ETV Bharat / state

ಎಂಟಿಬಿ ನಾಗರಾಜ್​​​ ವಿರುದ್ಧ ರಣಕಹಳೆ ಮೊಳಗಿಸಿದ ಕಾಂಗ್ರೆಸ್​​​​​ ನಾಯಕರು - ಕಾಂಗ್ರೆಸ್ ನಾಯಕರು

ಹೊಸಕೋಟೆಯಲ್ಲಿ ನಡೆದ ಕೈ ಕಾರ್ಯಕರ್ತರ ಸ್ವಾಭಿಮಾನಿ‌ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕರು ಎಂಟಿಬಿ ನಾಗರಾಜ್ ವಿರುದ್ಧ ಸಿಡಿದೆದ್ದರು.

congress-leaders-mounting-war-against-mtb-nagaraj
author img

By

Published : Sep 22, 2019, 4:25 AM IST

ಹೊಸಕೋಟೆ: ಕಾಂಗ್ರೆಸ್​ಗೆ ಕೈ ಕೊಟ್ಟ ಅನರ್ಹ ಶಾಸಕ ಎಂಟಿಬಿ ನಾಗರಾಜ್​ ವಿರುದ್ಧ ಬೆಂಕಿಯಂತಹ ಮಾತು. ನಾಗರಾಜ್ ಸ್ವ ಕ್ಷೇತ್ರದಲ್ಲೇ ಕೈ ನಾಯಕರಿಂದ ರಣವೀಳ್ಯ. ಸ್ವಾಭಿಮಾನಿ ಸಮಾವೇಶದ ಮೂಲಕವೇ ಉಪ ಚುನಾವಣೆಗೆ ರಣಕಹಳೆ ಮೊಳಗಿಸಿದ ಕಾಂಗ್ರೆಸ್​ ನಾಯಕರು.

ಹೊಸಕೋಟೆಯಲ್ಲಿ ನಡೆದ ಕೈ ಕಾರ್ಯಕರ್ತರ ಸ್ವಾಭಿಮಾನಿ‌ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕರು ಎಂಟಿಬಿ ನಾಗರಾಜ್ ವಿರುದ್ಧ ಸಿಡಿದೆದ್ದರು. ಕಾಂಗ್ರೆಸ್​​ಗೆ ಕೈ ಕೊಟ್ಟು ಬಿಜೆಪಿ ಸೇರುತ್ತಿರುವ ನಾಗರಾಜ್ ವಿರುದ್ಧ ಕೈ ಘಟಾನುಘಟಿ ನಾಯಕರು ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡ್ರು.

ಸ್ವಾಭಿಮಾನಿ‌ ಸಮಾವೇಶ

ನನ್ನ ಎದೆ ಸೀಳಿದ್ರೆ ಸಿದ್ದರಾಮಯ್ಯ ಕಾಣಿಸುತ್ತಾರೆ ಎಂದು ಹೇಳಿದ್ದ ಎಂಟಿಬಿ ಈಗ ತೆಗೆದಾಕಿದ್ದೀನಿ ಎಂದಿದ್ರು. ಇದಕ್ಕೆ ನಯವಾಗಿಯೇ ಉತ್ತರ ಕೊಟ್ಟ ಸಿದ್ದರಾಮಯ್ಯ ಎದೆಯಲ್ಲಿ ಇಟ್ಕೊ ಅಂತಾನು ಹೇಳಿಲ್ಲ. ತೆಗದಾಕು ಅಂತಾನು ಹೇಳಿಲ್ಲ ಎಂದು ತಿರುಗೇಟು ಕೊಟ್ರು.

ಸಮಾವೇಶಕ್ಕೂ ಮುನ್ನ ಬೀದಿಗಿಳಿದಿದ್ದ ಕೈ ಮದಗಜಗಳು ಕಾಂಗ್ರೆಸ್​ಗೆ ಎಂಟಿಬಿ ದ್ರೋಹ ಬಗೆದಿದ್ದಾರೆ. ಅವರಿಗೆ ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಘೋಷಣೆ ಕೂಗುತ್ತಾ ಹೊಸಕೋಟೆ ಐಬಿಯಿಂದ ಸ್ವಾಭಿಮಾನಿ ಸಮಾವೇಶ ವೇದಿಕೆವರೆಗೂ ಬೃಹತ್ ಮೆರವಣಿಗೆ ನಡೆಸಿದರು.

