ETV Bharat / state

ಬಸವರಾಜ ಬೊಮ್ಮಾಯಿ ಸರ್ಕಾರ ಅಲಿಬಾಬಾ ಮತ್ತು 40 ಕಳ್ಳರು ಇದ್ದಂತೆ: ಸಿದ್ದರಾಮಯ್ಯ ವಾಗ್ದಾಳಿ - ಬಿಜೆಪಿಯ ಕರ್ಮಕಾಂಡಗಳನ್ನು ಬಿಚ್ಚಿಡುತ್ತಿದ್ದೇವೆ

ಬಿಜೆಪಿಯವರಿಗೆ ಸತ್ಯ ಸಹಿಸಿಕೊಳ್ಳಲು ಆಗುತ್ತಿಲ್ಲ - ನಮ್ಮ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ - ಜನರ ಮುಂದೆ ಬಿಜೆಪಿಯ ಕರ್ಮಕಾಂಡಗಳನ್ನು ಬಿಚ್ಚಿಡುತ್ತಿದ್ದೇವೆ - ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ.

Bommai government is like Alibaba and 40 thieves
ಬಸವರಾಜ ಬೊಮ್ಮಾಯಿ ಸರ್ಕಾರ ಅಲಿಬಾಬಾ ಮತ್ತು 40 ಕಳ್ಳರು ಇದ್ದಂತೆ: ಸಿದ್ದರಾಮಯ್ಯ ವಾಗ್ದಾಳಿ
author img

By

Published : Jan 24, 2023, 11:09 PM IST

ದೊಡ್ಡಬಳ್ಳಾಪುರ: ಬೊಮ್ಮಾಯಿ ಸರ್ಕಾರ ಅಲಿಬಾಬಾ ಮತ್ತು 40 ಕಳ್ಳರು ಇದ್ದಂತೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಜನರ ಮುಂದೆ ಬಿಜೆಪಿಯ ಕರ್ಮಕಾಂಡಗಳನ್ನು ಬಿಚ್ಚಿಡುತ್ತಿದ್ದೇವೆ. ಇದಕ್ಕೆ ಬಿಜೆಪಿ ಸರಕಾರದ ಪಾಪದ ಪುರಾಣ ಎಂದು ಹೆಸರಿಟ್ಟಿದ್ದೇವೆ. ಬಿಜೆಪಿಯವರಿಗೆ ಸತ್ಯ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ನಮ್ಮ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ನಾನು 5 ವರ್ಷ ಸಿಎಂ ಆಗಿದ್ದಾಗ ಬಿಜೆಪಿ ಅಧಿಕೃತ ವಿರೋಧ ಪಕ್ಷದಲ್ಲಿ ಇದ್ದರು. ಆಗ ಒಂದು ದಿನ ಭ್ರಷ್ಟಾಚಾರದ ಬಗ್ಗೆ ಮಾತನಾಡಲಿಲ್ಲ. ಆಗ ಏನು ಬಾಯಲ್ಲಿ ಕಲ್ಲು ಸಿಕ್ಕಿಕೊಂಡಿತ್ತಾ? ಯಾಕೆ ಆಗ ಪ್ರಶ್ನೆ ಮಾಡಲಿಲ್ಲ ಮಿಸ್ಟರ್ ಬಸವರಾಜು ಬೊಮ್ಮಾಯಿ? ಎಂದು ಪ್ರಶ್ನಿಸಿದರು.

