ಆನೇಕಲ್: ಕರ್ನಾಟಕ ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಫೆಡರೇಷನ್ ಆನೇಕಲ್ ತಾಲೂಕು ಸಮಿತಿಯಿಂದ ಸರ್ಕಾರದ ವಿರುದ್ಧ ಕಾರ್ಮಿಕರು ಮತ್ತು ಕಾರ್ಮಿಕರ ಮಕ್ಕಳು ಶೈಕ್ಷಣಿಕ ವರ್ಷದ ಸಹಾಯದನಕ್ಕಾಗಿ ಇನ್ನು ಅರ್ಜಿ ಆಹ್ವಾನಿಸಿಲ್ಲ ಎಂದು ಆನೇಕಲ್ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ಕೆಂಬಾವುಟ ಹಿಡಿದು ಸರ್ಕಾರದ ಕಾರ್ಮಿಕ ವಿರೋದಿ ನೀತಿಗಳ ಖಂಡಿಸಿ ದಿಕ್ಕಾರ ಕೂಗುತ್ತಾ ಮೆರವಣಿಗೆ ನಡೆಸಿ ಪ್ರತಿಭಟಿಸಿದರು.
ಸಿಐಟಿಯು ಮತ್ತು ಸಿಡಬ್ಲೂಎಫ್ಐ ನೇತೃತ್ವದಲ್ಲಿ ನಡೆಸುತ್ತಿರುವ ಪ್ರತಿಭಟನೆಯ ಉದ್ದೇಶ 2022-23ನೇ ಶೈಕ್ಷಣಿಕ ಸಾಲು ಮುಗಿಯುವ ಹಂತಕ್ಕೆ ಬಂದರು ಇನ್ನೂ ಸಹಾಯಧನದ ಅರ್ಜಿ ಕರೆದಿಲ್ಲ ಜೊತೆಗೆ ಕಳೆದ ಬಾರಿಯ (2021-22) ಸಹಾಯಧನದ ಬಾಕಿಯೂ ಪಾವತಿಯಾಗದ ಕಾರಣ ರಾಜ್ಯ ಸರ್ಕಾರ ಕಾರ್ಮಿಕರ ಹಿತವನ್ನು ಮರೆತಿದೆ ಹೀಗಾಗಿ ಈ ಪ್ರತಿಭಟನೆ ಎಂದು ಸಿಡಬ್ಲೂಎಫ್ಐನ ಕಾರ್ಯದರ್ಶಿ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರತಿ ದಿನ ಒಂದು ತಾಸು ಹೆಚ್ಚಿಗೆ ಕೆಲಸ ಮಾಡಿ: ಸರ್ಕಾರಿ ನೌಕರರಿಗೆ ಸಿಎಂ ಬೊಮ್ಮಾಯಿ ಕರೆ