ETV Bharat / state

ಕೆಂಪೇಗೌಡ ಏರ್​ಪೋರ್ಟ್​ನಿಂದ ಬೋಯಿಂಗ್​ ವಿಮಾನ ಹಾರಾಟ ರದ್ದು... ಸಂಜೆ 4ರಿಂದ ಆದೇಶ ಜಾರಿ - International Airport Authority ordered

ಅಂತರಾಷ್ಟ್ರೀಯ ವಿಮಾನ ಪ್ರಾಧಿಕಾರ ಬೋಯಿಂಗ್ 737 MAX 8 ವಿಮಾನಗಳನ್ನು ಬಳಸದಂತೆ ಆದೇಶ‌ ನೀಡಿದ್ದು, ವಿಮಾನ ನಿಲ್ದಾಣದಿಂದ ಬೋಯಿಂಗ್ 737 MAX 8 ಹಾರಾಟ ರದ್ದು ಮಾಡಲಾಗಿದೆ.

ವಿಮಾನ ನಿಲ್ದಾಣ
author img

By

Published : Mar 13, 2019, 3:28 PM IST

ಬೆಂಗಳೂರು: ಅಂತಾರಾಷ್ಟ್ರೀಯ ವಿಮಾನ ಪ್ರಾಧಿಕಾರ ಬೋಯಿಂಗ್ 737 MAX 8 ವಿಮಾನಗಳನ್ನು ಬಳಸದಂತೆ ಆದೇಶ‌ ನೀಡಿದ್ದು, ಕೆಂಪೇಗೌಡ ವಿಮಾನ ನಿಲ್ದಾಣದಿಂದ ಬೋಯಿಂಗ್ 737 MAX 8 ಹಾರಾಟ ರದ್ದು ಮಾಡಲಾಗಿದೆ.

ನಿನ್ನೆ ರಾತ್ರಿ ಕೆಐಎಎಲ್​ಗೆ ಭಾರತೀಯ ವಿಮಾನ ಪ್ರಾಧಿಕಾರ ಆದೇಶ ನೀಡಿದ್ದು, ಇಂದು ಸಂಜೆ 4 ಗಂಟೆಯಿಂದ ಹಾರಾಟ ರದ್ದು ಮಾಡಲಾಗಿದೆ. ಕೆಐಎಎಲ್​ನಲ್ಲಿ ಈ ವಿಮಾನಗಳು ಎರಡು ದಿನಕ್ಕೊಮ್ಮೆ ಹಾರಾಟ ನೀಡುತ್ತಿದ್ದವು. ಕೆಲವೊಂದು ದಿನಗಳು ಹಾರಾಟವನ್ನೆ ನಡೆಸದೆ ಬೇರೆ ವಿಮಾನ ಅದರ ಬದಲು ಹಾರಾಟ ನಡೆಸುತ್ತಿದ್ದವು. ಇದೀಗ ಸಂಪೂರ್ಣವಾಗಿ ಬೋಯಿಂಗ್ 737 MAX 8 ವಿಮಾನ ಹಾರಾಟವನ್ನು ನಿಲ್ಲಿಸಲಾಗಿದೆ.

ವಿಮಾನ ನಿಲ್ದಾಣ

ತಾಂತ್ರಿಕ ತೊಂದರೆಯಿಂದ ಇಂಡೋನೇಷ್ಯ ಮತ್ತು ಇಥಿಯೋಪಿಯಾದಲ್ಲಿ ಇದೇ ಮಾಡೆಲ್ ವಿಮಾನಗಳು ಅಫಘಾತವಾಗಿದ್ದವು.ಇಥಿಯೋಪಿಯನ್ ಏರ್ ಲೈನ್ಸ್ 737 ಮ್ಯಾಕ್ಸ್ ವಿಮಾನ ಅಪಘಾತಗೊಂಡು 157 ಪ್ರಯಾಣಿಕರು ಮೃತಪಟ್ಟಿದ್ದರು. ಇನ್ನು ಅಕ್ಟೋಬರ್ ತಿಂಗಳಲ್ಲಿ ಇಂಡೋನೇಷ್ಯಾದಲ್ಲಿ ಇದೇ ಮಾದರಿಯ ವಿಮಾನ ಅಪಘಾತಗೊಂಡು 189 ಜನರು ಸಾವಿಗೀಡಾಗಿದ್ದರು. ಇದರಿಂದ ಹಾರಾಟಕ್ಕೆ ಯೋಗ್ಯವಲ್ಲ ಎಂಬ ನಿರ್ಧಾರವನ್ನು ಕೇಂದ್ರದ ಡಿಜಿಸಿಎ ಸೂಚನೆ ನೀಡಿತ್ತು.ಇದರಿಂದ ಬೋಯಿಂಗ್ 737 ವಿಮಾನಗಳ ಹಾರಾಟವನ್ನು ಇಡೀ‌‌ ದೇಶದಾದ್ಯಂತ ರದ್ದು ಮಾಡಿದ್ದು, ಕೆಐಎಎಲ್ ನಲ್ಲೂ ಇಂದು ಸಂಜೆಯಿಂದ ಹಾರಾಟ ರದ್ದಾಗಿದೆ.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.