ಬಸವರಾಜ ಬೊಮ್ಮಾಯಿ ಸರ್ಕಾರ ಅಲಿಬಾಬಾ ಮತ್ತು 40 ಕಳ್ಳರು ಇದ್ದಂತೆ:ಬಿಜೆಪಿಯವರು ಈಗ ಸುಳ್ಳನ್ನು ಹೇಳಲು ಆರಂಭಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಅಲಿಬಾಬಾ ಮತ್ತು 40 ಕಳ್ಳರು ಇದ್ದಂತೆ. ಭೂತದ ಬಾಯಲ್ಲಿ ಮಂತ್ರ ಹೇಳಿಸುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನವರಿಗೆ ಶಕ್ತಿ ಇಲ್ಲ. ಜೆಡಿಎಸ್ ನವರು ಕಾಂಗ್ರೆಸ್ ಗೆದ್ದರೆ ಕಾಂಗ್ರೆಸ್ ಬಾಲ, ಬಿಜೆಪಿ ಬಂದರೆ ಬಿಜೆಪಿ ಬಾಲ ಹಿಡಿಯುತ್ತಾರೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಎಲೆಕ್ಷನ್ ಬಂದಾಗ ಮಾತ್ರ ಪಂಚರತ್ನ ನೆನಪಾಯ್ತಾ:ಕುಮಾರಸ್ವಾಮಿ ಪಂಚರತ್ನ ಯಾತ್ರೆ ಮಾಡುತ್ತಿದ್ದಾರೆ. 2 ವರ್ಷ 10 ತಿಂಗಳು ಮುಖ್ಯಮಂತ್ರಿ ಆಗಿದ್ದೀರಿ. ಆಗ ಪಂಚರತ್ನ ನೆನಪಗಲಿಲ್ಲವೆ. ಎಲೆಕ್ಷನ್ ಬಂದಾಗ ಮಾತ್ರ ಪಂಚರತ್ನ ನೆನಪಾಯ್ತಾ? ಕಳೆದ ಚುನಾವಣೆಯಲ್ಲಿ ನಾವು ಸಿಎಂ ಮಾಡಿದೇವು, ಕೊಟ್ಟ ಕುದುರೆಯನ್ನು ಏರಲಾದವನು ಧೀರನು ಅಲ್ಲ, ಶೂರನು ಅಲ್ಲ, ಎಂಬಂತೆ ಕುಮಾರಸ್ವಾಮಿ ಸಿಎಂ ಸ್ಥಾನವನ್ನು ಉಳಿಸಿಕೊಳ್ಳಲಾಗಲಿಲ್ಲ. ಬಿಜೆಪಿ ಅವರು ಜನರ ಆಶೀರ್ವಾದ ಪಡದು ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲದ ಮೂಲಕ ಕೋಟ್ಯಾಂತರ ಹಣ ಖರ್ಚು ಮಾಡಿ ಶಾಸಕರನ್ನ ಖರೀದ ಮಾಡಿ ನಮ್ಮಿಂದ 14 ಜನ ಶಾಸಕರನ್ನು, ಜೆಡಿಎಸ್ ನಿಂದ 3 ಜನ ಶಾಸಕರನ್ನ ಖರೀದಿ ಮಾಡಿ ಅನೈತಿಕವಾಗಿ ಸರ್ಕಾರ ರಚಿಸಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ನಾವು ಅಧಿಕಾರಕ್ಕೆ ಬಂದರೆ ಮತ್ತೆ 20 ಹೆಚ್​ಪಿಗೆ ಏರಿಕೆ: ನಾನು ಸಿಎಂ ಆಗಿದ್ದಾಗ ದೊಡ್ಡಬಳ್ಳಾಪುರ ಕ್ಷೇತ್ರಕ್ಕೆ 1600 ಕೋಟಿ ಅನುದಾನ ನೀಡಿದ್ದೆ. ದೊಡ್ಡಬಳ್ಳಾಪುರಕ್ಕೆ 37 ಸಾವಿರ ಮನೆಗಳನ್ನು ಕೊಟ್ಡಿದ್ದೇನೆ. ರಾಜ್ಯದಲ್ಲಿ 15 ಲಕ್ಷ ಮನೆಗಳನ್ನು ಕೊಟ್ಟಿದ್ದೆ. ನೇಕಾರರಿಗೆ 20 ಹೆಚ್ಪಿ ಉಚಿತ ವಿದ್ಯುತ್ ನೀಡಿದ್ದೆ. ಬಿಜೆಪಿ ಅವರು 5 ಹೆಚ್​ಪಿ ಇಳಿಸಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ಮತ್ತೆ 20 ಹೆಚ್​ಪಿಗೆ ಏರಿಕೆ ಮಾಡುತ್ತೇವೆ‌ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಶ್ವಾಸನೆ ನೀಡಿದರು.

ಇದನ್ನೂ ಓದಿ:ಅನ್ನಭಾಗ್ಯದಲ್ಲಿ ಸಿದ್ದರಾಮಯ್ಯನವರು ಕೊಟ್ಟಿದ್ದು ಅಕ್ಕಿ ಅಲ್ಲ, ಕೇವಲ ಚೀಲ.. ಆರೋಗ್ಯ ಸಚಿವ ಸುಧಾಕರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.