ETV Bharat / state

ದೊಡ್ಡಬಳ್ಳಾಪುರದಲ್ಲಿ ಗೋಲ್​ಗುಂಬಜ್​ ಮಾದರಿಯ ವಿಶೇಷ ಅಂಗನವಾಡಿ ನಿರ್ಮಾಣ.. ಎಜಾಕ್ಸ್​ ಕಂಪನಿ ಸಹಕಾರ - etv bharat kannada

ಗೋಲ್​ಗುಂಬಜ್​ ಮಾದರಿಯ ಅಂಗನವಾಡಿ ನಿರ್ಮಾಣ- ಎಜಾಕ್ಸ್​ ಕಂಪನಿಯಿಂದ ಸ್ಥಾಪನೆ- ವಿಶೇಷ ಬಾಲವಾಡಿ ಉದ್ಘಾಟಿಸಿದ ಜಿಲ್ಲಾಧಿಕಾರಿ ಆರ್​ ಲತಾ

anganavadi
ಅಂಗನವಾಡಿ
author img

By

Published : Jan 7, 2023, 9:18 AM IST

Updated : Jan 7, 2023, 9:42 AM IST

ದೊಡ್ಡಬಳ್ಳಾಪುರ(ಬೆಂ.ಗ್ರಾ): ಗೋಲ್​ಗುಂಬಜ್​ ಮಾದರಿಯ ವಿಶೇಷ ಅಂಗನವಾಡಿ ಕೇಂದ್ರವನ್ನು ದೊಡ್ಡಬಳ್ಳಾಪುರದ ತಿಮ್ಮಸಂದ್ರ ಗ್ರಾಮದಲ್ಲಿ ನಿರ್ಮಾಣ ಮಾಡಲಾಗಿದೆ. ಇಲ್ಲಿನ ಎಜಾಕ್ಸ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಸಿಎಸ್‌ಆರ್ ಅನುದಾನದಲ್ಲಿ ವಿನೂತನ ಅಂಗನವಾಡಿ ಕಟ್ಟಡ ಮತ್ತು ಸರ್ಕಾರಿ ಪ್ರಾಥಮಿಕ ಪಾಠ ಶಾಲಾ ಕೊಠಡಿಯನ್ನು ನಿರ್ಮಿಸಿದ್ದಾರೆ. ಈ ನೂತನ ಕಟ್ಟಡವು ಡೂಮ್​ ಮಾದರಿಯಲ್ಲಿದ್ದು, ಆಹ್ಲಾದಕರ ವಾತಾವರಣದಿಂದ ಕೂಡಿದೆ. ಮಕ್ಕಳಿಗೆ ಕಲಿಯಲು ಪೂರಕವಾದ ಎಲ್ಲಾ ಅವಕಾಶಗಳನ್ನು ಇಲ್ಲಿ ಕಲ್ಪಿಸಲಾಗಿದೆ.

ಈ ವಿಶೇಷ ಅಂಗನವಾಡಿ ಕೇಂದ್ರವನ್ನು ಜಿಲ್ಲಾಧಿಕಾರಿ ಆರ್​ ಲತಾ ಶುಕ್ರವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮಕ್ಕಳ ಕಲಿಕೆಯ ಬುನಾದಿಗೆ ಅಂಗನವಾಡಿಗಳೇ ಪೂರಕವಾಗಿರುವುದರಿಂದ ಇವುಗಳ ಮೂಲ ಸೌಕರ್ಯಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು. ಎಜಾಕ್ಸ್ ಕಂಪನಿಯು ಸಾಮಾಜಿಕವಾಗಿ ಉತ್ತಮವಾದ ಕಾರ್ಯವನ್ನು ನಿರ್ವಹಿಸುತ್ತಿದೆ. ಕಂಪನಿಯವರು ನೀಡಿರುವ ಈ ಕಟ್ಟಡವನ್ನು ಶಾಲೆಯ ಶಿಕ್ಷಕರು ಹಾಗೂ ಗ್ರಾಮಸ್ಥರು ಸರಿಯಾದ ರೀತಿಯಲ್ಲಿ ನಿರ್ವಹಿಸಿ, ಮತ್ತಷ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕಾಪಾಡಿಕೊಳ್ಳಿ. ಮಕ್ಕಳು ಸಮಾಜದಲ್ಲಿ ಉತ್ತಮ ನಾಗರಿಕನಾಗಲು ಪೋಷಕರು ಮಾನವೀಯ ಮೌಲ್ಯಗಳನ್ನು ಬಾಲ್ಯದಲ್ಲೇ ಕಲಿಸಿ ಎಂದು ಸಲಹೆ ನೀಡಿದರು.