Intro:ಹೊಸಕೋಟೆ:

ಎಂಟಿಬಿ ನಾಗರಾಜ್ ವಿರುದ್ದ ಕಾಂಗ್ರೆಸ್ ನಾಯಕರ ರಣಕಹಳೆ

ಕಾಂಗ್ರೆಸ್ ಗೆ ಕೈಕೊಟ್ಟ ಎಂಟಿಬಿ ವಿರುದ್ಧ ಬೆಂಕಿಯಂತಹ ಮಾತು.ನಾಗರಾಜ್ ಸ್ವ ಕ್ಷೇತ್ರದಲ್ಲೇ ಕೈ ನಾಯಕರಿಂದ ರಣವೀಳ್ಯ.ಸ್ವಾಭಿಮಾನಿ ಸಮಾವೇಶದ ಮೂಕವೇ ಉಪ ಚುನಾವಣೆಗೆ ರಣ ಕಹಳೆ ಮೊಳಗಿಸಿದ ಮದಗಜಗಳು.
ಎಂಟಿಬಿ ಡ್ಯಾನ್ಸ್ ಗೆ ಸಿದ್ದರಾಮಯ್ಯ ವ್ಯಂಗ್ಯ.

ಹೌದು ಇವತ್ತು
ರೋಷಾವೇಶದ ಮಾತು..ದ್ರೋಹ ಬಗೆದವರಿಗೆ ಬುದ್ಧಿ ಕಲಿಸಬೇಕೆಂಬ ಹಠದ ಮಾತು..ಸ್ವಾಭಿಮಾನದ ಮಾತು..ಇದು ಇಂದು ಹೊಸಕೋಟೆಯಲ್ಲಿ ನಡೆದ ಕೈ ಕಾರ್ಯಕರ್ತರ ಸ್ವಾಭಿಮಾನಿ‌ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕರ ಬೆಂಕಿಯಂತಹ ಮಾತಿನ ಬಾಣ..ಈ ಮಾತುಗಳಲ್ಲಿ ರೋಷವೇಶ..ಆಕ್ರೋಶ..ಎಲ್ಲವೂ ಕಾಣ್ತಿದೆ..ಅಷ್ಟಕ್ಕೂ ಈ ಮಾತಿನ ಬಾಣಗಳನ್ನ ಪ್ರಯೋಗಿಸಿದ್ದು..ಯಾರ ಮೇಲೆ ಗೊತ್ತಾ..ಒಂದು ಕಾಲದ ಗೆಳೆಯ ಪರಮಾಪ್ತ..ಹೊಸಕೋಟೆಯ ಅನರ್ಹ ಶಾಸಕ ಎಂಟಿಬಿ ನಾಗರಾಜನ ವಿರುದ್ಧ..

ಕಾಂಗ್ರೆಸ್ ಗೆ ಕೈಕೊಟ್ಟು ಬಿಜೆಪಿ ಸೇರ್ತಿರೊ..ಎಂಟಿಬಿ ನಾಗರಾಜ್ ವಿರುದ್ಧ ಕೈ ನ ಘಟಾನುಘಟಿ ನಾಯಕರು.ಒಟ್ಟಿಗೆ ಸೇರಿ ರಣವೀಳ್ಯ ನೀಡೋದರ ಮೂಲಕ ಹಿಗ್ಗಾ ಮುಗ್ಗ ತರಾಟೆಗೆ ತೆಗೆದುಕೊಂಡ್ರು.ದಿನೇಶ್ ಗುಂಡೂರಾವ್ ಹಾಗೂ ಕೃಷ್ಣಬೈರೇಗೌಡ ಆಕ್ರೋಶದ ಮಾತುಗಳನ್ನಾಡಿದ್ರೆ.ಮಾಜಿ ಸ್ಪೀಕರ್ ರಮೇಶ್ ಕುಮಾರ್ ತಮ್ಮ ಎಂದಿನ ಶೈಲಿಯಲ್ಲಿ ಹಾಸ್ಯದ ಮೂಲಕವೇ ಎಂಟಿಬಿಗೆ ಟಾಂಗ್ ಕೊಟ್ರು.

