ದೊಡ್ಡಬಳ್ಳಾಪುರ: ಮಳೆ ಬಾರದೆ 20 ವರ್ಷಗಳಿಂದ ಬರಿದಾಗಿದ್ದ ಜಿಲ್ಲೆಯ ಕೊನಘಟ್ಟ ಕೆರೆ ತುಂಬಿ ಕೋಡಿಬಿದ್ದಿದ್ದು, ಕಂದಾಯ ಸಚಿವ ಆರ್. ಅಶೋಕ್ ಬಾಗಿನ ಅರ್ಪಿಸಿದರು.
ಕೊನಘಟ್ಟ ಕೆರೆಯ ದಂಡೆಯ ಮೇಲಿನ ಗ್ರಾಮದೇವತೆ ಮಾರ್ಗಾದಾಂಬ ದೇವಿಗೆ ಪೂಜೆ ಸಲ್ಲಿಸಿ, ಎರಡು ದಶಕಗಳ ನಂತರ ತುಂಬಿ ತುಳುಕುತ್ತಿರುವ ಕೆರೆಗೆ ಸಚಿವರು ಬಾಗಿನ ಅರ್ಪಿಸಿದರು. ಈ ವೇಳೆ ಸಂಭ್ರಮದಲ್ಲಿ ಭಾಗಿಯಾಗಿದ್ದ ಗ್ರಾಮಸ್ಥರ ಸಂತೋಷಕ್ಕೆ ಪಾರವೇ ಇರಲಿಲ್ಲ.
ಸಹಜವಾಗಿ ಪ್ರತಿವರ್ಷ ಜಾತ್ರೆ ವೇಳೆ ಗ್ರಾಮ ದೇವತೆಗೆ ಆರತಿ ಬೆಳಗುತ್ತಿದ್ದ ಗ್ರಾಮದ ಮಹಿಳೆಯರು, ಕೆರೆ ತುಂಬಿದ ಖುಷಿಯಲ್ಲಿ ಗಂಗೆಗೆ ತಂಬಿಟ್ಟು ಆರತಿ ಬೆಳಗಿ, ನಮಿಸಿದರು.
ಇನ್ನು ಕಾರ್ಯಕ್ರಮದಲ್ಲಿ ಕಂದಾಯ ಸಚಿವರೊಂದಿಗೆ ಉಸ್ತುವಾರಿ ಸಚಿವ ಆರ್. ಅಶೋಕ್, ಸಂಸದ ಬಿ ಎನ್ ಬಚ್ಚೇಗೌಡ ಭಾಗಿಯಾಗಿ ಕೆರೆಗೆ ಬಾಗಿನ ಅರ್ಪಿಸಿದರು.