ಬಳಿಕ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಟಿ ವೆಂಕಟರಾಮಣಯ್ಯ ಮಾತನಾಡಿ, ಎಜಾಕ್ಸ್ ಕಂಪನಿಯು ಸಾಮಾಜಿಕ ಜವಾಬ್ದಾರಿಯಿಂದ ನೂತನ ಕಟ್ಟಡವನ್ನು ನಿರ್ಮಿಸಿರುವುದು ನಿಜಕ್ಕೂ ಶ್ಲಾಘನೀಯ. ಕೋವಿಡ್​ ಸಮಯದಲ್ಲಿ ಮೂರೂವರೆ ಕೋಟಿ ವೆಚ್ಚದ ಮೇಕ್ ಶಿಫ್ಟ್ ಆಸ್ಪತ್ರೆಯನ್ನು ನಿರ್ಮಿಸಿಕೊಟ್ಟಿದ್ದಾರೆ. ಇದೇ ರೀತಿ ಗ್ರಾಮೀಣ ಪ್ರದೇಶಗಳಿಗೆ ಸಹಾಯ ನೀಡುವ ತಮ್ಮ ಸಾಮಾಜಿಕ ಕಾರ್ಯ ಮುಂದುವರೆಯಲಿ ಎಂದರು.

ಇದನ್ನೂ ಓದಿ: 4,244 ಅಂಗನವಾಡಿ ತೆರೆಯಲು ಆಡಳಿತಾತ್ಮಕ ಅನುಮೋದನೆ; ಕಟ್ಟಡ ಗುರುತಿಸಲು ಸೂಚನೆ

ಕಾರ್ಯಕ್ರಮದಲ್ಲಿ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನಟರಾಜ್, ದೊಡ್ಡಬಳ್ಳಾಪುರ ತಹಶೀಲ್ದಾರ್ ಮೋಹನ್ ಕುಮಾರಿ, ಸಿಡಿಪಿಓ ಅನಿತಾಕುಮಾರಿ, ಅಜಾಕ್ಸ್ ಕಂಪನಿಯ ಎಚ್​ಆರ್​ ಗಣಪತಿ, ಸಿಎಸ್ಆರ್ ಅಧಿಕಾರಿ ಮಂಜುನಾಥ್ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.

anganavadi
ಗೋಲ್​ಗುಂಬಜ್​ ಮಾದರಿಯ ವಿಶೇಷ ಅಂಗನವಾಡಿ

ರಾಜ್ಯದಲ್ಲಿ ಮಾದರಿ ಅಂಗನವಾಡಿಗಳು ಹೆಚ್ಚಲಿ: ರಾಜ್ಯದಲ್ಲಿ ಇಂದಿಗೂ ಕೆಲವು ಅಂಗನವಾಡಿ ಕೇಂದ್ರಗಳು ಜೋಪಡಿ, ಪಡಸಾಲೆ, ಪಾಳುಬಿದ್ದ ಕಟ್ಟಡಗಳಲ್ಲಿ ನಡೆಯುತ್ತಿವೆ‌. ಎಲ್ಲ ಕಡೆಗೆ ಇಂತಹ ಪೂರಕ ವಾತಾವರಣ ಸಿಕ್ಕರೆ ಬದಲಾದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಭವಿಷ್ಯವು ಉಜ್ವಲ ಆಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಇಂತಹ ಅಂಗನವಾಡಿ ನಿರ್ಮಿಸಲು ಹೆಚ್ಚು ಒತ್ತು ನೀಡಬೇಕಿದೆ.

