ಬೆಂಗಳೂರು: ಡ್ರಗ್ಸ್ ಜಾಲದಲ್ಲಿ ಬಂಧಿತರಾದ ನಟಿ ರಾಗಿಣಿ ಆಪ್ತನ ವಿಚಾರಣೆ ನಡೆಸುತ್ತಾ ಹೋದಂತೆ ಬಹಳ ರೋಚಕ ಕಹಾನಿಗಳು ತನಿಖೆಯಲ್ಲಿ ತಿಳಿದು ಬರ್ತಿದೆ.
ಪೊಲೀಸ್ ಸಮವಸ್ತ್ರ ಹಾಕಿ ದೊಡ್ಡ ದೊಡ್ಡ ಪಾರ್ಟಿ ಆಯೋಜನೆ ಮಾಡ್ತಿದ್ದ ವೀರೇನ್ ಖನ್ನಾ ಸದ್ಯ ಪೊಲೀಸರ ವಶದಲ್ಲಿದ್ದು, ಈತ ಡ್ರಗ್ಸ್ ಜಾಲಕ್ಕೆ ಸೆಳೆಯಲು ಉಚಿತ ಮದ್ಯ, ಹಾಗೆ ಹುಡುಗಿ ಜತೆ ಬಂದ್ರೆ ಮಾತ್ರ ಪಾರ್ಟಿಗೆ ಪ್ರವೇಶ, ಯಾಕಂದ್ರೆ ಪಾರ್ಟಿ ರಂಗೇರಿಸಲು ಯುವಕರನ್ನ ಟಾರ್ಗೆಟ್ ಮಾಡ್ತಿದ್ದ ವಿಚಾರ ತನಿಖೆ ವೇಳೆ ಬಯಲಾಗಿದೆ.
ವಿರೇನ್ ಖನ್ನಾ ಮಾಡುತ್ತಿದ್ದ ,ಹೈ- ಫೈ ಪಾರ್ಟಿಗಳಲ್ಲಿ ಯುವತಿಯರಿಗೆ ಮೊದಲ ಆದ್ಯತೆ ಇದ್ದು, ಮೊದಲ ಬಾರಿ ಪ್ರವೇಶ ಮಾಡುವರಿಗೆ ಉಚಿತ ಆಹಾರ ಹಾಗೂ ಮದ್ಯದ ಸರಬರಾಜು ಮಾಡುತ್ತಿದ್ದ. ಹಾಗೆ ಈ ಮೂಲಕ ಡ್ರಗ್ಸ್ ನ ರುಚಿಯನ್ನ ಮೊದಲು ತೋರಿಸಲಾಗುತ್ತಿತ್ತು..ನಂತರದ ದಿನಗಳಲ್ಲಿ ಹಣ ಕೊಟ್ಟು ನಶೆಗಾಗಿ ಪಾರ್ಟಿಗೆ ಬರುತ್ತಿದ್ದರು..ಇನ್ನು ಪೇಜ್ -3 ಪಾರ್ಟಿಗೆ ಒಂದು ಗಂಟೆ ಮುಂಚಿತವಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಇನ್ವೈಟ್ ಮಾಡ್ತಿದ್ದ..ಹಾಗೆ ಕೆಲ ಸ್ಲೋಗನ್ ಹಾಕ್ತಿದ್ದ,ಯುವಕರು ಪಾರ್ಟಿಗೆ ಯುವತಿಯರೊಂದಿಗೆ ಬಂದರೆ ಮಾತ್ರ ಉಚಿತ ಪ್ರವೇಶ ಒಂದು ವೇಳೆ ಯುವಕನೊಬ್ಬನೇ ಪಾರ್ಟಿಗೆ ಬಂದರೆ ಪಾರ್ಟಿಗೆ ಪ್ರವೇಶ ಇರುತ್ತಿರಲಿಲ್ಲ..