ETV Bharat / state

ರಸ್ತೆ, ಸೇತುವೆ ಕೊರತೆ - ಸಂಕಷ್ಟದಲ್ಲಿ 300 ಕ್ಕೂ ಹೆಚ್ಚು ಜನ : ಶಾಲೆಗೆ ಗೈರಾಗುತ್ತಿರುವ ಮಕ್ಕಳು - ವಿದ್ಯಾರ್ಥಿಗಳು ಶಾಲೆಗೆ ಗೈರು

ನೆಲಮಂಗಲ ತಾಲೂಕಿನ ಗಡಿ ಭಾಗದ ಗ್ರಾಮ ಬರಗೂರು. ಸುಮಾರು 60 ವರ್ಷಗಳ ಹಿಂದೆ 2 ಕಿ.ಮೀ ದೂರದಲ್ಲಿ ಬರಗೂರು ಕಾಲೋನಿ ನಿರ್ಮಾಣ ಮಾಡಿದ ಸರ್ಕಾರ, ಬಡವರಿಗೆ ನಿವೇಶನ ನೀಡಿದೆ. ಬರಗೂರು ಕಾಲೋನಿ ಸೇರಿದಂತೆ ಇಲ್ಲಿ ಮುತ್ತರಾಯಪ್ಪನ ಪಾಳ್ಯ, ಗೋವಿಂದನ ಪಾಳ್ಯ ಮತ್ತು ಚಲ್ಲಳ ಸಹ ಇದ್ದು, ಸೂಕ್ತ ರಸ್ತೆ ಮತ್ತು ಸೇತುವೆ ಇಲ್ಲದೇ 300ಕ್ಕೂ ಹೆಚ್ಚು ಜನ ಸಂಕಷ್ಟ ಅನುಭವಿಸುವಂತಾಗಿದೆ.

ಸೇತುವೆ ಕೊರತೆ
baraguru colony connection cut
author img

By

Published : Oct 20, 2022, 11:31 AM IST

Updated : Oct 20, 2022, 12:57 PM IST

ನೆಲಮಂಗಲ: ಧಾರಾಕಾರವಾಗಿ ಮಳೆ ಸುರಿದ ಹಿನ್ನೆಲೆ ಬರಗೂರು ಕಾಲೋನಿ ಸಂಪರ್ಕ ಕಡಿತಗೊಂಡಿದೆ. ನೀರಿನ ರಭಸಕ್ಕೆ ಹೆದರಿ ವಿದ್ಯಾರ್ಥಿಗಳು ಶಾಲೆಗೆ ಗೈರಾಗುತ್ತಿದ್ದು, ನಿತ್ಯ ಜೀವದ ಹಂಗು ತೊರೆದು ಹಳ್ಳ ದಾಟಿ ಹಾಲು ಉತ್ಪಾದಕರು ಡೈರಿಗೆ ಹಾಲು ಹಾಕುವ ಸ್ಥಿತಿ ನಿರ್ಮಾಣವಾಗಿದೆ.

ಹೌದು, ನೆಲಮಂಗಲ ತಾಲೂಕಿನ ಗಡಿ ಭಾಗದ ಗ್ರಾಮ ಬರಗೂರು. ಸುಮಾರು 60 ವರ್ಷಗಳ ಹಿಂದೆ 2 ಕಿ.ಮೀ ದೂರದಲ್ಲಿ ಬರಗೂರು ಕಾಲೋನಿ ನಿರ್ಮಾಣ ಮಾಡಿದ ಸರ್ಕಾರ, ಬಡವರಿಗೆ ನಿವೇಶನ ನೀಡಿದೆ. ಬರಗೂರು ಕಾಲೋನಿ ಸೇರಿದಂತೆ ಇಲ್ಲಿ ಮುತ್ತರಾಯಪ್ಪನ ಪಾಳ್ಯ, ಗೋವಿಂದನ ಪಾಳ್ಯ ಮತ್ತು ಚಲ್ಲಳ ಸಹ ಇವೆ. ನಾಲ್ಕು ಕಾಲೋನಿಗಳಿಂದ ಒಟ್ಟು 70 ಕ್ಕೂ ಹೆಚ್ಚು ಕುಟುಂಬಗಳು ಇದ್ದು, 300 ಕ್ಕೂ ಹೆಚ್ಚು ಜನರಿದ್ದಾರೆ.

