ಆನೇಕಲ್: ಆಕಸ್ಮಿಕವಾಗಿ ಕೆಮಿಕಲ್ ಕಾರ್ಖಾನೆಗೆ ಬೆಂಕಿ ಬಿದ್ದು ಅಪಾರ ಪ್ರಮಾಣದ ರಾಸಾಯನಿಕ ನಾಶವಾದ ಘಟನೆ ಇಂದು ಬೆಳಗಿನ ಜಾವ 3.30ಕ್ಕೆ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಬಾಲ್ ಫಾರ್ಮಾ ಲಿಮಿಟೆಡ್ ಕಂಪನಿಯಲ್ಲಿ ನಡೆದಿದೆ.
ಕಂಪನಿಯ ಕೆಮಿಕಲ್ ದಾಸ್ತಾನು ಕೊಠಡಿಗೆ ಮಳೆನೀರು ನುಗ್ಗಿದ ಪರಿಣಾಮ ಆಲ್ಕೋಹಾಲ್‌ಯುಕ್ತ ಕೆಮಿಕಲ್ ಸಂಯೋಗಗೊಂಡು ಬೆಂಕಿ ಕಾಣಿಸಿಕೊಂಡಿದೆ. ಮಾತ್ರೆಗೆ ಬೇಕಾಗುವ ಕಚ್ಚಾ ರಾಸಾಯನಿಕವನ್ನು ಉತ್ಪಾದಿಸಿ ಸರಬರಾಜು ಮಾಡುವ ದಾಸ್ತಾನು ಕಂಪನಿ ಇದಾಗಿದೆ.
ಘಟನೆಯಲ್ಲಿ ಅಪಾರ ಪ್ರಮಾಣದ ಐಎಸ್ಒ ಪ್ರಾಪೆಲ್ ಆಲ್ಕೋಹಾಲ್, ಝಿಂಕ್ ಪೌಡರ್, ಎಥಿಲಿಸಿಟೇಟ್ ಮತ್ತು 200 ಖಾಲಿ ಡ್ರಂಗಳು ಬೆಂಕಿಗೆ ನಾಶವಾಗಿವೆ. ಸ್ಥಳಕ್ಕೆ ಬಂದ ಎಲೆಕ್ಟ್ರಾನಿಕ್ ಸಿಟಿ ಮೂರು ಅಗ್ನಿಶಾಮಕ ದಳದ 20 ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.