ETV Bharat / state

ಏರೋ ಇಂಡಿಯಾ-2021 ಹಿನ್ನೆಲೆ ಭಾಗಶಃ ಬಂದ್ ಆಗಲಿದೆ ಕೆಂಪೇಗೌಡ ವಿಮಾನ ನಿಲ್ದಾಣ - ಕೆಂಪೇಗೌಡ ವಿಮಾನ ನಿಲ್ದಾಣ

ಏರೋ ಇಂಡಿಯಾ 2021ನ್ನು ಸುರಕ್ಷಿತ ಮತ್ತು ಯಶಸ್ವಿ ಮಾಡುವ ಕಾರಣಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರನ್ ವೇ ಭಾಗಶಃ ಬಂದ್ ಆಗಿರಲಿದೆ.

bengaluru-airport-will-partially-close-flight-operations-during-aero-india-2021
ಕೆಂಪೇಗೌಡ ವಿಮಾನ ನಿಲ್ದಾಣ
author img

By

Published : Jan 28, 2021, 1:13 AM IST

ದೇವನಹಳ್ಳಿ: ಯಲಹಂಕದ ಏರ್​​ಫೋರ್ಸ್ ಸ್ಟೇಷನ್​ನಲ್ಲಿ ಫೆಬ್ರವರಿ 3ರಿಂದ 5ರವರೆಗೆ ಏರೋ ಇಂಡಿಯಾ-2021 ನಡೆಯುವ ಹಿನ್ನೆಲೆ ಸನಿಹವೇ ಇರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾಗಶಃ ಬಂದ್ ಆಗಲಿದೆ.

ಯಲಹಂಕದ ಏರ್ ಫೋರ್ಸ್ ಸ್ಟೇಷನ್​ನಿಂದ ಕೆಲವೇ ಕಿ.ಮೀ ಅಂತರದಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಏರ್ ಶೋ ನಡೆಯುವ ಮತ್ತು ಪೂರ್ವಾಭ್ಯಾಸದ ಸಮಯದಲ್ಲಿ ಎರಡು ಕಡೆಯಿಂದ ನಡೆಯುವ ವಿಮಾನಗಳ ಹಾರಾಟ ಅಪಾಯಕ್ಕೆ ಕಾರಣವಾಗುತ್ತದೆ. ಈ ಹಿನ್ನೆಲೆ ಏರೋ ಇಂಡಿಯಾ 2021ನ್ನು ಸುರಕ್ಷಿತ ಮತ್ತು ಯಶಸ್ವಿ ಮಾಡುವ ಕಾರಣಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾಗಶಃ ಬಂದ್ ಮಾಡಲಾಗುತ್ತಿದೆ.

Bengaluru Airport
ರನ್ ವೇ ಬಂದ್ ಮಾಹಿತಿ

ಜನವರಿ 30 ಮತ್ತು 31ರಂದು ಏರ್​ಫೋರ್ಸ್​ನಲ್ಲಿ ಪೂರ್ವಭ್ಯಾಸ ನಡೆಯುವ ಹಿನ್ನೆಲೆ ಮಧ್ಯಾಹ್ನ 01:30ರಿಂದ 04:30ವರೆಗೆ ಕೆಐಎಎಲ್ ರನ್ ವೇ ಬಂದ್ ಆಗಲಿದೆ. ಫೆಬ್ರವರಿ 1ರಂದು ಏರ್​​ಫೋರ್ಸ್​ನಲ್ಲಿ ನಡೆಯುವ ಪೂರ್ವಭ್ಯಾಸದ ಹಿನ್ನೆಲೆ ಬೆಳಗ್ಗೆ 10:00ರಿಂದ 12:00 ಮತ್ತು ಮಧ್ಯಾಹ್ನ 02:00ರಿಂದ 05:00ರವರೆಗೂ ಕೆಐಎಎಲ್ ರನ್ ವೇ ಬಂದ್ ಆಗಲಿದೆ.

ಫೆಬ್ರವರಿ 2 ಮತ್ತು 3ರಂದು ಏರೋ ಇಂಡಿಯಾ 2021ರ ಉದ್ಘಾಟನಾ ಕಾರ್ಯಕ್ರಮ ಮತ್ತು ವೈಜ್ಞಾನಿಕ ಪ್ರದರ್ಶನ ಇರುವುದರಿಂದ ಬೆಳಗ್ಗೆ 09:00ರಿಂದ 12:00 ಮತ್ತು ಮಧ್ಯಾಹ್ನ 02:00ರಿಂದ 05:00ವರೆಗೂ ಕೆಐಎಎಲ್​ ರನ್ ವೇ ಬಂದ್ ಆಗಿರಲಿದೆ.

ಫೆಬ್ರವರಿ 4 ಮತ್ತು 5ರಂದು ಏರೋ ಇಂಡಿಯಾ ಕಾರ್ಯಕ್ರಮ ಇರುವುದರಿಂದ ಬೆಳಗ್ಗೆ 10:00 12:00 ಮತ್ತು ಮಧ್ಯಾಹ್ನ 02:00ರಿಂದ 05:00ವರೆಗೂ ಕೆಐಎಎಲ್ ರನ್ ವೇ ಕಾರ್ಯ ಸ್ಥಗಿತಗೊಂಡಿರಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.