ETV Bharat / state

2 ಸಾವಿರ ಕೆಜಿ ಗೋಮಾಂಸ ಸಾಗಾಟ : ನಾಲ್ವರು ಪೊಲೀಸ್​​ ವಶಕ್ಕೆ - ಅಕ್ರಮ ಗೋಮಾಂಸ ಸಾಗಾಟ

112 ವಾಹನದಲ್ಲಿ ಚೇಸಿಂಗ್ ನಡೆಸಿದ ಪೊಲೀಸರು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 2 ಸಾವಿರ ಕೆಜಿಗೂ ಅಧಿಕ ಗೋಮಾಂಸವನ್ನ ವಶಕ್ಕೆ ಪಡೆದಿದ್ದಾರೆ..

Doddaballapur
ಅಕ್ರಮ ಗೋಮಾಂಸ ಸಾಗಾಟ
author img

By

Published : May 22, 2022, 2:23 PM IST

ದೊಡ್ಡಬಳ್ಳಾಪುರ : ಹಿಂದೂಪುರದಿಂದ ಬೆಂಗಳೂರಿಗೆ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 112 ವಾಹನದಲ್ಲಿ ಚೇಸಿಂಗ್ ನಡೆಸಿದ ಪೊಲೀಸರು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 2 ಸಾವಿರ ಕೆಜಿಗೂ ಅಧಿಕ ಗೋಮಾಂಸವನ್ನ ವಶಕ್ಕೆ ಪಡೆದಿದ್ದಾರೆ.

ಹಿಂದೂಪರ ಸಂಘಟನೆ ಮುಖಂಡ ಆನಂದ್

ದೊಡ್ಡಬಳ್ಳಾಪುರ ವಿಭಾಗದ ಪೊಲೀಸರು ದೊಡ್ಡಬಳ್ಳಾಪುರ-ಹಿಂದೂಪುರ ರಸ್ತೆಯ ಗುಂಜೂರು ಬಳಿಯ ಕಾರ್ಯ ನಿಮಿತ್ತ ತೆರಳುತ್ತಿದ್ದರು. ಈ ವೇಳೆ ಕೆಟ್ಟು ನಿಂತಿದ್ದ ಟಾಟಾ ಏಸ್ ವಾಹನದಲ್ಲಿದ್ದವರನ್ನ ಮಾತನಾಡಿಸಲು ಮುಂದಾಗಿದ್ದಾರೆ. ಪೊಲೀಸರನ್ನು ಕಂಡ ಟಾಟಾ ಏಸ್​​ನಲ್ಲಿದ್ದವರು ಪರಾರಿಯಾಗಲು ಯತ್ನಿಸಿದ್ದಾರೆ.

ತಕ್ಷಣ 112 ವಾಹನದಲ್ಲಿ ಪೊಲೀಸರು ಚೇಸಿಂಗ್ ನಡೆಸಿ ಪರಾರಿಯಾಗಲು ಯತ್ನಿಸಿದವರನ್ನ ಹಿಡಿದಿದ್ದಾರೆ. ವಾಹನ ತಪಾಸಣೆ ನಡೆಸಿದ್ದಾಗ ಗೋಮಾಂಸ ಪತ್ತೆಯಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.