ETV Bharat / state

ವಾಟ್ಸ್​ಆ್ಯಪ್​​​ ಸ್ಟೇಟಸ್​ಗೆ ಕಚ್ಚಾಡಿಕೊಂಡ ಮುಖಂಡರು - Talk war

ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಆಕಾಂಕ್ಷಿಗಳ ನಡುವೆ ಶೀತಲ ಸಮರ ಸಹ ನಡೆಯುತ್ತಿದೆ. ಶಾಂತಕುಮಾರ್ ಸಹ ಕಾಂಗ್ರೆಸ್ ಟಿಕೆಟ್ಆಕಾಂಕ್ಷಿಯಾಗಿದ್ದು, ಇವರ ವಿರುದ್ಧ ಯುವ ಮುಖಂಡ ಸಂದೀಪ್​ರವರು ವಾಟ್ಸ್​ಆ್ಯಪ್​​​​​ನಲ್ಲಿ ಅವಹೇಳನವಾಗಿ ಸ್ಟೇಟಸ್ ಹಾಕಿದ್ದರು ಎನ್ನಲಾಗಿದೆ.

Congress leaders clashed over WhatsApp status
ವಾಟ್ಸಾಪ್ ಸ್ಟೇಟಸ್​ಗೆ ಕಚ್ಚಾಡಿಕೊಂಡ ಕಾಂಗ್ರೆಸ್ ಮುಖಂಡರು
author img

By

Published : Dec 6, 2022, 12:20 PM IST

ದೇವನಹಳ್ಳಿ: ವಾಟ್ಸ್​ಆ್ಯಪ್​​​​ನಲ್ಲಿ ಅವಹೇಳನವಾಗಿ ಸ್ಟೇಟಸ್ ಹಾಕಿದ್ದಾರೆ ಎಂಬ ವಿಚಾರಕ್ಕೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಶಾಂತಕುಮಾರ್ ಮತ್ತು ಕಾಂಗ್ರೆಸ್ ಯುವ ಮುಖಂಡ ಸಂದೀಪ್ ನಡುವೆ ಅವಾಚ್ಯ ಶಬ್ದಗಳ ಟಾಕ್ ವಾರ್ ನಡೆದಿದೆ ಎನ್ನಲಾಗಿದೆ. ಈಗ ಆ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗಿದೆ.

ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಆಕಾಂಕ್ಷಿಗಳ ನಡುವೆ ಶೀತಲ ಸಮರ ಸಹ ನಡೆಯುತ್ತಿದೆ. ಶಾಂತಕುಮಾರ್ ಸಹ ಕಾಂಗ್ರೆಸ್ ಟಿಕೆಟ್​ ಆಕಾಂಕ್ಷಿಯಾಗಿದ್ದು, ಇವರ ವಿರುದ್ಧ ಯುವ ಮುಖಂಡ ಸಂದೀಪ್​ ಅವರು ವಾಟ್ಸ್​ಆ್ಯಪ್​ ನಲ್ಲಿ ಅವಹೇಳನವಾಗಿ ಸ್ಟೇಟಸ್ ಹಾಕಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಸ್ಟೇಟಸ್ ವಿಚಾರಕ್ಕೆ ಶಾಂತಕುಮಾರ್ ಸಂದೀಪ್ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ, ಇದಕ್ಕೆ ಪ್ರತಿಕ್ರಿಯಿಸಿದ ಸಂದೀಪ್ ಸಹ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸದ್ಯ ಕಾಂಗ್ರೆಸ್ ಮುಖಂಡರು ಬೈದಾಡಿಕೊಂಡಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆಡಿಯೋ ವೈರಲ್​ ಆಗುತ್ತಿದ್ದ ಬೆನ್ನಲೇ ಅನೇಕ ಟೀಕೆಗಳು ಈ ಮುಖಂಡರ ವಿರುದ್ಧ ವ್ಯಕ್ತವಾಗಿದೆ. ಈ ಹಿನ್ನೆಲೆ ಶಾಂತಕುಮಾರ್ ಮತ್ತು ಸಂದೀಪ್ ಒಟ್ಟಿಗೆ ಕಾಣಿಸಿಕೊಂಡು, ಇದು ಮಿಮಿಕ್ರಿ ಮಾಡಿರುವ ಆಡಿಯೋ, ಪಿತೂರಿ ಮಾಡಿ ಹರಿಬಿಟ್ಟಿದ್ದಾರೆ ನಾವಿಬ್ಬರು ಚೆನ್ನಾಗಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಸಿದ್ರಾಮುಲ್ಲಾ ಖಾನ್ ಹೆಸರು ಬಳಕೆ: ಬಿಜೆಪಿಯ ಸಂಸ್ಕೃತಿಯನ್ನು ಸ್ವಷ್ಟವಾಗಿ ತೋರಿಸುತ್ತಿದೆ.. ವೀರಪ್ಪ ಮೊಯ್ಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.