ಕಲಬುರಗಿಯಲ್ಲಿ ಹೈಟೆಕ್​ ಅಂಗನವಾಡಿ: ಕಲಬುರಗಿ ತಾಲೂಕಿನ ನಂದಿಕೂರ್ ಗ್ರಾಮದಲ್ಲಿ ಹೈಟೆಕ್​ ಅಂಗನವಾಡಿಯನ್ನು ಸ್ಥಾಪಿಸಲಾಗಿದೆ. ಕೇಂದ್ರದ ಒಳಗಿನ ಗೋಡೆಯಲ್ಲಿ ಕನ್ನಡ, ಇಂಗ್ಲಿಷ್ ಅಕ್ಷರಗಳ ವರ್ಣಮಾಲೆ, ಮೇಲ್ಚಾವಣಿಗೆ ಸೌರಮಂಡಲ, ಕಾಮನಬಿಲ್ಲು ಕಣ್ಮನ ಸೆಳೆಯುತ್ತದೆ. ಅಚ್ಚುಕಟ್ಟಾದ ಪುಟ್ಟ ಕಟ್ಟಡ, ಗೋಡೆಗೆ ವರ್ಣರಂಜಿತ ಬಣ್ಣ, ಆಕರ್ಷಕ ಪ್ರಾಣಿ, ಪಕ್ಷಿ, ಚೋಟಾ ಭೀಮ್‌ ನಂತಹ ಮನಮೋಹಕ ಚಿತ್ರಗಳು, ಇಲ್ಲಿನ ಪುಟ್ಟ ಪುಟ್ಟ ಮಕ್ಕಳನ್ನು ನೋಡಿದರೆ ಈ ಹೈಟೆಕ್ ಅಂಗನವಾಡಿ ಕೇಂದ್ರ ಖಾಸಗಿ ಕಾನ್ವೆಂಟ್‌‌ಗೆ ಸೆಡ್ಡು ಹೊಡೆಯುವಂತಿದೆ.

ಇಲ್ಲಿಗೆ ಬರುವ ಮಕ್ಕಳನ್ನು ಅಂಗನವಾಡಿ ಕಾರ್ಯಕರ್ತೆ ತಮ್ಮ ಸ್ವಂತ ಮಕ್ಕಳಂತೆ ಕಾಣುತ್ತಾರೆ. ಒಳ್ಳೆಯ ಆಟ, ಪಾಠ ಮಾಡಿಸುವುದಲ್ಲದೇ ಪೌಷ್ಟಿಕಾಶವುಳ್ಳ ಬಿಸಿ ಬಿಸಿ ಊಟವನ್ನು ಕೊಡುತ್ತಾರೆ. ಊಟಕ್ಕೂ ಮುನ್ನ ಓಂ ಅಸತೋಮ ಶಾಂತಿ ಪಠಣ ಮಾಡಿಸ್ತಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಖಾಸಗಿ ಪ್ಲೇಹೋಮ್‌ಗೆ ಇಲ್ಲಿನ ಅಂಗನವಾಡಿ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲ. ಇಂತಹ ಅಂಗನವಾಡಿಗಳೂ ರಾಜ್ಯದಲ್ಲಿ ಎಲ್ಲಾ ಕಡೆಗಳಲ್ಲೂ ನಿರ್ಮಾಣವಾಗಬೇಕಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ವಿಶ್ವದ ಮೊದಲ ಮಾಂಟೆಸ್ಸರಿ ಸ್ಕೂಲ್ ಆನ್ ವ್ಹೀಲ್ಸ್ ಆರಂಭ: ಇನ್ಮೇಲೆ ಮನೆ ಬಾಗಿಲಿಗೆ ಅಂಗನವಾಡಿ ಶಿಕ್ಷಣ

Last Updated : Jan 7, 2023, 9:42 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.