ದೇವನಹಳ್ಳಿ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿಗರ್ಮನ ಗೇಟ್ ಬಳಿ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ಮಹಿಳಾ ಪ್ರಯಾಣಿಕರೊಬ್ಬರನ್ನು ಸಿಐಎಸ್ಎಫ್ ಸಿಬ್ಬಂದಿ ತಕ್ಷಣ ಹೆಗಲ ಮೇಲೆ ಹೊತ್ತೊಯ್ದು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಕೊಡಿಸಿದ್ದಾರೆ. ಸಿಬ್ಬಂದಿ ಕಾರ್ಯಕ್ಕೆ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಮ್ಯಾಂಕ್ವೆ ಗ್ಲೋಬಲ್ ಸರ್ವಿಸಸ್ ಪ್ರೈ.ಲಿ. ಉದ್ಯೋಗಿ ಸಾಕ್ಷಿ ಎಂಬುವರು ನಿರ್ಗಮನ ಗೇಟ್ ನಂಬರ್ 7ರಲ್ಲಿ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದರು. ಈ ವೇಳೆ ಕೆಐಎಎಲ್ ನ ಕೇಂದ್ರೀಯ ಕೈಗಾರಿಕಾ ಭಧ್ರತಾ ಪಡೆ (CISF) ಇನ್ಸ್ಪೆಕ್ಟರ್ ಎನ್. ಕವಿತಾ, ಕಾನ್ಸ್ಟೇಬಲ್ ಅನಿಮಾ ಮೊಂಡಲ್ ಮತ್ತು ಕಾನ್ಸ್ಟೇಬಲ್ ಡೇವಿಡ್ ಅವರು ತಕ್ಷಣ ಮಹಿಳೆಯನ್ನು ಏರ್ಪೋರ್ಟ್ನ ಆಸ್ಟರ್ ಕ್ಲಿನಿಕ್ಗೆ ದಾಖಲಿಸಿದ್ದರು.
ಇದನ್ನೂ ಓದಿ: ಜಂಬೋ ಎಲೆಕ್ಟ್ರಿಕ್ ಬೈಕ್ ತಯಾರಿಸಿದ ರೋಹಿತ್.. 2 ಗಂಟೆ ಚಾರ್ಜ್, 1080 ಕಿ.ಮೀಟರ್ ಪ್ರಯಾಣ
ಸೂಕ್ತ ಸಮಯದಲ್ಲಿ ಚಿಕಿತ್ಸೆ ಲಭಿಸಿದ್ದರಿಂದ ಸಾಕ್ಷಿಯವರು ಚೇತರಿಸಿಕೊಂಡಿದ್ದು, ಸಿಐಎಸ್ಎಫ್ ಸಿಬ್ಬಂದಿ ಸೇವೆಗೆ ಪ್ರಶಂಸೆ ವ್ಯಕ್ತವಾಗಿದೆ.
ಇದನ್ನೂ ಓದಿ: ಶಾಲೆಗೆ ಹೋಗುವ ಅವಸರದ ನಡುವೆ ರಸ್ತೆ ಹೊಂಡ ಮುಚ್ಚಿದ ವಿದ್ಯಾರ್ಥಿ.. ಶ್ಲಾಘನೆ