ETV Bharat / state

ಮಳೆಯಿಂದ ಕೆಸರು ಗದ್ದೆಯಾದ ರಸ್ತೆಯಲ್ಲಿ ಹೊರಳಾಡಿ ಪ್ರತಿಭಟನೆ

ನೆಲಮಂಗಲ ತಾಲೂಕಿನ ಬುದಿಹಾಳ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಚಾನಾಯಕನಹಳ್ಳಿ ಗ್ರಾಮದಲ್ಲಿ ಕೆಸರು ಗದ್ದೆಯಾಗಿರುವ ರಸ್ತೆಯಲ್ಲಿ ಪೈರು ನಾಟಿ ಮಾಡುವ ಮೂಲಕ ಮತ್ತು ರಸ್ತೆಯ ಗುಂಡಿಯಲ್ಲಿ ಹೊರಳಾಡಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

Protest by villagers
ಮಳೆಯಿಂದ ಈಜುಕೊಳವಾದ ರಸ್ತೆ: ನೀರಿನಲ್ಲಿ ಈಜಾಡಿ ಪ್ರತಿಭಟನೆ
author img

By

Published : Sep 23, 2020, 8:12 AM IST

ನೆಲಮಂಗಲ: ಇದು ನಾಲ್ಕಾರು ಗ್ರಾಮಗಳಿಗೆ ಸಂಪರ್ಕ ರಸ್ತೆಯಾಗಿದ್ದು, ಮಳೆ ಬಂದಾಗ ಮಾತ್ರ ಕೆರೆಯಂತಾಗುತ್ತದೆ. ಕೆಸರು ಗದ್ದೆಯಾಗಿರುವ ರಸ್ತೆಯಲ್ಲಿ ಪೈರು ನಾಟಿ ಮಾಡುವ ಮೂಲಕ ಮತ್ತು ರಸ್ತೆಯ ಗುಂಡಿಯಲ್ಲಿ ಹೊರಳಾಡಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಮಳೆಯಿಂದ ಕೆಸರು ಗದ್ದೆಯಾದ ರಸ್ತೆ

ನೆಲಮಂಗಲ ತಾಲೂಕಿನ ಬೂದಿಹಾಳ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಚಾನಾಯಕನಹಳ್ಳಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಿ ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರೀಯ ಹೆದ್ದಾರಿ 4ಕ್ಕೆ ಸಂಪರ್ಕಿಸುವ ಮಾಚಾನಾಯಕನಹಳ್ಳಿಯಿಂದ ನರಸಿಂಹಯ್ಯನಪಾಳ್ಯಕ್ಕೆ ಹಾದು ಹೋಗುವ ರಸ್ತೆ ಇದಾಗಿದ್ದು, ಮಳೆ ಬಂದಾಗ ರಸ್ತೆ ಕೆರೆಯಂತಾಗುತ್ತದೆ. 2 ವರ್ಷಗಳಿಂದ ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆಯ ತುಂಬೆಲ್ಲಾ ಅಳುದ್ದು ಗುಂಡಿ ಬಿದ್ದಿದ್ದು, ಮಳೆ ಬಂದಾಗ ಕೆರೆಯಂತಾಗುತ್ತದೆ. ಇದರಿಂದ ವಾಹನ ಸವಾರರು ರಸ್ತೆ ದಾಟಲು ಹರಸಾಹಸ ಪಡಬೇಕು. ಈಗಾಗಲೇ ಹಲವಾರು ವಾಹನಗಳಿಂದ ಬಿದ್ದು ಸವಾರರು ಗಾಯಗೊಂಡಿದ್ದಾರೆ.

ಈ ರಸ್ತೆ ಅಭಿವೃದ್ಧಿ ಮಾಡುವಂತೆ ಸಾಕಷ್ಟು ಬಾರಿ ಇಲ್ಲಿನ ಗ್ರಾಮಸ್ಥರು ಪಂಚಾಯತಿ ಅಧಿಕಾರಿಗಳಿಗೆ ಮತ್ತು ಸದಸ್ಯರಿಗೆ ಮನವಿ ಮಾಡಿದ್ದಾರೆ. ಆದರೆ ಜನರ ಮನವಿಗೆ ಇಲ್ಲಿನ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ ಎನ್ನಲಾಗಿದೆ. ಇದರಿಂದ ಅಕ್ರೋಶಗೊಂಡ ಗ್ರಾಮಸ್ಥರು, ಕೆಸರು ಗದ್ದೆಯಂತ್ತಿರುವ ರಸ್ತೆಯಲ್ಲಿ ಪೈರು ನಾಟಿ ಮಾಡಿದರು. ಜೊತೆಗೆ ರಸ್ತೆ ಗುಂಡಿಯಲ್ಲಿ ಹೊರಳಾಡಿ ತಮ್ಮ ಅಕ್ರೋಶ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.