ETV Bharat / state

ಸಚಿವ ಸುಧಾಕರ್​ಗೆ ಶಾಸಕ ಭೈರತಿ ಸುರೇಶ್​ ತಿರುಗೇಟು

ಕಾಂಗ್ರೆಸ್ ಪಕ್ಷದಿಂದ ಎರಡು ಬಾರಿ ಶಾಸಕರಾದಾಗ ಸುಧಾಕರ್ ಅವರಿಗೆ ಬುದ್ಧಿ ಇರಲಿಲ್ಲವಾ ಎಂದು ಶಾಸಕ ಭೈರತಿ ಸುರೇಶ್ ತಿರುಗೇಟು ನೀಡಿದ್ದಾರೆ.

Dr. MLA Birathi Suresh  statement
ಡಾ. ಕೆ ಸುಧಾಕರ್ ಹೇಳಿಕೆಗೆ ಶಾಸಕ ಬೈರತಿ ಸುರೇಶ್
author img

By

Published : Nov 20, 2020, 9:21 PM IST

ಬೆಂ.ಗ್ರಾಮಾಂತರ: ಕಾಂಗ್ರೆಸ್ ಪಕ್ಷವು ವಿರೋಧ ಪಕ್ಷವಾಗಿರಲು ಯೋಗ್ಯತೆ ಇಲ್ಲವೆಂದು ಹೇಳಿಕೆ ನೀಡಿದ ಸಚಿವ ಡಾ. ಕೆ.ಸುಧಾಕರ್ ಹೇಳಿಕೆಗೆ ಹೆಬ್ಬಾಳ ಶಾಸಕ ಬೈರತಿ ಸುರೇಶ್ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಎರಡು ಬಾರಿ ಬಿ-ಫಾರಂ ತೆಗೆದುಕೊಂಡು ಶಾಸಕರಾದಾಗ ಅವರಿಗೆ ಬುದ್ಧಿ ಇರಲಿಲ್ಲವಾ ಎಂದಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿಯ ನೂತನ ಅಧ್ಯಕ್ಷ ವಿ.ಪ್ರಸಾದ್ ಅವರಿಗೆ ಶುಭಾಶಯ ಕೋರಲು ಬಂದಿದ್ದ ಭೈರತಿ ಸುರೇಶ್, ಸಚಿವರಿಗೆ ಟಾಂಗ್ ನೀಡಿದರು.

ಶಾಸಕ ಭೈರತಿ ಸುರೇಶ್

ಮೈತ್ರಿ ಸರ್ಕಾರದಲ್ಲಿ ಸಾವಿರಾರು ಕೋಟಿ ಅನುದಾನ ತಗೊಂಡು ತಮ್ಮ ಕ್ಷೇತ್ರದ ಅಭಿವೃದ್ಧಿ ಜೊತೆಗೆ ಸ್ವಅಭಿವೃದ್ಧಿಯಾಗುವಾಗ ಬುದ್ಧಿ ಇರ್ಲಿಲ್ವಾ? ಅವರಿಗೆ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷ ಆಗಿರಲು ಯೋಗತ್ಯೆ ಇಲ್ಲ ಅನ್ನೋದು ಈಗ ಗೊತ್ತಾಯ್ತಾ ಎಂದು ಪ್ರಶ್ನೆ ಮಾಡಿದರು.

2023 ರಲ್ಲಿ ಕಾಂಗ್ರೆಸ್ 140ಕ್ಕೂ ಹೆಚ್ಚು ಸ್ಥಾನ ಗಳಿಸುತ್ತೆ. ಆಗ ಯಾರು ಎಲ್ಲಿರಬೇಕು ಅನ್ನೋದು ಗೊತ್ತಾಗುತ್ತೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.