ETV Bharat / state

ನೆಲಮಂಗಲದಲ್ಲಿ ಹುಡ್ಗ-ಹುಡ್ಗಿಯ ಪುಂಡಾಟ: ಯುವಕನ ಬೈಕ್ ವ್ಹೀಲಿಂಗ್​ ಸ್ಟಂಟ್​, ಯುವತಿ ಕೈಯಲ್ಲಿ ಡ್ರ್ಯಾಗರ್!

ತುಮಕೂರು - ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವಕನೋರ್ವ ಬೈಕ್​ ವ್ಹೀಲಿಂಗ್​​ ಮಾಡುತ್ತಿದ್ದು, ಈ ವೇಳೆ ಆತನ ಜೊತೆಗಿದ್ದ ಯುವತಿ ಕೈಯಲ್ಲಿ ಡ್ರ್ಯಾಗರ್​​ ಹಿಡಿದು ಪೋಸ್​ ಕೊಡುತ್ತಿರುವ ದೃಶ್ಯ ವೈರಲ್​ ಆಗಿದೆ.

Bike Wheeling
ಬೈಕ್​ ವೀಲ್ಹಿಂಗ್​ ಮಾಡುತ್ತಿರುವ ದೃಶ್ಯ
author img

By

Published : Sep 23, 2020, 1:49 PM IST

ನೆಲಮಂಗಲ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವಕನೋರ್ವ ಬೈಕ್​ ವ್ಹೀಲಿಂಗ್​ ಮಾಡುತ್ತಿರುವ ದೃಶ್ಯವೊಂದು ವೈರಲ್​ ಆಗಿದೆ. ಬೈಕ್​ನಲ್ಲಿ ಹಿಂದೆ ಕುಳಿತಿರುವ ಯುವತಿ ಕೈಯಲ್ಲಿ ಡ್ರ್ಯಾಗರ್​​ ಹಿಡಿದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಬೈಕ್​ ವ್ಹೀಲಿಂಗ್​ ಮಾಡುತ್ತಿರುವ ಯುವಕ-ಯುವತಿ

ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ-4ರ ನೆಲಮಂಗಲದ ಬಳಿ ಈ ದೃಶ್ಯ ಕಂಡುಬಂದಿದೆ ಎನ್ನಲಾಗಿದ್ದು, ಯುವಕ ವ್ಹೀಲಿಂಗ್​ ಮಾಡುತ್ತಿರುವ ವೇಳೆ ಹಿಂದೆ ಕುಳಿತ ಯುವತಿ ಮಾಸ್ಕ್ ಧರಿಸಿ ಕೈಯಲ್ಲಿ ಡ್ರ್ಯಾಗರ್ ಹಿಡಿದು ಪೋಸ್ ಕೊಟ್ಟಿದ್ದಾಳೆ.

ಪೊಲೀಸರ ಕೈಗೆ ಸಿಕ್ಕಿಬೀಳುವ ಭಯದಲ್ಲಿ ದ್ವಿಚಕ್ರ ವಾಹನದ ನಂಬರ್ ಪ್ಲೇಟ್ ತೆಗೆದು ಹಾಕಲಾಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬೈಕ್​ ವ್ಹೀಲಿಂಗ್​ ಮಾಡಿದ ಯುವಕ ಹಾಗೂ ಯುವತಿ ಇಬ್ಬರು ಗಾಂಜಾ ಅಥವಾ ಮದ್ಯದ ನಶೆಯಲ್ಲಿ ಈ ರೀತಿ ಮಾಡಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ.

ರಾಷ್ಟ್ರೀಯ ಹೆದ್ದಾರಿಗಳಾದ ತುಮಕೂರು ರಸ್ತೆ-4ರಲ್ಲಿ ಹಾಗೂ ಕುಣಿಗಲ್ ರಸ್ತೆ-75ರಲ್ಲಿ ಪುಂಡರ ಬೈಕ್ ವ್ಹೀಲಿಂಗ್​ ಅರ್ಭಟ ಇತ್ತೀಚೆಗೆ ಜೋರಾಗಿದ್ದು, ವೀಕೆಂಡ್​ಗಳಲ್ಲಿ ಈ ರೀತಿಯ ದೃಶ್ಯಾವಳಿಗಳು ಹೆಚ್ಚಾಗಿ ಗೋಚರಿಸುತ್ತಿವೆ ಎಂದು ಸ್ಥಳೀಯರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.