ETV Bharat / state

ನಮ್ಮ ಮಠಕ್ಕೆ ರಾಹುಲ್​ ಗಾಂಧಿ ಬಂದಿದ್ರು.. ನನ್ನನ್ನು ಇಡಿ ಅರ್ಜೆಂಟ್​ ವಿಚಾರಣೆಗೆ ಕರೆದಿದ್ದೇಕೆ? ಡಿಕೆಶಿ ಪ್ರಶ್ನೆ

ಇಡಿ ವಿಚಾರಣೆ ಒಂದು ಹಂತಕ್ಕೆ ಮುಕ್ತಾಯವಾಗಿದೆ. ಎರಡು ಮೂರು ದಿನಗಳಲ್ಲಿ ಕೆಲವು ದಾಖಲೆ ನೀಡುವಂತೆ ಕೇಳಿದ್ದಾರೆ. ನಾನು ಸಮಯಾವಕಾಶ ಕೋರಿದ್ದೇನೆ. ರಾಜಕಾರಣವನ್ನು ಫೀಲ್ಡ್​ನಲ್ಲಿ ಮಾಡಬೇಕೇ ಹೊರತು ತನಿಖಾ ಸಂಸ್ಥೆಯ ಕಚೇರಿಯಲ್ಲಿ ಅಲ್ಲ. ಭಾರತ್ ಜೋಡೋ ಪಾದಯಾತ್ರೆ ನಿಮಿತ್ತ ರಾಹುಲ್ ಗಾಂಧಿ ಅವರು ನಮ್ಮ ಭಾಗದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಪಕ್ಷದ ರಾಜ್ಯ ಅಧ್ಯಕ್ಷನಾಗಿದ್ದರೂ ನಾನು ಈ ಸಂದರ್ಭ ಯಾತ್ರೆಯಲ್ಲಿ ಭಾಗವಹಿಸಲು ಆಗಿಲ್ಲ. ಇಡಿ ಅರ್ಜೆಂಟ್​ ಆಗಿ ವಿಚಾರಣೆ ಮಾಡುವ ಅಗತ್ಯ ಏನಿತ್ತು? ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರಶ್ನಿಸಿದರು.

dk shivakumar
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್
author img

By

Published : Oct 8, 2022, 9:58 AM IST

ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): ನಮ್ಮ ಆದಿಚುಂಚನಗಿರಿ ಮಠಕ್ಕೆ ರಾಹುಲ್ ಗಾಂಧಿಯವರ ಭಾರತ್ ಜೋಡೋ ಪಾದಯಾತ್ರೆ ಬಂದಿದೆ. ಆದರೆ, ನಾನೇ ಇಲ್ಲ. ಅರ್ಜೆಂಟಾಗಿ ವಿಚಾರಣೆಗೆ ಹಾಜರಾಗುವಂತೆ ಇಡಿ ಕರೆಯುವಂತಹ ಪ್ರಮೇಯ ಏನಿತ್ತು? ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

ಯಂಗ್ ಇಂಡಿಯಾ ಸಂಸ್ಥೆಗೆ ದೇಣಿಗೆ ಹಣ ಕೊಟ್ಟಿರುವ ಬಗ್ಗೆ ಇಡಿ ವಿಚಾರಣೆಗಾಗಿ ದೆಹಲಿಗೆ ತೆರಳಿದ್ದ ಡಿ ಕೆ ಶಿವಕುಮಾರ್ ರಾತ್ರಿ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಇಡಿ ವಿಚಾರಣೆ ಒಂದು ಹಂತಕ್ಕೆ ಮುಕ್ತಾಯವಾಗಿದೆ. ಎರಡು ಮೂರು ದಿನಗಳಲ್ಲಿ ಕೆಲವು ದಾಖಲೆ ನೀಡುವಂತೆ ಕೇಳಿದ್ದಾರೆ. ನಾನು ಸಮಯಾವಕಾಶ ಕೋರಿದ್ದೇನೆ ಎಂದರು.

ಇದನ್ನೂ ಓದಿ: ಇಂದಿನ ಇಡಿ ವಿಚಾರಣೆ ಮುಕ್ತಾಯ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಹೇಳಿದ್ದೇನು?

ಯಂಗ್ ಇಂಡಿಯಾ ಸಂಸ್ಥೆಗೆ ಹಣ ನೀಡಿರುವ ಬಗ್ಗೆ ಅವರು ಮಾಹಿತಿ ಕೇಳಿದರು. ಜವಾಹರಲಾಲ್ ನೆಹರು ಹಾಗೂ ಗಾಂಧಿ ಅವರ ಕಾಲದಲ್ಲಿ ನಮ್ಮ ಮುಖಂಡರು ಮಾಡಿರುವ ಸಂಸ್ಥೆಗಳಿಗೆ ಈಗ ನಾವು ಹಣ ನೀಡಿದ್ದೇವೆ ಎಂದು ಹೇಳಿದ್ದೇವೆ. ಅವರು ನೀವು ಹಣ ಯಾಕೆ ಕೊಟ್ಟಿರಿ?, ಹೇಗೆ ಕೊಟ್ಟಿರಿ? ಅದರ ಮೂಲ ಏನು ಎಂದು ಕೇಳಿದ್ದಾರೆ ಎಂದು ತಿಳಿಸಿದರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಡಿಕೆಶಿ

ರಾಜಕಾರಣವನ್ನು ಫೀಲ್ಡ್​ನಲ್ಲಿ ಮಾಡಬೇಕೇ ಹೊರತು, ತನಿಖಾ ಸಂಸ್ಥೆಯ ಕಚೇರಿಯಲ್ಲಿ ಅಲ್ಲ. ಭಾರತ್ ಜೋಡೋ ಪಾದಯಾತ್ರೆ ನಿಮಿತ್ತ ರಾಹುಲ್ ಗಾಂಧಿ ಅವರು ನಮ್ಮ ಭಾಗದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಪಕ್ಷದ ರಾಜ್ಯ ಅಧ್ಯಕ್ಷನಾಗಿದ್ದರೂ ನಾನು ಇವತ್ತು ಯಾತ್ರೆಯಲ್ಲಿ ಭಾಗವಹಿಸಲು ಆಗಿಲ್ಲ. ಈಗ್ಲೇ ಈ ವಿಚಾರಣೆ ಮಾಡುವ ಅಗತ್ಯ ಏನಿತ್ತು?, ನಾನು ಅ. 23 ರ ನಂತರ ಯಾವುದೇ ದಿನ ವಿಚಾರಣೆಗೆ ಕರೆದರೂ ಬರುತ್ತೇನೆ ಎಂದು ಸಮಯ ಕೇಳಿದ್ದರೂ ಅವಕಾಶ ನೀಡಲಿಲ್ಲ ಎಂದು ಇಡಿಯ ವಿಚಾರಣೆ ಬಗ್ಗೆ ಡಿಕೆಶಿ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಇಡಿ ವಿಚಾರಣೆಗೆ ಹಾಜರಾದ ಕರ್ನಾಟಕ ಕಾಂಗ್ರೆಸ್​ ಅಧ್ಯಕ್ಷ ಡಿ ಕೆ ಶಿವಕುಮಾರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.