ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ದೇವರಿಗೆ ಬಿಟ್ಟಿದ್ದ ಮೇಕೆಯೊಂದು ಬಾಲಕಿಗೆ ಗುದ್ದಿದೆ. ಈ ಬಗ್ಗೆ ಮಾಲೀಕನನ್ನು ಪ್ರಶ್ನಿಸಿದ್ದಕ್ಕೆ ಆಕೆಯ ಅಜ್ಜನ ಮೇಲೆ ಹಲ್ಲೆ ನಡೆದಿದೆ. ಪರಿಣಾಮ ವೃದ್ದ ಎದೆನೋವಿನಿಂದ ಮೃತಪಟ್ಟಿದ್ದಾರೆ.
ತಾಲೂಕಿನ ಬಿಸುವನಹಳ್ಳಿಯಲ್ಲಿ ಘಟನೆ ನಡೆದಿದೆ. ಚಂದ್ರಶೇಖರ್ (65 ವರ್ಷ) ಮೃತಪಟ್ಟಿದ್ದಾರೆ. ಇದೇ ಗ್ರಾಮದ ರವಿಕುಮಾರ್ ದೇವರಿಗೆ ಮೇಕೆಯೊಂದನ್ನು ಬಿಟ್ಟಿದ್ದರು. ಈ ಮೇಕೆ ಮೃತರಾದ ಚಂದ್ರಶೇಖರ್ ಮೊಮ್ಮಗಳಿಗೆ ಗುದ್ದಿದೆ. ಹೀಗಾಗಿ ಮೇಕೆಯನ್ನು ಕಟ್ಟಿ ಹಾಕುವಂತೆ ರವಿಕುಮಾರ್ ಅವರು ಮಾಲೀಕ ಚಂದ್ರಶೇಖರ್ಗೆ ಹೇಳಿದ್ದಾರೆ.
ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿ ಪರಿಸ್ಥಿತಿ ಕೈ ಮೀರಿ ಹೋಗಿದೆ. ಸಿಟ್ಟಿನಿಂದ ರವಿಕುಮಾರ್, ಚಂದ್ರಶೇಖರ್ ಎದೆಗೆ ಒದ್ದಿದ್ದಾನೆ. ಪರಿಣಾಮ ಎದೆ ನೋವಿನಿಂದ ಚಂದ್ರಶೇಖರ್ ಅಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಘಟನೆ ನಂತರ ಆರೋಪಿ ಪರಾರಿಯಾಗಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಉತ್ತರ ಕರ್ನಾಟಕದಲ್ಲಿ ಕುಮಾರ ಪರ್ವ: ಮಾಜಿ ಸಿಎಂಗೆ ಹಳ್ಳಿ - ಹಳ್ಳಿಯಲ್ಲಿ ಅದ್ಧೂರಿ ಸ್ವಾಗತ