ಬೆಂಗಳೂರು: ಅಪರೇಷನ್ ಕಮಲಕ್ಕೆ ಸಿಲುಕಿ ಎಲ್ಲಿ ಶಾಸಕರು ಕೈತಪ್ಪಿ ಹೋಗುತ್ತಾರೋ ಎಂದು ಭಯಗೊಂಡಿರುವ ಕಾಂಗ್ರೆಸ್ ನಾಯಕರು ತಮ್ಮ ಶಾಸಕರನ್ನು ನಗರದ ಹೊರವಲಯದ ರೆಸಾರ್ಟ್ಗೆ ಶಿಫ್ಟ್ ಮಾಡಿದ್ದಾರೆ.
ಈವರೆಗೆ ನಗರದ ತಾಜ್ ವಿವಾಂತ್ ಹೋಟೆಲ್ನಲ್ಲಿ ಕೈ ಶಾಸಕರು ವಾಸ್ತವ್ಯ ಹೂಡಿದ್ದರು. ಆದರೆ, ಹಲವಾರು ಶಾಸಕರು ವೈಯುಕ್ತಿಕ ಕಾರಣಗಳನ್ನು ನೀಡಿ ಹೋಟೆಲ್ನಿಂದ ಆಗಾಗ ಹೊರ ಹೋಗುತ್ತಿದ್ದರು. ಇನ್ನು ಕೆಲವರು ಅಧಿವೇಶನದ ಬಳಿಕ ತಮ್ಮ ತಮ್ಮ ಮನೆಗಳಿಗೆ ತೆರಳುತ್ತಿದ್ದರು. ಹೋಟೆಲ್ನಿಂದ ಹೊರ ಹೋದಾಗ ಎಲ್ಲಿ ತಮ್ಮ ಶಾಸಕರು ಅಪರೇಷನ್ ಕಮಲಕ್ಕೆ ಬಲಿಯಾಗುತ್ತಾರೋ ಎಂದು ಹೆದರಿದ ಕಾಂಗ್ರೆಸ್ ನಾಯಕರು, ಎಲ್ಲಾ ಶಾಸಕರನ್ನು ದೇವನಹಳ್ಳಿಯ ಪ್ರಕೃತಿ ರೆಸಾರ್ಟ್ಗೆ ಶಿಫ್ಟ್ ಮಾಡಿದ್ದಾರೆ. ಅಲ್ಲದೇ ನಗರದಿಂದ ಹೊರಗೆ ಇರುವ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡುವುದರಿಂದ ಹೊರಗಡೆಯ ಸಂಪರ್ಕ ಇಲ್ಲದೆ ಒಗ್ಗಟ್ಟಾಗಿ ಇರಬಹುದು ಅನ್ನೋದು ಕೈ ನಾಯಕ ಉದ್ದೇಶವಾಗಿದೆ.
ಆದ್ದರಿಂದ ಪೊಲೀಸ್ ಭದ್ರತೆಯೊಂದಿಗೆ ಇಂದು ಮಧ್ಯಾಹ್ನ ಪ್ರಕೃತಿ ರೆಸಾರ್ಟ್ಗೆ ಖಾಸಗಿ ಬಸ್ನಲ್ಲಿ ಶಾಸಕರು ಆಗಮಿಸಿದರು. ಈಗಾಗಲೇ ಕೈ ಶಾಸಕರ ವಾಸ್ತವ್ಯಕ್ಕೆ ಪ್ರಕೃತಿ ರೆಸಾರ್ಟ್ನಲ್ಲಿ ಎಲ್ಲಾ ಸಿದ್ದತೆಗಳು ನಡೆದಿವೆ.