ETV Bharat / state

ಗೆಳತಿಯನ್ನು ತನ್ನ ರೂಮಿಗೆ ಕರೆಯಿಸು ಎಂದವನ ಪ್ರಾಣವನ್ನೇ ತೆಗೆದ ಸ್ನೇಹಿತ! - Bangalore Crime News

ಗೆಳೆಯನ ಮೊಬೈಲ್​​​ನಲ್ಲಿದ್ದ ಆತನ ಸ್ನೇಹಿತೆಯನ್ನು ರೂಮಿಗೆ ಕರೆಸುವಂತೆ ಅಸಭ್ಯವಾಗಿ ಆಕೆಯ ಕುರಿತು ಮಾತನಾಡುತ್ತಿದ್ದ ಸ್ನೇಹಿತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಈ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

friend-murdered-his-friend-in-doddaballapur
ಗೆಳತಿಯನ್ನು ರೂಮಿಗೆ ಕರೆಯಿಸು ಎಂದವನ ಚಾಕುವಿನಿಂದ ಇರಿದು ಕೊಂದ ಸ್ನೇಹಿತ
author img

By

Published : Oct 19, 2020, 7:45 PM IST

ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಸ್ನೇಹಿತನ ಮೊಬೈಲ್​​ನಲ್ಲಿದ್ದ ಆತನ ಗೆಳತಿಯ ಫೋಟೋ ನೋಡಿ ಆಕೆಯನ್ನು ಮನೆಗೆ ಕರೆಸು ಎಂದಿದ್ದಕ್ಕೆ ಕೋಪಗೊಂಡ ಸ್ನೇಹಿತ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಇಲ್ಲಿನ ಜನತಾ ಕಾಲೋನಿಯಲ್ಲಿ ನಡೆದಿದೆ.

ಸಂಜಯ್ ಕುಮಾರ್ (34) ಕೊಲೆಯಾಗಿದ್ದು, ಆರೋಪಿ ನಂದನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಗೆಳತಿಯನ್ನು ರೂಮಿಗೆ ಕರೆಯಿಸು ಎಂದವನನ್ನು ಚಾಕುವಿನಿಂದ ಇರಿದು ಕೊಂದ ಸ್ನೇಹಿತ

ಘಟನೆ ಹಿನ್ನೆಲೆ:

ಇಲ್ಲಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಎಲ್​​​ಟಿಸಿ ಟ್ರಾನ್ಸ್​​ಪೋರ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹರಿಯಾಣ ಮೂಲದ ಸಂಜಯ್ ಕುಮಾರ್, ಜನತಾ ಕಾಲೋನಿಯಲ್ಲಿ ಬಾಡಿಗೆ ರೂಮ್ ಮಾಡಿಕೊಂಡಿದ್ದ. ಪೆಟ್ರೋಲ್ ಬಂಕ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸ್ನೇಹಿತ ನಂದನ್​ ಸಹ ಸಂಜಯ್ ರೂಮಿಗೆ ಬಂದು ಹೋಗುತ್ತಿದ್ದ.

ಈ ವೇಳೆ ಖರ್ಚಿಗೆ ಹಣ ಇಲ್ಲದಾಗ ಸಂಜಯ್ ಬಳಿ ತನ್ನ ಮೊಬೈಲ್ ಕೊಟ್ಟು 4 ಸಾವಿರ ರೂಪಾಯಿ ಪಡೆದುಕೊಂಡಿದ್ದ. ಮೊಬೈಲ್​ನಲ್ಲಿ ನಂದನ್​ ಗೆಳತಿಯ ಫೋಟೋ ನೋಡಿದ್ದ ಸಂಜಯ್ ಆಕೆಯನ್ನು ರೂಮಿಗೆ ಕರೆಯಿಸು ಎಂದು ಅಸಭ್ಯವಾಗಿ ಮಾತನಾಡುತ್ತಿದ್ದನಂತೆ.

ಬಳಿಕ ಇದೇ ವಿಚಾರವಾಗಿ ಇಬ್ಬರಲ್ಲೂ ಮನಸ್ತಾಪ ಉಂಟಾಗಿದ್ದು, ತನ್ನ ಮೊಬೈಲ್ ಹಿಂದಿರುಗಿಸುವಂತೆ ನಂದನ್ ಕೇಳಿಕೊಂಡಿದ್ದ. ಇದಕ್ಕೆ ಹಣ ಮರಳಿ ನೀಡಿದರೆ ಮಾತ್ರ ಮೊಬೈಲ್ ನೀಡುವುದಾಗಿ ಸಂಜಯ್ ತಿಳಿಸಿದ್ದ. ಇದರಿಂದ ಬೇರೊಬ್ಬ ಸ್ನೇಹಿತನಿಂದ 4 ಸಾವಿರ ಸಾಲ ಪಡೆದು ಸಂಜಯ್​ಗೆ ನೀಡಿ ತನ್ನ ಮೊಬೈಲ್ ಹಿಂದಕ್ಕೆ ಪಡೆದಿದ್ದ.

ಇದಾದ ಬಳಿಕ ಅ.9ರಂದು ರೂಮಿಗೆ ಬಂದಾಗ ಕಂಠಪೂರ್ತಿ ಕುಡಿದಿದ್ದ ಸಂಜಯ್​​​, ಆ ಹುಡುಗಿಯನ್ನು ರೂಮಿಗೆ ಕರೆಸುವಂತೆ ಅಸಭ್ಯ ಪದ ಬಳಸಿ ಮಾತನಾಡಿದ್ದಾನೆ ಎನ್ನಲಾಗ್ತಿದೆ. ಇದರಿಂದ ಕೋಪಗೊಂಡಿದ್ದ ನಂದನ್​ ಮಧ್ಯರಾತ್ರಿ ಚಾಕುವಿನಿಂದ ಇರಿದು ಅಲ್ಲಿಂದ ಪರಾರಿಯಾಗಿದ್ದಾನೆ.

ಬಳಿಕ ಸಂಜಯ್ ಪ್ರಾಣ ಉಳಿಸಿಕೊಳ್ಳಲು ರಸ್ತೆಗೆ ಬಂದು ಗೋಳಾಡಿದ್ದು, ಸ್ಥಳೀಯರು ಆ್ಯಂಬುಲೆನ್ಸ್​ಗೆ ಕರೆ ಮಾಡಿದ್ದಾರೆ. ಆದರೆ ಮಾರ್ಗಮಧ್ಯೆಯೇ ಸಂಜಯ್ ಸಾವನ್ನಪ್ಪಿದ್ದಾನೆ. ಇನ್ನು ಘಟನೆ ಸಂಬಂಧ ದೊಡ್ಡಬಳ್ಳಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ನಂದನ್​ ಅನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.