ಹೊಸಕೋಟೆ: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 15 ಕ್ಷೇತ್ರ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ವಸತಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.
ಹೊಸಕೋಟೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ವಸತಿ ಸಚಿವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಪಾಲುದಾರಿಕೆಯಲ್ಲಿ 28 ಕ್ಷೇತ್ರದಲ್ಲಿ ನಾವು ಜೆಡಿಎಸ್ ಪಕ್ಷಕ್ಕೆ 8 ಕ್ಷೇತ್ರ ಬಿಟ್ಟು ಕೊಟ್ಟಿದ್ದೇವೆ. ಅದರಲ್ಲಿ ಕಾಂಗ್ರೆಸ್ ಪಕ್ಷ 15 ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತೆ ಅದರಲ್ಲಿ ನೋ ಡೌಟ್ ಎಂದರು. ಎಲ್ಲ ಕ್ಷೇತ್ರಗಳನ್ನೂ ನಾವೇ ಗೆಲ್ಲುತ್ತೇವೆ ಎನ್ನುವುದು ತಪ್ಪು. ಆದರಿಂದ ಜೆಡಿಎಸ್ ಎಂಟರಲ್ಲಿ ಮೂರು ಸ್ಥಾನ ಗೆಲ್ಲಬಹುದು. ಕಾಂಗ್ರೆಸ್ 15 ಸ್ಥಾನ ಗೆಲ್ಲುವುದು, ಉಳಿದ 8-9 ಬಿಜೆಪಿಯವರು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈಗಾಗಲೇ ಕೆಲವು ಪತ್ರಿಕೆಗಳು, ಮಾಧ್ಯಮಗಳು ಹಾಗೂ ಬೇರೆ ಬೇರೆ ಸಂಸ್ಥೆಗಳು ನಡೆಸಿದ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ ಹದಿನೈದು ಕ್ಷೇತ್ರ ಗೆಲ್ಲುತ್ತೇವೆ ಎಂದರು.