ಆನೇಕಲ್: ಹೊಸಕೋಟೆ ತಾಲೂಕಿನ ತಿರುರಂಗ ಗ್ರಾಮದ ಬಳಿ ಆನೆಗಳ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ.
ಅಣ್ಣಯಪ್ಪ(50) ಮೃತ. ಕಳೆದ ಮೂರು ದಿನಗಳಿಂದ ಸರ್ಜಾಪುರದ ಮಟ್ಟನ ಹಳ್ಳಿ ಬಳಿ ಆನೆಗಳೆರೆಡು ಬೀಡು ಬಿಟ್ಟಿದ್ದವು. ಇದು ಆನೆಗಳಿಗೆ ಇದು ಏಳನೇ ಬಲಿಯಾಗಿದ್ದು, ಐದು ಆನೆಗಳು ತಮಿಳುನಾಡಿನ ಕಾಡಿಂದ ಬಂದಿದ್ದವು. ಈ ಹಿಂಡಿನಿಂದ ಎರಡು ಆನೆಗಳು ಬೇರ್ಪಟ್ಟು ಇದೀಗ ಏಳನೇ ಬಲಿ ಪಡೆದಿವೆ.
ಈ ಸಂಬಂಧ ಆದಗೊಂಡನಹಳ್ಳಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.