ದೇವನಹಳ್ಳಿ : ದಸರಾ ಸೇರಿದಂತೆ ಹಲವು ಪ್ರಮುಖ ಹಬ್ಬಗಳಂದು ಕಲರ್ಫುಲ್ ಈವೆಂಟ್ಗಳನ್ನು ಆಯೋಜಿಸಿ ಪ್ರಯಾಣಿಕರಿಗೆ ಶುಭಾಶಯ ತಿಳಿಸುತ್ತಿದ್ದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಈ ಭಾರಿಯು ಕ್ರಿಸ್ಮಸ್ಗೆ ಸರಳವಾಗೆ ಪ್ರಯಾಣಿಕರಿಗೆ ಶುಭಾಶಯ ಕೋರುವ ಮೂಲಕ ಸುದ್ದಿಯಾಗಿದೆ.
ವಿಮಾನ ನಿಲ್ದಾಣದಲ್ಲಿ ಕೊರೊನಾತಂಕದ ನಡುವೆಯು ದೇಶ-ವಿದೇಶಗಳಿಂದ ಬರುವ ಪ್ರಯಾಣಿಕರಿಗೆ ಸರಳವಾಗೆ ಮೇರಿ ಕ್ರಿಸ್ಮಸ್ ವಿಶಸ್ ಕೋರಿದೆ. ಏರ್ಪೋಟ್ ಟರ್ಮಿನಲ್ನ ಒಳ ಭಾಗದಲ್ಲಿ ಪ್ರಯಾಣಿಕರಿಗೆ ಶುಭಾಶಯ ತಿಳಿಸುವ ಮೂಲಕ 20 ಅಡಿಗೂ ಎತ್ತರದ ಪ್ಲಾಸ್ಟಿಕ್ ಕ್ರಿಸ್ಮಸ್ ಟ್ರೀ ನಿರ್ಮಾಣ ಮಾಡಿದೆ.
ಟ್ರಿ ಮುಂಭಾಗದಲ್ಲಿ ಸಂತನ ಗಿಪ್ಟ್ ಬಾಕ್ಸ್ಗಳು ಸೇರಿದಂತೆ ನೋಡುಗರ ಕಣ್ಮನ ಸೆಳೆಯುತ್ತವೆ. ಸಂತನ ಟೋಪಿ ಮತ್ತು ಗೊಂಬೆಗಳನ್ನು ಜೊಡಿಲಾಗಿದ್ದು, ಏರ್ಪೋಟ್ಗೆ ಬರುವ ಪ್ರಯಾಣಿಕರನ್ನ ಆಕರ್ಷಿಸುತ್ತಿದೆ. ಜತೆಗೆ ಏರ್ಪೋಟ್ನ ಶಾಪಿಂಗ್ ಕಾಂಪ್ಲೆಕ್ಸ್ನ ಆಗಮನ ದ್ವಾರದ ಬಳಿಯು ಕಲರ್ಫುಲ್ ಹೂಗಳಿಂದ ಅಲಂಕಾರ ಮಾಡಲಾಗಿದೆ.
ಏರ್ಪೋಟ್ ಟರ್ಮಿನಲ್ನ ಪ್ರತಿಯೊಂದು ಕಂಬಕ್ಕೂ ಕಲರ್ಫುಲ್ ಲೈಟ್ಗಳನ್ನು ಹಾಕಲಾಗಿದ್ದು ರಾತ್ರಿ ವೇಳೆ ಬಣ್ಣ ಬಣ್ಣದ ಬೆಳಕಿನೊಂದಿಗೆ ವಿಮಾನ ನಿಲ್ದಾಣ ನವವಧುವಿನಂತೆ ಕ್ರಿಸ್ಮಸ್ ಹಬ್ಬಕ್ಕೆ ಕಂಗೊಳಿಸುತ್ತಿದೆ.
ಇದನ್ನೂ ಓದಿ: ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆರೋಗ್ಯ ಅಧಿಕಾರಿಗಳ ತಂಡ ಭೇಟಿ