ನೆಲಮಂಗಲ : ಬರಗೇನಹಳ್ಳಿಯ VSSN ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಮಾಚನಹಳ್ಳಿ ಪಟ್ಟಾಭಿರಾಮಯ್ಯ ಹಾಗೂ ಉಪಾಧ್ಯಕ್ಷರಾಗಿ ತಿಮ್ಮಪ್ಪ ಅವಿರೋಧವಾಗಿ ಆಯ್ಕೆಯಾದರು.
ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಘೋಷಣೆಯಾಗುತ್ತಿದ್ದಂತೆ ನೂತನ ಪದಾಧಿಕಾರಿಗಳ ಬೆಂಬಲಿಗರು ಹಾಗೂ ಮುಖಂಡರುಗಳು ಪಟಾಕಿ ಸಿಡಿಸಿ, ಹಾರ ಹಾಕಿ ಮತ್ತು ಸಿಹಿ ವಿತರಿಸಿ ಸಂಭ್ರಮಿಸಿದರು. ನೂತನ ಅಧ್ಯಕ್ಷರ ಆಯ್ಕೆಯಾದ ಮಾಚನಹಳ್ಳಿ ಪಟ್ಟಾಭಿರಾಮಯ್ಯ ಮಾತನಾಡಿ 13 ಜನ ನಿರ್ದೇಶಕರನ್ನು ಒಳಗೊಂಡಿರುವ ಬರಗೇನಹಳ್ಳಿ ವಿಎಸ್‍ಎಸ್‍ಎನ್ ಸಹಕಾರ ಸಂಘಕ್ಕೆ ನನ್ನನ್ನು ಮುಂದಿನ 5 ವರ್ಷಗಳ ಕಾಲಕ್ಕೆ ಅವಿರೋಧವಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ನಿರ್ದೇಶಕರುಗಳಿಗೆ ಅಭಿನಂದಿಸುತ್ತೇನೆ ಎಂದರು.
ಇನ್ನು, ಸಹಕಾರ ಸಂಘದಿಂದ ರೈತರಿಗೆ ಸಿಗಬೇಕಾದ ಸಾಲ ಸೌಲಭ್ಯ ಸೇರಿ ಹಲವಾರು ಯೋಜನೆಗಳಿಂದ ಬರುವ ಅನುದಾನ ಹಾಗೂ ಸಹಾಯಕ್ಕೆ ನಾವು ಸದಾ ಸಿದ್ದರಿರುತ್ತೇವೆ ಎಂದು ಹೇಳಿದ್ದಾರೆ.