ನೆಲಮಂಗಲ: ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನಿಮಾ, ಪಟ್ಟಣದ ರೂಪಾ ಥಿಯೇಟರ್ನಲ್ಲಿ ಪ್ರದರ್ಶನಗೊಳ್ಳುವ ವೇಳೆ ಆಡಿಯೋ ಬಂದ್ ಆಗಿತ್ತು. ಇದರಿಂದ ಅಕ್ರೋಶಗೊಂಡ ಪೇಕ್ಷಕರು ಟಿಕೆಟ್ ಹಣ ವಾಪಸ್ ನೀಡುವಂತೆ ಒತ್ತಾಯಿಸಿದರು. ಆದ್ರೆ ಥಿಯೇಟರ್ ಸಿಬ್ಬಂದಿಯು ಇದಕ್ಕೊಪ್ಪಲಿಲ್ಲ.
ಇದರಿಂದ ಥಿಯೇಟರ್ ಸಿಬ್ಬಂದಿ ಮತ್ತು ಪೇಕ್ಷಕರ ನಡುವೆ ಗಲಾಟೆ ನಡೆದಿದೆ. ಹೊಸ ವರ್ಷದ ಪ್ರಯುಕ್ತ ಸಾಕಷ್ಟು ಸಂಖ್ಯೆಯಲ್ಲಿ ಪೇಕ್ಷಕರು ಚಿತ್ರ ವೀಕ್ಷಿಸಲು ಬಂದಿದ್ದರು. ಕೊನೆಗೆ ಹಣವು ಇಲ್ಲದೇ ಸಿನಿಮಾ ನೋಡಲು ಆಗದೆ ನಿರಾಸೆಯಿಂದ ಮನೆಗೆ ತೆರಳಿದ್ರು.