Body:ಇದು ಸಿದ್ದರಾಮಯ್ಯ ಪರಮಾಪ್ತನಾಗಿದ್ದ ಎಂಟಿಬಿ ನಾಗರಾಜ್ ಆಡಿದ್ದ ಮಾತುಗಳು,ಎದೆ ಸೀಳಿದ್ರೆ ಸಿದ್ದರಾಮಯ್ಯ ಇದ್ದಾರೆ.ಎಂದಿದ್ದ ಎಂಟಿಬಿ ಈಗ ತೆಗೆದಾಕಿದ್ದೀನಿ ಎಂದು ಬಿಟ್ಟಿದ್ರು.ಇದಕ್ಕೆ ನಯವಾಗೆ ಡಿಚ್ಚಿಕೊಟ್ಟ ಟಗರು ನಾನು ಎದೆಯಲ್ಲಿ ಇಟ್ಕೊ ಅಂತಾನು ಹೇಳಿಲ್ಲ ತಗದಾಕು ಅಂತಾನು ಹೇಳಿಲ್ಲ ಅನ್ನೋ ಮೂಲಕ ತಿರುಗೇಟು ಕೊಟ್ರು..ಇಷ್ಟಕ್ಕೆ ಸುಮ್ಮನಾಗದ್ದ ಸಿದ್ದು ಎಂಟಿಬಿಯ ನಾನು ಗೊತ್ತಲ್ಲ ನಾಗರಾಜ್ ಎಂಬ ಹೇಳಿಕೆಗೆ ಗೊತ್ತಾಯ್ತು.ನಾಗರಾಜ ಅಂದ್ರೆ ವಿಷ ತುಂಬಿರೋನು ಅಂತಾ ಕುಟುಕಿದ್ರ ಜೊತೆಗೆ ಎಂಟಿಬಿಯ ನಿಂಬೆಹಣ್ಣು ಡಾನ್ಸ್ ಗೆ ವೇದಿಕೆಯ ಮೇಲೆ ಕೈಯ್ಯಾಡಿಸೋದ್ರ ಮೂಲಕ ವ್ಯಂಗ್ಯವಾಡಿದ್ರು..

ಸಮಾವೇಶಕ್ಕೂ ಮುನ್ನ ಬೀದಿಗಿಳಿದಿದ್ದ ಕೈ ಮದಗಜಗಳು ಕಾಂಗ್ರೆಸ್ ಗೆ ಎಂಟಿಬಿ ನಾಗರಾಜ್ ದ್ರೋಹ ಬಗೆದಿದ್ದಾರೆ.ಅವರಿಗೆ ಉಪಚುನಾವಣೆಯಲ್ಲಿ ತಕ್ಕ ಪಾಠ ಕಲಿಸ್ಬೇಕು ಅಂತಾ ಘೋಷಣೆ ಕೂಗ್ತಾ ಹೊಸಕೋಟೆ ಐಬಿ ಯಿಂದ ಸ್ವಾಭಿಮಾನಿ ಸಮಾವೇಶ ವೇದಿಕೆ ವರೆಗೂ ಬೃಹತ್ ರ್ಯಾಲಿ ನಡೆಸಲಾಯ್ತು..ಅಷ್ಟೇ ಅಲ್ಲದೇ ಐಟಿ ಇಡಿ ಅನ್ನ ಬಳಸಿಕೊಂಡು ಕೇಂದ್ರ ಬಿಜೆಪಿ ನಾಯಕರು ವಿರೋಧಿಗಳನ್ನ ಕಟ್ಟಿ ಹಾಕೋ ಕೆಲಸ ಮಾಡ್ತಿದ್ದಾರೆ.ಡಿಕೆಶಿಯನ್ನ ಜೈಲಿಗೆ ಕಳಿಸಿದ್ದಾರೆ ಅಂತಾ ಬೆಂಕಿಯುಗಳಿದ್ರು..

Conclusion:ಒಟ್ಟಾರೆ ಸ್ವಾಭಿಮಾನಿ ಸಮಾವೇಶದ ಮೂಲಕವೇ ಕೈ ನಾಕರು ಉಪ ಚುನಾವಣೆಗೂ ರಣಕಹಳೆ ಮೊಳಗಿಸೋದ್ರ ಮೂಲಕ 15 ಕ್ಷೇತ್ರಗಳಲ್ಲೂ ಗೆಲ್ಲೋ ಜೋಶ್ ನಲ್ಲಿದ್ದಾರೆ..ಗೆಲ್ತಾರ ಇಲ್ವಾ ಅನ್ನೋದನ್ನ ಕಾದು ನೋಡ್ಬೇಕಾಗಿದೆ.

ಬೈಟ್:ಕೃಷ್ಣ ಬೈರೆಗೌಡ ಶಾಸಕರು

ಬೈಟ್: ರಮೇಶ್ ಕುಮಾರ್ ಮಾಜಿ ಸಭಾಪತಿ.

ಬೈಟ್: ಸಿದ್ದ ರಾಮಯ್ಯ ಮಾಜಿ‌ ಮುಖ್ಯ ಮಂತ್ರಿ.ಹಾಗೂ ಸಿ ಎಲ್ ಪಿ ನಾಯಕ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.