ಆದರೆ ಯುವತಿಯರು ಏಕಾಂಗಿಯಾಗಿ ಪಾರ್ಟಿಗೆ ಬಂದರೆ ಅವರಿಗೆ ಪ್ರವೇಶ ನೀಡಲಾಗುತ್ತಿತ್ತು..ಈ ಮೂಲಕ ಪಾರ್ಟಿಯ ಬೇಡಿಕೆ ಹೆಚ್ಚುವಂತೆ ನೋಡಿಕೊಂಡಿದ್ದ.ಪಾರ್ಟಿಯಲ್ಲಿ ಶ್ರೀಮಂತ ಹುಡುಗ-ಹುಡುಗಿಯರು ಕುಣಿದು ಕುಪ್ಪಳಿಸುತ್ತಿದ್ದರು. ಹಾಗೆ ಪಾರ್ಟಿಗಳಿಗೆ ರೆಗ್ಯುಲರ್ ಆಗಿ ಬರುವವರಿಗೆ ಫೇಸ್‌ಬುಕ್ ವಾಟ್ಸ್‌ಆ್ಯಪ್ ಇನ್‌ಸ್ಟಾಗ್ರಾಂಗಳಲ್ಲಿ ಮೆಸೇಜ್ ಮಾಡುತ್ತಿದ್ದ.. ಅಲ್ಲೇ ಪಾರ್ಟಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದ.. ಪಾರ್ಟಿಗಳಿಗೆ ಬರುವವರ ಮೊಬೈಲ್ ಸಂಖ್ಯೆ ಪಡೆದು ಮುಂದಿನ ಪಾರ್ಟಿಗಳಿಗೆ ಇನ್ವೈಟ್ ಮಾಡ್ತಿದ್ದ.ಸದ್ಯ ವೀರೇನ್ ಖನ್ನಾ ಮಾತ್ರ ಹೈ ಫೈ ಪಾರ್ಟಿ ಮಾಡುತ್ತಿರಲಿಲ್ಲ.ಸಹೋದರ ರಾಜ್ ಖನ್ನಾ ಕೂಡ ದಂಧೆಯಲ್ಲಿ ಭಾಗಿಯಾಗಿರುವ ವಿಚಾರ ತನಿಖೆಯಲ್ಲಿ ಬಯಲಾಗಿದೆ ಎನ್ನಲಾಗ್ತಿದೆ. ಈ ಬಗ್ಗೆ ಸದ್ಯ ಸಿಸಿಬಿ ಅನುಮಾನ ವ್ಯಕ್ತಪಡಿಸಿದ್ದು, ಇಬ್ಬರೂ ಮೊದಲಿಗೆ ಬೆಂಗಳೂರಿನಲ್ಲಿ ಒಟ್ಟಿಗೆ ಪಾರ್ಟಿ ಆಯೋಜಿಸುತ್ತಿದ್ದರು..ಸದ್ಯ ರಾಜ್ ಖನ್ನಾ ಆಸ್ಪ್ರೇಲಿಯಾಕ್ಕೆ ಹೋಗಿ ನೆಲೆಸಿದ್ದಾನೆ..ಬೇರೆ ಬೇರೆ ದೇಶಗಳಲ್ಲಿ ಜನರಿಗೆ ಬಾಲಿವುಡ್ ನಟರಿಗೆ ಪಾರ್ಟಿ ಆಯೋಜಿಸುತ್ತಿದ್ದ ರಾಜ್ ಖನ್ನಾ, ಅಲ್ಲೂ ಡ್ರಗ್ಸ್ ದಂಧೆ ನಡೆಸುತ್ತಿರುವ ಶಂಕೆ ಇದೆ ಎಂದು ಸಿಸಿಬಿ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದ್ದು, ಸದ್ಯ ಪೊಲೀಸರು ರಾಜ್ ಖನ್ನಾ ಬಗ್ಗೆ ತನಿಖೆ ಮುಂದುವರೆಸಿದ್ದಾರೆ .