ETV Bharat / entertainment

'ಖುಷಿಯ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದಿದೆ': ಸುಮಲತಾ ಅಂಬರೀಶ್​ - SUMALATHA AMBAREESH

ನಮಸ್ಕಾರ ಸ್ನೇಹಿತರೇ, ಒಂದು ಖುಷಿಯ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದಿದೆ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಶ್​ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ.

Sumalatha Ambareesh
ಸಂಗ್ರಹ ಚಿತ್ರ: ಸುಮಲತಾ - ಅಂಬರೀಶ್ (File Photo: ETV Bharat)
author img

By ETV Bharat Entertainment Team

Published : Nov 20, 2024, 6:28 PM IST

ಇತ್ತಿಚೆಗಷ್ಟೇ ಅಂಬಿ ಮನೆಗೆ ಬೇಬಿ ರೆಬೆಲ್​ ಆಗಮನವಾಗಿದೆ. ನವೆಂಬರ್​​ 12ರಮದು ನಟ ಅಭಿಷೇಕ್​ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ತಮ್ಮ ಮೊದಲ ಮಗುವನ್ನು ಬರಮಾಡಿಕೊಂಡರು. ಅಂಬಿ ಪುತ್ರ ತಂದೆಯಾಗಿ ಬಡ್ತಿ ಪಡೆದಿದ್ದು, ಇಂದು ರೆಬೆಲ್ ಲೇಡಿ ಸುಮಲತಾ ಅಂಬರೀಶ್ ಪೋಸ್ಟ್​ ಒಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.​

ಸುಮಲತಾ ಅಂಬರೀಶ್ ಪೋಸ್ಟ್​​: ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾ ಪ್ಲ್ಯಾಟ್​ಫಾರ್ಮ್​​ಗಳಲ್ಲಿ ಪೋಸ್ಟ್​ ಶೇರ್​ ಮಾಡಿರುವ ಮಾಜಿ ಸಂಸದೆ ಸುಮಲತಾ ಅಂಬರೀಶ್​, ''ನಮಸ್ಕಾರ ಸ್ನೇಹಿತರೇ, ಒಂದು ಖುಷಿಯ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದಿದೆ. ನವೆಂಬರ್ 12ರಂದು ನಮ್ಮ ಕುಟುಂಬಕ್ಕೆ ಅತ್ಯಂತ ಸಂತೋಷ ಹಾಗೂ ಅದೃಷ್ಟದ ದಿನ. ಈ ಶುಭ ದಿನದಂದು ದೇವರ ಕೃಪೆಯಿಂದ ನಮ್ಮ ಕುಟುಂಬಕ್ಕೆ ಗಂಡು ಮಗುವಿನ ಆಗಮನವಾಗಿದೆ. ಅಭಿ-ಅವಿವಾ ಈಗ ತಂದೆ-ತಾಯಿಯಾಗಿ, ನನಗೆ ಮೊಮ್ಮಗನ ಭಾಗ್ಯ ಒದಗಿಸಿಕೊಟ್ಟಿರುವುದು ಖುಷಿಯಾಗಿದೆ. ತಾಯಿ - ಮಗು ಆರೋಗ್ಯವಾಗಿದ್ದಾರೆ. ಈ ಸಂತೋಷದ ಸುದ್ದಿಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ನಮ್ಮ ಕುಟುಂಬದ ಮೇಲೆ ನಿಮ್ಮ ಆಶೀರ್ವಾದ ಸದಾ ಇರಲಿ'' ಎಂದು ಬರೆದುಕೊಂಡಿದ್ದಾರೆ.

Sumalatha Ambareesh
ಮಗುವಿನೊಂದಿಗೆ ಸುಮಲತಾ ಅಂಬರೀಶ್​ (Photo: ETV Bharat)

ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​, ಎಕ್ಸ್​ ಅಕೌಂಟ್​ಗಳಲ್ಲಿ ಹಂಚಿಕೊಂಡಿರುವ ಫೋಟೋ ಕನ್ನಡ ಚಿತ್ರರಂಗದ ದಿಗ್ಗಜ ನಟ ಅಂಬರೀಶ್​ ಅವರನ್ನು ಒಳಗೊಂಡಿದೆ. ಸುಂದರ ಫೋಟೋದ ಮೇಲೆ ಇಟ್ಸ್ ಅ ಬಾಯ್​, ಬೇಬಿ ರೆಬೆಲ್​, 12.11.2024'' ಎಂದು ಬರೆಯಲಾಗಿದೆ. ಜೊತೆಗೆರಡು ಪುಟ್ಟ ಹೆಜ್ಜೆಗಳು ಮತ್ತು ಹಾರ್ಟ್​​ ಸಿಂಬಲ್​ ಸಹ ಇದೆ. ಮಂಡ್ಯದ ಗಂಡು ಅಂಬಿ ಫೋಟೋ ಇರುವ ಹಿನ್ನೆಲೆ ಪೋಸ್ಟ್​ ಹೆಚ್ಚಿನವರ ಗಮನ ಸೆಳೆದಿದೆ.

ಇದನ್ನೂ ಓದಿ: ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ "ಕೃಷ್ಣಂ ಪ್ರಣಯ ಸಖಿ" ಚಿತ್ರಕ್ಕೆ ಶತದಿನದ ಸಂಭ್ರಮ

ಅಭಿಷೇಕ್​ ಅಂಬರೀಶ್ ಪೋಸ್ಟ್​: ಇತ್ತೀಚೆಗಷ್ಟೇ ಇದೇ ಫೋಟೋ ಹಂಚಿಕೊಂಡ ನಟ ಅಭಿಷೇಕ್​ ಅಂಬರೀಶ್, ''ಎಲ್ಲರಿಗೂ ನಮಸ್ಕಾರ, ನವೆಂಬರ್ 12ರಂದು ನಮ್ಮ ಕುಟುಂಬಕ್ಕೆ ಅತೀವ ಸಂತಸದ ದಿನ. ರೆಬೆಲ್ ಸ್ಟಾರ್ ಅಂಬರೀಶ್ ಅಣ್ಣನ ಆಶೀರ್ವಾದ, ಗುರು-ಹಿರಿಯರ ಆಶೀರ್ವಾದದಿಂದ ಗಂಡು ಮಗು ಜನಿಸಿದ್ದು, ತಾಯಿ- ಮಗು ಆರೋಗ್ಯವಾಗಿದ್ದಾರೆಂದು ಈ ಮೂಲಕ ತಮ್ಮೆಲ್ಲರಿಗೂ ತಿಳಿಸಲು ಇಚ್ಛಿಸುತ್ತೇನೆ'' ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆ: ಬಾಲಿವುಡ್​ ಖ್ಯಾತ ಸೆಲೆಬ್ರಿಟಿಗಳಿಂದ ಮತದಾನ - ಯಾರೆಲ್ಲ ಮತ ಚಲಾಯಿಸಿದರು ವಿಡಿಯೋ ನೋಡಿ!

ಅಭಿಷೇಕ್ ಅಂಬರೀಶ್​ ಹಾಗೂ​ ಅವಿವಾ ಬಿದ್ದಪ್ಪ ಪ್ರೀತಿಸಿ ಮದುವೆಯಾಗಿರುವ ಜೋಡಿ. 2023ರ ಜೂನ್ 7 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಸೆಮಣೆ ಏರಿದ್ದರು. ಅವಿವಾ, ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಮಗಳು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.