ETV Bharat / state

ಬೆಸ್ತಮಾನಹಳ್ಳಿ ವಿನುತ್ ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಕಾಲಿಗೆ ಗುಂಡೇಟು - ಬೆಸ್ತಮಾನಹಳ್ಳಿ ವಿನುತ್ ಕೊಲೆ ಪ್ರಕರಣ

ಆನೇಕಲ್​ನಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿಬಂದಿದೆ. ಬೆಸ್ತಮಾನಹಳ್ಳಿ ವಿನುತ್(23) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಈ ವೇಳೆ ನಾಲ್ವರು ಪೊಲೀಸ್ ಸಹ ಗಾಯಗೊಂಡಿದ್ದಾರೆ. ​

Bestmanahalli Vinut murder case:
ವಿನುತ್ ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಕಾಲಿಗೆ ಗುಂಡೇಟು
author img

By

Published : Nov 2, 2020, 9:47 AM IST

Updated : Nov 2, 2020, 11:25 AM IST

ಆನೇಕಲ್: ಇತ್ತೀಚೆಗೆ ನಡೆದ ಬೆಸ್ತಮಾನಹಳ್ಳಿ ವಿನುತ್(23) ಕೊಲೆ ಆರೋಪಿಗಳಿಗೆ ಅತ್ತಿಬೆಲೆ ಪೊಲೀಸರು ಗುಂಡಿನ‌ ರುಚಿ ತೋರಿಸಿದ್ದಾರೆ.

ಆನೇಕಲ್ ತಾಲೂಕಿನ‌ ಮುತ್ತಾನಲ್ಲೂರಿನ ಬಳಿ‌ ಇಬ್ಬರು ಆರೋಪಿಗಳನ್ನು‌ ಬಂಧಿಸಲು ತೆರಳಿದ್ದ ವೇಳೆ ಆರೋಪಿಗಳು ಪೊಲೀಸರ ಮೇಲೆಯೇ ದಾಳಿ‌ ನಡೆಸಿದ್ದಾರೆ. ಈ ವೇಳೆ ಪೊಲೀಸರು ಕಾಲಿಗೆ ಗುಂಡು ಹಾರಿಸಿ ಆರೋಪಿಗಳನ್ನು‌ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದಂತೆ ಆವಡದೇನಹಳ್ಳಿ‌ ಬಳಿ ಮತ್ತಿಬ್ಬರ ಕಾಲಿಗೆ ಶೂಟ್​ ಮಾಡಿ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಬೆಸ್ತಮಾನಹಳ್ಳಿ ವಿನುತ್ ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಕಾಲಿಗೆ ಗುಂಡೇಟು

ಗಂಗಾ, ಬಸವ, ಗೋಪಿ ಮತ್ತು ಅನಂತ್ ಗುಂಡೇಟು ತಿಂದಿರುವ ಕೊಲೆ ಆರೋಪಿಗಳು. ಮಹೇಶ್ ಮತ್ತು ಸುರೇಶ್ ಎಂಬಾ ಪೇದೆಯ ಮೇಲೆಯ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದ ಗಂಗಾ ಮತ್ತು ಗೋಪಿಯ ಬಲಗಾಲಿಗೆ ಆನೇಕಲ್ ಡಿವೈಎಸ್​ಪಿ ಮಹಾದೇವ್ ಮತ್ತು ಆನೇಕಲ್ ಇನ್ಸ್​ಪೆಕ್ಟರ್ ಕೃಷ್ಣ ಅವರು ಗುಂಡು ಹಾರಿಸಿದ್ದಾರೆ. ಇರ್ಫಾನ್ ಮತ್ತು ನಾಗರಾಜ್ ಎಂಬ ಪೇದೆಗಳ ಮೇಲೆ ಹಲ್ಲೆಗೆ ಮುಂದಾಗಿದ್ದ ಅನಂತ್ ಮತ್ತು ಬಸವನ ಮೇಲೆ ಅತ್ತಿಬೆಲೆ ಇನ್ಸ್​ಪೆಕ್ಟರ್ ಸತೀಶ್ ಮತ್ತು ಸರ್ಜಾಪುರ ಎಸ್ಐ ಹರೀಶ್ ಅವರು ಗುಂಡು ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ನಾಲ್ವರು ಕಾನ್ಸ್​ಟೇಬಲ್​ಗಳು ಮತ್ತು ನಾಲ್ವರು ಆರೋಪಿಗಳು ಆನೇಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ಹಿನ್ನೆಲೆ: ಅ. 30ರಂದು 23 ವರ್ಷದ ವಿ.ವೈ. ವಿನುತ್ ಎಂಬಾತನನ್ನು ನಡು ರಸ್ತೆಯಲ್ಲಿಯೇ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದರು. ಹಳೇ ದ್ವೇಷದ ಹಿನ್ನೆಲೆಯಲ್ಲಿ ವಿನುತ್ ನನ್ನು ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿತ್ತು.

Last Updated : Nov 2, 2020, 11:25 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.