ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ( Heavy Rain in Doddaballapura)ಗೆ ಬತ್ತಿದ್ದ ಬೋರ್ವೆಲ್ಗಳಲ್ಲಿ ಇದೀಗ ನೀರು ಉಕ್ಕಿ (Borewell Water overflows in Doddaballapura) ಹರಿಯುತ್ತಿದೆ.
ತಾಲೂಕಿನ ಕನಕೇನಹಳ್ಳಿಯ ರಂಗಹನುಮಯ್ಯ, ಮಲ್ಲೇಗೌಡನಹಳ್ಳಿಯ ಹನುಮಂತರಾಯಪ್ಪ ಮತ್ತು ಬೆನಕಿನಮಡಗು ಗ್ರಾಮದ ನರಸೇಗೌಡನವರ ಬೋರ್ವೆಲ್ಗಳಲ್ಲಿ ಕಳೆದ ಕೆಲವು ದಿನಗಳಿಂದ ಅಂತರ್ಜಲ ಉಕ್ಕಿಬರುತ್ತಿದೆ. ಈ ಹಿಂದೆ ಅಂತರ್ಜಲ ಕುಸಿತದಿಂದ ಫೆಲ್ಯೂರ್ ಆಗಿದ್ದ ಬೋರ್ವೆಲ್ಗಳಲ್ಲೂ ಅಂತರ್ಜಲ ಚಿಮ್ಮುತ್ತಿರುವುದು ರೈತರ ಸಂತಸಕ್ಕೆ ಕಾರಣವಾಗಿದೆ.
ಜಿಲ್ಲೆಯ ಹಲವು ಭಾಗಗಳಲ್ಲಿ ಅಂತರ್ಜಲದ ಮಟ್ಟ ಪಾತಾಳಕ್ಕೆ ಕುಸಿದಿತ್ತು. ಆದರೆ, ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಭೂಗರ್ಭದಲ್ಲಿ ನೀರು ಇಂಗಿದೆ. ಪರಿಣಾಮ, ಬತ್ತಿದ್ದ ಬೋರ್ವೇಲ್ಗಳಲ್ಲಿಯೂ ನೀರು ಚಿಮ್ಮುತ್ತಿದೆ. ಇದರಿಂದ ಕೃಷಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಓದಿ: ಇಂದು-ನಾಳೆ ರಾಜ್ಯದಾದ್ಯಂತ ವ್ಯಾಪಕ ಮಳೆ, ಕ್ರಮೇಣ ಇಳಿಕೆ : ಹವಾಮಾನ ಇಲಾಖೆ