ದೊಡ್ಡಬಳ್ಳಾಪುರ : ಐದು ವರ್ಷಗಳಿಂದ ಬೆವರು ಹರಿಸಿ ಬೆಳೆಸಿದ ಅಡಿಕೆ ತೋಟದಲ್ಲಿ ವಿದ್ಯುತ್ ತಂತಿ ಅಳವಡಿಸುವುದನ್ನು ವಿರೋಧಿಸಿ ರೈತ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಶ್ರೀರಾಮನಹಳ್ಳಿ ಗ್ರಾಮದ 52 ವರ್ಷದ ರೈತ ರಂಗಪ್ಪ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ರೈತ.
ಕೆಪಿಟಿಸಿಎಲ್ ಅಧಿಕಾರಿಗಳು ಇಂದು ತೋಟದೊಳಗೆ ವಿದ್ಯುತ್ ತಂತಿ ಅಳವಡಿಸುವುದರಿಂದ ರೈತನ 300 ಅಡಿಕೆ ಮರಗಳಿಗೆ ಕುತ್ತು ಬರಲಿದೆ. ಇದಕ್ಕೆ ಸರ್ಕಾರ 9 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಆದರೆ ರೈತ ತಾವು ಈ ಮೊತ್ತವನ್ನು ಒಂದೇ ವರ್ಷದಲ್ಲಿ ಈ ಮರಗಳಿಂದ ಸಂಪಾದಿಸಬಹುದು. ಸರ್ಕಾರ ನ್ಯಾಯಯುತವಾದ ಪರಿಹಾರ ನೀಡದೇ ತೋಟದಲ್ಲಿ ಕಾಮಗಾರಿ ಮಾಡುವಂತಿಲ್ಲ ಎಂದು ಹೇಳುತ್ತಿದ್ದಾರೆ.
ಕೆಪಿಟಿಸಿಎಲ್ನ ಕಾಮಗಾರಿ ವಿರುದ್ಧ ಕೋರ್ಟ್ನಲ್ಲಿ ದಾವೆ ಹೂಡಿದ್ದ ರಂಗಪ್ಪ: ವಿಚಾರಣೆ ನಡೆಸಿದ ನ್ಯಾಯಾಲಯ ರಂಗಪ್ಪ ಅವರ ಅರ್ಜಿಯನ್ನ ವಜಾ ಮಾಡಿತ್ತು. ಇದರ ಆಧಾರದ ಮೇಲೆ ಇಂದು ಕೆಪಿಟಿಸಿಎಲ್ ಅಧಿಕಾರಿಗಳು ಪೊಲೀಸ್ ಬೆಂಗಾವಲಿನೊಂದಿಗೆ ವಿದ್ಯುತ್ ಲೈನ್ ಅಳವಡಿಕೆಗೆ ಮುಂದಾಗಿದ್ದಾರೆ. ಅಧಿಕಾರಿಗಳ ನಡೆಗೆ ಮನನೊಂದ ರಂಗಪ್ಪ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಚಾಮರಾಜನಗರದಲ್ಲಿ ಇಬ್ಬರ ಮೇಲೆ ಎಗರಿದ ಹುಲಿರಾಯ.. ವ್ಯಾಘ್ರ ಭೀತಿಯಲ್ಲಿ ಜನತೆ