ETV Bharat / state

ಕೆಐಎ ಪಕ್ಕವಿದ್ರೂ ಕೊರೊನಾ ಮುಕ್ತ ಜಿಲ್ಲೆಯಾಗುವತ್ತ ಬೆಂಗಳೂರು ಗ್ರಾಮಾಂತರ .. - Corona free

ಒಂದೇ ಒಂದು ಕೊರೊನಾ ಪಾಸಿಟಿವ್‌ ಪತ್ತೆಯಾಗದಿರೋದ್ರಲ್ಲಿ ಜಿಲ್ಲಾಧಿಕಾರಿ ಪಿ ಎಸ್‌ ರವೀಂದ್ರ, ಎಸ್ಪಿ ರವಿ ಡಿ. ಚನ್ನಣ್ಣನವರ್ ಹಾಗೂ ಆರೋಗ್ಯ ಇಲಾಖೆಯ ಶ್ರಮ ಇದರಲ್ಲಿ ಎದ್ದು ಕಾಣುತ್ತಿದೆ.

ಕೊರೊನಾ ಮುಕ್ತ ಜಿಲ್ಲೆಯತ್ತ ಬೆಂಗಳೂರು ಗ್ರಾಮಾಂತರ

author img

By

Published : Apr 5, 2020, 5:57 PM IST

ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಂದೇ ಒಂದು ಕೊರೊನಾ ಪಾಸಿಟಿವ್​​ ಪತ್ತೆಯಾಗಿಲ್ಲ. ಭಾರತದಲ್ಲಿ 3374, ಕರ್ನಾಟಕದಲ್ಲಿ 144 ಕೊರೊನಾ ಸೋಂಕಿತರಿದ್ದಾರೆ. ಆದರೆ, ಈವರೆಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಂದೇ ಒಂದು ಕೊರೊನಾ ಪಾಸಿಟಿವ್​​ ಪತ್ತೆಯಾಗಿಲ್ಲ. ಬೆಂಗಳೂರು ಮಹಾನಗರಕ್ಕೆ ಅಂಟಿಕೊಂಡೇ ಇರುವ ಬೆಂ. ಗ್ರಾಮಾಂತರ ಜಿಲ್ಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನವಿದ್ರೂ ಕೊರೊನಾ ಸೋಂಕಿತರಿಲ್ಲದಿರೋದ್ರಿಂದ ಜನರ ಆತಂಕ ದೂರಾಗಿಸಿದೆ.

ಇಲ್ಲಿ 194 ಶಂಕಿತರನ್ನ ತಪಸಾಣೆಗೊಳಪಡಿಸಲಾಗಿದೆ. ಅದರಲ್ಲಿ 186 ಶಂಕಿತರನ್ನ 14 ದಿನಗಳ ಹೋಂ ಕ್ವಾರಂಟೈನ್‌ಗೊಳಪಡಿಸಿದೆ. 8 ಶಂಕಿತರನ್ನ ಆಸ್ಪತ್ರೆಯ ಕ್ವಾರಂಟೈನ್​​ಗೆ ಒಳಪಡಿಸಲಾಗಿದೆ. ಈಗಾಗಲೇ 55 ಜನ 14 ದಿನಗಳ ಹೋಂ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ. 139 ಜನರ ಮೇಲೆ ನಿಗಾ ಇರಿಸಲಾಗಿದೆ. ಜಿಲ್ಲಾಧಿಕಾರಿ ಪಿ ಎಸ್‌ ರವೀಂದ್ರ, ಎಸ್ಪಿ ರವಿ ಡಿ. ಚನ್ನಣ್ಣನವರ್, ಆರೋಗ್ಯ ಇಲಾಖೆಯ ಶ್ರಮ ಇದರಲ್ಲಿ ಎದ್ದು ಕಾಣುತ್ತಿದೆ. ಸ್ಥಳೀಯ ಸಂಸದರು ಜಿಲ್ಲಾಡಳಿತದ ಈ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.