ್ಲಿ ಆಯೋಜಿಸಿದ್ದ ಫಲಾನುಭವಿಗಳಿಗೆ ಸವಲತ್ತು ವಿತರಿಸುವ, ವಿವಿಧ ಕಾಮಗಾರಿಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ಕಾರ್ಯಕ್ರಮಕ್ಕೆ ಸಿಎಂ ಬಿ.ಎಸ್.​ ಯಡಿಯೂರಪ್ಪ ಚಾಲನೆ ನೀಡಿದರು.

ಆನೇಕಲ್‌ನಲ್ಲಿ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳಿಗೆ ಸಿಎಂ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವ ಆರ್​.ಅಶೋಕ್​ ಮಾತನಾಡಿ, ಸಚಿವ ಸಂಪುಟ ವಿಸ್ತರಣೆ ವೇಳೆ ಮೂಲ ಬಿಜೆಪಿಗರು ಮತ್ತು ಇತರ ಪಕ್ಷದಿಂದ ಬಂದವರು ಎಂಬ ಗೊಂದಲಗಳಿಗೆ ತೆರೆ ಎಳೆದು ಅನರ್ಹ ಶಾಸಕರಿಗೆ ಮೊದಲ ಆದ್ಯತೆಯಂತೆ ಸ್ಥಾನ ನೀಡಲಾಗುವುದು. ಮುಂದಿನ ದಿನಗಳಲ್ಲಿ ಮೂರು ಬಾರಿ ಗೆದ್ದ ಪಕ್ಷನಿಷ್ಠರಿಗೆ ಅವಕಾಶ ಕಲ್ಪಿಸಲಾಗುವುದು. ಸಿಎಂ ಯಡಿಯೂರಪ್ಪ ರಾಜಹುಲಿ ನಾಲ್ಕು ಬಾರಿ ಮುಖ್ಯಮಂತ್ರಿಯಾದವರು, ಎಲ್ಲವನ್ನೂ ನಿಭಾಯಿಸ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಆನೇಕಲ್ ಶಾಸಕ ಬಿ.ಶಿವಣ್ಣ, ಬೆಂಗಳೂರು ದಕ್ಷಿಣ ಶಾಸಕ ಕೃಷ್ಣಪ್ಪ, ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ, ಎಸ್ಟಿ ಸೋಮಶೇಖರ್, ಸಂಸದ ಸಿ.ಮನೋಹರ್ ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.