ETV Bharat / state

ನೆಲಮಂಗಲದಲ್ಲಿ ಡಿಸಿ ಗಾಂಧಿಗಿರಿ... ತಹಶೀಲ್​ ಕಚೇರಿಯಲ್ಲಿ ಮಾಡಿದ್ದೇನು?

ಇಂದು ಧಿಡೀರ್ ನೆಲಮಂಗಲ ತಹಶೀಲ್​​ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಅಲ್ಲಿ ಬಿದ್ದಿದ್ದ ಕಸದ ರಾಶಿ ಕಂಡು ಸ್ವತಃ ಅವರೇ ಪೊರಕೆ ಹಿಡಿದು ಕಸ ಗುಡಿಸಿದ್ದಾರೆ.

ನೆಲಮಂಗಲ ತಹಶೀಲ್ದಾರ್ ಕಚೇರಿ
DC visits tahsildar office
author img

By

Published : Dec 2, 2019, 1:56 PM IST

ನೆಲಮಂಗಲ: ಧಿಡೀರ್ ತಹಶೀಲ್​​​​​ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಕಸ ಕಂಡು ತಾವೇ ಪೊರೆಕೆ ಹಿಡಿದು ಕಸ ಗುಡಿಸಿ ಅಧಿಕಾರಿ ಮತ್ತು ಸಿಬ್ಬಂದಿಗೆ ಸ್ವಚ್ಛತೆಯ ಪಾಠ ಹೇಳಿದರು.

ತಹಶೀಲ್​​​ ಕಚೇರಿಯಲ್ಲಿ ಕಸ ಗುಡಿಸಿದ ಡಿಸಿ

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಇಂದು ಬೆಳಗ್ಗೆ ನೆಲಮಂಗಲ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳಲ್ಲಿ ಚಳಿ ಜ್ವರ ಬಿಡಿಸಿದರು. ಇಂದು ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಪಟ್ಟಣಕ್ಕೆ ಆಗಮಿಸಿದ್ದರು. ಸಮಯಾವಕಾಶ ಇದ್ದ ಕಾರಣ ನೆಲಮಂಗಲ ತಾಲೂಕು ಕಚೇರಿಗೆ ಭೇಟಿ ನೀಡಿದ್ದರು.

ಈ ವೇಳೆ ಕಚೇರಿ ಕಾರಿಡಾರ್ ಮತ್ತು ಕೊಠಡಿಗಳಲ್ಲಿ ಎಲ್ಲೆಂದರಲ್ಲಿ ಬಿದ್ದಿದ್ದ ಕಸದ ರಾಶಿಯನ್ನು ಕಂಡು ಬೇಸರ ವ್ಯಕ್ತಪಡಿಸಿದ ಡಿಸಿ, ಸ್ವತಃ ತಾವೇ ಪೊರೆಕೆ ಹಿಡಿದು ಕಸ ಗುಡಿಸಿದರು. ಇನ್ನು ಕಚೇರಿಯಲ್ಲಿ ಸ್ವಚ್ಛತೆ ಕಾಪಾಡುವಂತೆ ತಹಶೀಲ್ದಾರ್​ಗೆ ತಿಳಿ ಹೇಳಿದರು. ಇದೇ ವೇಳೆ ಕಚೇರಿಗೆ ಗೈರಾದ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಿದರು.

Intro:ಕಸದ ಕೊಂಪೆಯಾದ ನೆಲಮಂಗಲ ತಹಶಿಲ್ದಾರ್ ಕಚೇರಿ
ಸ್ವತಹ ಕೈಯಲ್ಲಿ ಪೊರಕೆ ಹಿಡಿದು ಕಸಗೂಡಿಸಿದ ಜಿಲ್ಲಾಧಿಕಾರಿ
Body:ಕಸದ ಕೊಂಪೆಯಾದ ನೆಲಮಂಗಲ ತಹಶಿಲ್ದಾರ್ ಕಚೇರಿ
ಸ್ವತಹ ಕೈಯಲ್ಲಿ ಪೊರಕೆ ಹಿಡಿದು ಕಸಗೂಡಿಸಿದ ಜಿಲ್ಲಾಧಿಕಾರಿ

ನೆಲಮಂಗಲ : ಧಿಡೀರ್ ತಹಶಿಲ್ದಾರ್ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಅಲ್ಲಿನ ಕಸ ಕಂಡು ತಾವೇ ಪೊರೆಕೆ ಹಿಡಿದು ಕಸಗೂಡಿಸಿ ಅಧಿಕಾರಿ ಮತ್ತು ಸಿಬ್ಬಂದಿಗೆ ಸ್ವಚ್ಚತೆಯ ಬುದ್ದಿ ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಇಂದು ಬೆಳಗ್ಗೆ ನೆಲಮಂಗಲ ತಹಶಿಲ್ದಾರ್ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳಲ್ಲಿ ಚಳಿಜ್ವರ ಬಿಡಿಸಿದರು. ಇಂದು ನೆಲಮಂಗಲದಲ್ಲಿ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳಲು ನೆಲಮಂಗಲ ಪಟ್ಟಣಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು ಸಮಯಾವಕಾಶ ಇದ್ದ ಕಾರಣ ನೆಲಮಂಗ ತಾಲೂಕು ಕಚೇರಿ ಭೇಟಿ ನೀಡಿದರು. ಈ ವೇಳೆ ಕಚೇರಿ ಕಾರಿಡಾರ್ ಮತ್ತು ಕೊಠಡಿಗಳಲ್ಲಿ ಎಲ್ಲೆಂದಲ್ಲಿ ಇದ್ದ ಎಳನೀರಿನ ಚಿಪ್ಪು, ಇಲ್ಲಿಗಳ ಪಿಚಿಕೆ ಪ್ಲಾಸ್ಟಿಕ್ ಕಸವನ್ನ ಕಂಡು ಬೇಸರಗೊಂಡರು. ಸ್ವತಃ ತಾವೇ ಪೊರೆಕೆ ಹಿಡಿದು ಕಸವನ್ನು ಗೂಡಿಸಿದರು. ತಹಶಿಲ್ದಾರ್ ಗೆ ಸೂಚನೆ ನೀಡಿದ ಡಿಸಿ ಕಚೇರಿಯಲ್ಲಿ ಸ್ವಚ್ಚತೆ ಕಾಪಾಡುವಂತೆ ತಿಳಿಹೇಳಿದರು. ಇದೇ ವೇಳೆ ಅಧಿಕಾರಿಗಳು ಗೈರಾಗಿರುವುದನ್ನ ಗಮನಿಸಿದ ಡಿಸಿ ಅವರಿಗೆ ಶೋಕಸ್ ನೋಟಿಸ್ ನೀಡಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.