ನೆಲಮಂಗಲ ತಾಲೂಕಿನ ಬರಗೂರು ಗ್ರಾಮದಲ್ಲಿ ರಸ್ತೆ, ಸೇತುವೆ ಕೊರತೆ

70 ಕುಟುಂಬಗಳು ಬರಗೂರು ಗ್ರಾಮದೊಂದಿಗೆ ನಿಕಟ ಸಂಪರ್ಕ ಹೊಂದಿವೆ. ಮಕ್ಕಳು ಶಾಲೆಗೆ ಹೋಗುವುದು, ದಿನಸಿ ಪದಾರ್ಥ ಖರೀದಿ, ಹಾಲಿನ ಡೈರಿ, ಪಶು ಆಸ್ಪತ್ರೆ ಹೀಗೆ ದಿನ ನಿತ್ಯದ ಕಾರ್ಯಗಳಿಗೆ ಬರಗೂರು ಗ್ರಾಮಕ್ಕೆ ಬರಬೇಕು. ಆದರೆ, ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬರಗೂರು ಕಾಲೋನಿ ಜನ ಸೇರಿದಂತೆ 70 ಕುಟುಂಬಗಳು ಬರಗೂರು ಗ್ರಾಮದಿಂದ ಸಂಪರ್ಕ ಕಳೆದುಕೊಂಡಿವೆ. ಬರಗೂರು ಮತ್ತು ಬರಗೂರು ಕಾಲೋನಿ ನಡುವೆ ದೊಡ್ಡಹಳ್ಳ ತುಂಬಿ ಹರಿಯುತ್ತಿದೆ. ಮಳೆ ಬಂದಾಗ ಸುಮಾರು 10 ಅಡಿ ಎತ್ತರದಲ್ಲಿ ನೀರು ಹರಿಯುತ್ತದೆ. ನೀರಿನ ರಭಸಕ್ಕೆ ಹೆದರಿ ಹಳ್ಳ ದಾಟುವ ಸಾಹಸಕ್ಕೆ ಯಾರೂ ಮುಂದಾಗುತ್ತಿಲ್ಲ.

ಇದನ್ನೂ ಓದಿ:ಮುಳುಗಿದ ಸೇತುವೆ ಮೇಲೆ ವಿದ್ಯಾರ್ಥಿನಿಯರು, ವಾಹನ ಸವಾರರ ಸಂಚಾರ.. ಅಪಾಯಕ್ಕೆ ಆಹ್ವಾನ

ಹಳ್ಳ ತುಂಬಿ ಹರಿಯುತ್ತಿರುವುದರಿಂದ ಬರಗೂರು ಕಾಲೋನಿಯ ಮಕ್ಕಳು ದಸರಾ ರಜೆಯ ನಂತರ ಶಾಲೆಗೆ ಹೋಗಲು ಸಾಧ್ಯವಾಗಿಲ್ಲ. ಅನಾರೋಗ್ಯಕ್ಕೆ ತುತ್ತಾಗಿ ಸೂಕ್ತ ಚಿಕಿತ್ಸೆ ಸಿಗದೇ ಕಾಲೋನಿ ಜನ ನರಳುತ್ತಿದ್ದಾರೆ. ಅಷ್ಟೇ ಅಲ್ಲದೇ, ರೋಗಕ್ಕೆ ತುತ್ತಾದ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ಸಹ ಸಾಧ್ಯವಾಗುತ್ತಿಲ್ಲ.

ಕಾಲೋನಿಯಲ್ಲಿ ಸುಮಾರು 40 ಕ್ಕೂ ಹೆಚ್ಚು ಜನರು ಹಾಲು ಉತ್ಪಾದಕರಿದ್ದು, ನಿತ್ಯ ಎರಡು ಬಾರಿ ಡೈರಿಗೆ ಹಾಲು ಹಾಕಬೇಕು. ಆದರೆ, ತುಂಬಿ ಹರಿಯುತ್ತಿರುವ ಕಾಲುವೆ ದಾಟಲಾಗದೇ ಹಾಲು ವ್ಯರ್ಥವಾಗುತ್ತಿದೆ. ಮತ್ತೆ ಕೆಲವರು ಜೀವದ ಹಂಗು ತೊರೆದು ಹಾಲಿನ ಕ್ಯಾನ್ ಜೊತೆ ಕಾಲುವೆ ದಾಟಿ ಡೈರಿಗೆ ಹಾಲು ಹಾಕಿ ಬರುತ್ತಿದ್ದಾರೆ.

ಇದನ್ನೂ ಓದಿ: ಮುಳುಗಿದ ಸೇತುವೆ ಮೇಲೆ ವಿದ್ಯಾರ್ಥಿನಿಯರು, ವಾಹನ ಸವಾರರ ಸಂಚಾರ.. ಅಪಾಯಕ್ಕೆ ಆಹ್ವಾನ

ಬರಗೂರು ಗ್ರಾಮದಿಂದ ಬರಗೂರು ಕಾಲೋನಿಗೆ ರಸ್ತೆ ಸಹ ಇಲ್ಲ. ಕಾಲು ದಾರಿಯಲ್ಲಿಯೇ ಜನರು ಓಡಾಡುತ್ತಿದ್ದಾರೆ. ರಸ್ತೆ ಮತ್ತು ಸೇತುವೆ ಮಾಡಿಸುವಂತೆ ಜಿಲ್ಲಾಧಿಕಾರಿ ಸೇರಿದಂತೆ ಹಲವರಿಗೆ ಮನವಿ ಮಾಡಲಾಗಿದೆ. ಆದರೆ, ಕಾಲೋನಿ ಜನರ ಕಷ್ಟ ಮಾತ್ರ ಯಾವ ಅಧಿಕಾರಿಯ ಹೃದಯಕ್ಕೆ ತಟ್ಟಿಲ್ಲ. ಹೀಗಾಗಿ, ಕೂಡಲೇ ಸಂಬಂಧಪಟ್ಟವರು ಇತ್ತ ಗಮನ ಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ವಿಜಯಪುರದಲ್ಲಿ ಭಾರಿ ಮಳೆ : ಕೊಚ್ಚಿಕೊಂಡು ಹೋದ ಸೇತುವೆ

Last Updated : Oct 20, 2022, 12:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.