ETV Bharat / state

ಫುಟ್​ಬಾಲ್ ಆಟಗಾರನ ಕೊಠಡಿಯಿಂದ ₹22 ಲಕ್ಷ ಮೌಲ್ಯದ ವಜ್ರಾಭರಣ ದೋಚಿದ ಕಳ್ಳರು - Bengaluru Theft

ದೇವನಹಳ್ಳಿ ತಾಲೂಕಿನ ನಂದಿರಸ್ತೆಯಲ್ಲಿರುವ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್​ ವಿಲ್ಲಾ ನಂಬರ್ 175ರಲ್ಲಿ ಆಸ್ಟ್ರೇಲಿಯಾ ಮೂಲದ ಕ್ಲಬ್‌ ಫುಟ್​ಬಾಲ್ ಆಟಗಾರ ವೊಹಾನ್ ಟ್ರೋಲಪಿ ವಾಸವಾಗಿದ್ದರು. ಇವರು ಆಟವಾಡಲು ಹೊರಹೋಗಿದ್ದ ಸಂದರ್ಭದಲ್ಲಿ ಖದೀಮರು ಕೊಠಡಿಗೆ ನುಗ್ಗಿದ್ದಾರೆ.

Devanahalli Prestige Golfshire Resort
ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್​
author img

By

Published : Aug 30, 2021, 11:44 AM IST

Updated : Aug 30, 2021, 12:00 PM IST

ದೇವನಹಳ್ಳಿ: ಪ್ರೆಸ್ಟೀಜ್​ ಗಾಲ್ಫ್ ಶೈರ್ ರೆಸಾರ್ಟ್​ನ ವಿಲ್ಲಾದಲ್ಲಿ ವಾಸವಾಗಿದ್ದ ಆಸ್ಟ್ರೇಲಿಯಾ ಮೂಲದ ಕ್ಲಬ್‌ ಫುಟ್​ಬಾಲ್ ಆಟಗಾರನ ರೂಮ್​ಗೆ ನುಗ್ಗಿದ ಕಳ್ಳರು 22 ಲಕ್ಷದ ರೂ.ಮೌಲ್ಯದ ವಜ್ರಾಭರಣ ದೋಚಿ ಪರಾರಿಯಾಗಿದ್ದಾರೆ.

ದೇವನಹಳ್ಳಿ ತಾಲೂಕಿನ ನಂದಿರಸ್ತೆಯಲ್ಲಿರುವ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್​ ವಿಲ್ಲಾ ನಂಬರ್ 175ರಲ್ಲಿ ಫುಟ್​ಬಾಲ್ ಆಟಗಾರ ವೊಹಾನ್ ಟ್ರೋಲಪಿ ವಾಸವಾಗಿದ್ದರು. ಇವರು ನಗರದ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಆಟವಾಡಲು ಹೊರ ಹೋಗಿದ್ದ ಸಂದರ್ಭದಲ್ಲಿ ರೂಮ್​ಗೆ ನುಗ್ಗಿದ ಖದೀಮರು ಕೃತ್ಯ ಎಸಗಿದ್ದಾರೆ.

ಇನ್ನು ಆಗಸ್ಟ್​ 20ರಂದು ತಡರಾತ್ರಿ ರೂಮ್​ಗೆ ಬಂದ ವೊಹಾನ್​ ನೇರವಾಗಿ ಹೋಗಿ ಮಲಗಿದ್ದಾರೆ. ಮರುದಿನ ಬೆಳಗ್ಗೆ ಎದ್ದಾಗ ಕಳ್ಳತನ ನಡೆದಿರುವುದು ತಿಳಿದುಬಂದಿದೆ. ತಕ್ಷಣವೇ ಪತ್ನಿಯ ರೂಮ್​ಗೆ ತೆರಳಿ ಪರಿಶೀಲನೆ ನಡೆಸಿದಾಗ ಸುಮಾರು 22 ಲಕ್ಷ ರೂ ಮೌಲ್ಯದ ವಜ್ರಾಭರಣಗಳು ಕಳುವಾಗಿರುವುದು ಬೆಳಕಿಗೆ ಬಂದಿದೆ.

ಸದ್ಯ ಕೆಲ ಕೂಲಿ ಕಾರ್ಮಿಕರ ಮೇಲೆ ಅನುಮಾನ ಪಟ್ಟಿರುವ ವೊಹಾನ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವನಾಥಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Last Updated : Aug 30, 2021, 12:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.