ನೆಲಮಂಗಲ(ಬೆಂಗಳೂರು): ರೈತರಿಂದ ರಾಗಿ ಖರೀದಿ ಪ್ರಕ್ರಿಯೆ ಪ್ರಾರಂಭವಾಗಿದೆ. ರಾಗಿ ಖರೀದಿಗಾಗಿ ನೋಂದಣಿ ಮಾಡಿಸಲು ರೈತರು ಸುಡುವ ಬಿಸಿಲಿನಲ್ಲಿ ಕಿಲೋ ಮಿಟರ್ನಷ್ಟು ಸರದಿ ಸಾಲಿನಲ್ಲಿ ಕಾಯುತ್ತಿದ್ದರು. ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಇದನ್ನು ಗಮನಿಸಿ, ರೈತರಿಗಾಗಿ ಶಾಮಿಯಾನ ಮತ್ತು ಊಟದ ವ್ಯವಸ್ಥೆ ಮಾಡಿಸಿದ್ದಾರೆ.
ಬೆಂಗಳೂರ ಗ್ರಾಮಾಂತರ ಜಿಲ್ಲೆಯಲ್ಲಿ ರಾಗಿ ಪ್ರಮುಖ ಬೆಳೆ, ಈ ಬಾರಿ ಉತ್ತಮ ಮಳೆಯಿಂದ ಉತ್ತಮ ಫಸಲು ಸಹ ಬಂದಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿ ಪ್ರಕ್ರಿಯೆ ಪ್ರಾರಂಭವಾಗಿದೆ. ಮೊದಲ ಹಂತವಾಗಿ ರೈತರಿಂದ ರಾಗಿ ಖರೀದಿಯ ನೋಂದಣಿ ಕಾರ್ಯ ಪ್ರಾರಂಭವಾಗಿದೆ.
ಆದರೆ, ನೋಂದಣಿ ಕಾರ್ಯ ನೆಲಮಂಗಲ ನಗರದಿಂದ ದೂರದಲ್ಲಿ ನಡೆಯುತ್ತಿದೆ. ಅಲ್ಲಿ ರೈತರಿಗೆ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಇಲ್ಲ, ಸುಡುವ ಬಿಸಿಲಿನಲ್ಲಿ ಗಂಟೆಗಟ್ಟಲೇ ಕಾದು ರಾಗಿ ಖರೀದಿಯ ನೋಂದಣಿಯನ್ನು ರೈತರು ಮಾಡಿಸಬೇಕಿದೆ. ನೋಂದಣಿ ಕೇಂದ್ರದಲ್ಲಿ ಕೇವಲ ಎರಡು ಕಂಪ್ಯೂಟರ್ ಇದೆ. ಆದರೆ ರೈತರು ಸಾವಿರದ ಸಂಖ್ಯೆಯಲ್ಲಿದ್ದಾರೆ. ಕಿ.ಮೀ ಗಟ್ಟಲೇ ಸರದಿ ಸಾಲಿನಲ್ಲಿ ರೈತರು ನಿಂತು ನೋಂದಣಿ ಮಾಡಿಸಬೇಕಿದೆ.
ಅಂತೆಯೇ ಸ್ಥಳೀಯ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಅವರು ಸರದಿ ಸಾಲಿನಲ್ಲಿ ನಿಂತಿರುವ ರೈತರಿಗೆ ನೆರಳಿನ ವ್ಯವಸ್ಥೆ ಮಾಡಿಸಲು ಶಾಮಿಯಾನ ಹಾಕಿಸಿದ್ದಾರೆ ಮತ್ತು ಊಟದ ವ್ಯವಸ್ಥೆ ಮಾಡುವ ಮೂಲಕ ರೈತರ ಕಷ್ಟಕ್ಕೆ ಸ್ಪಂದಿಸಿದ್ದಾರೆ.
ಇದನ್ನೂ ಓದಿ: ಚರ್ಮಗಂಟು ರೋಗದಿಂದ ಮೃತಪಟ್ಟ ಜಾನುವಾರುಗಳಿಗೆ ಪರಿಹಾರ: ಸಚಿವ ಪ್ರಭು ಚವ್ಹಾಣ್